ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಅಧಿಸೂಚನೆ ಆಗಿಲ್ಲ, ಮೇಕೆದಾಟು, ಮಹದಾಯಿ ಸೇರಿ ಎಲ್ಲ ನೀರಾವರಿ ಯೋಜನೆಗಳ ಬಗ್ಗೆ ಸರ್ವಪಕ್ಷ ನಿಯೋಗದೊಂದಿಗೆ ಪ್ರಧಾನಿ ಹಾಗೂ ಕೇಂದ್ರ ಜಲಸಂಪನ್ಮೂಲ ಸಚಿವರ ಭೇಟಿ ಮಾಡಿ ವಸ್ತುಸ್ಥಿತಿ ಮನವರಿಕೆ ಮಾಡಿಕೊಡಲು ಪ್ರಸ್ತಾಪಿಸಿದ್ದೇವೆ. ಎಲ್ಲ ಜಲ ವಿವಾದಗಳಲ್ಲಿ ಕೇಂದ್ರ ಸರ್ಕಾರವೂ ಪ್ರತಿವಾದಿ ಆಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.ಸರ್ವಪಕ್ಷ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹದಾಯಿ ಯೋಜನೆಗೆ ಅರಣ್ಯ, ಪರಿಸರ ತೀರುವಳಿ ಸಿಕ್ಕಿಲ್ಲ. ಕೃಷ್ಣಾ ಮೇಲ್ದಂಡೆಗೆ ಅಧಿಸೂಚನೆ ಹೊರಡಿಸಬೇಕಿದೆ. ಎಲ್ಲವನ್ನೂ ಕೇಂದ್ರದ ಗಮನಕ್ಕೆ ತರಬೇಕಿದೆ. ಸರ್ವಪಕ್ಷ ನಿಯೋಗ ಒಯ್ಯಲು ಚರ್ಚಿಸಿದ್ದೇವೆ ಎಂದರು.ಕಾವೇರಿ ಜಲವಿವಾದ ಬಗ್ಗೆ, ಮೇಕೆದಾಟು, ಮಹದಾಯಿ ಯೋಜನೆಗಳ ಬಗ್ಗೆ ಒಟ್ಟಾರೆ ಜಲವಿವಾದಗಳ ಬಗ್ಗೆ ಸರ್ವಪಕ್ಷಗಳ ಸಭೆ ಕರೆಯಲಾಗಿತ್ತು. ಜಲ ವಿವಾದ ಸಂಬಂಧ ಸರ್ವಪಕ್ಷಗಳ ಸಲಹೆ ಪಡೆದಿದ್ದೇವೆ. ಸಮರ್ಥ ವಾದ ಮಂಡಿಸಲು ಹೇಳಿದ್ದಾರೆ. ಕಾನೂನು ತಂಡಕ್ಕೆ ಈ ಬಗ್ಗೆ ಸೂಚಿಸಿದ್ದೇವೆ ಎಂದು ಹೇಳಿದರು.ಕರ್ನಾಟಕ ರಾಜ್ಯ ಎದುರಿಸುತ್ತಿರುವ ಸಂಕಷ್ಟದ ಪರಿಸ್ಥಿತಿಯನ್ನು, ವಸ್ತುಸ್ಥಿತಿಯನ್ನು ಜಲಸಂಪನ್ಮೂಲ ಸಚಿವ ಡಿಕೆಶಿ ವಿವರಿಸಿದರು. ನಂತರ ಕಾತರಕಿ ಹಾಗೂ ಎಜಿ ಅವರು ಕಾನೂನಿನ ದೃಷ್ಟಿಯಿಂದ ಆಗಿರುವ ಪ್ರಕ್ರಿಯೆಗಳನ್ನು ಪ್ರಸ್ತಾಪಿಸಿದರು. ಮಾಜಿ ಸಿಎಂಗಳು ಅವರವರ ಅಭಿಪ್ರಾಯ ತಿಳಿಸಿದರು ಎಂದು ಸಭೆ ಕುರಿತು ವಿವರಣೆ ನೀಡಿದರು.ಎಲ್ಲರದ್ದೂ ಒಟ್ಟಭಿಪ್ರಾಯ- ಜಲ, ಭಾಷೆ, ಗಡಿ ವಿವಾದಗಳ ಬಗ್ಗೆಯಾಗಲೀ ಚರ್ಚೆ ಬಂದಾಗ, ಅವುಗಳ ಬಗ್ಗೆ ರಾಜ್ಯದ ನಿಲುವು ತೆಗೆದುಕೊಳ್ಳುವಾಗ ಯಾವುದೇ ರಾಜಕೀಯ ಮಾಡಿಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ನಾಡಿನ, ಜನರ ಹಿತದೃಷ್ಟಿಯಿಂದ ಸರ್ಕಾರ ತೆಗೆದುಕೊಳ್ಳುವ ನಿಲುಗಳಿಗೆ ಬೆಂಬಲ ವ್ಯಕ್ತ ಮಾಡಿದರು ಎಂದು ಹೇಳಿದರು.ಐದಾರು ವರ್ಷಕ್ಕೊಮ್ಮೆ ಕರ್ನಾಟಕದಲ್ಲಿ ಸಂಕಷ್ಟ ಪರಿಸ್ಥಿತಿ ಬರುತ್ತದೆ. ಇಂತಹ ಸಂದರ್ಭದಲ್ಲಿ ನೀರು ಬಿಡಕ್ಕಾಗಲ್ಲ ಅಂತ ಪ್ರಾಧಿಕಾರ, ಸಮಿತಿ ಮುಂದೆ ಹೇಳುತ್ತಲೇ ಬಂದಿದ್ದೇವೆ. ರೈತರ ಬೆಳೆ ರಕ್ಷಣೆ, ಕುಡಿಯುವ ನೀರನ್ನು ಗಮನದಲ್ಲಿಟ್ಟುಕೊಂಡು ವಾದ ಮಂಡಿಸಿದ್ದೇವೆ ಎಂದ ಅವರು ತಮಿಳುನಾಡಿನವರು ಹೆಚ್ಚು ನೀರು ಬಳಸುತ್ತಿದ್ದಾರೆ. ಆದರೂ ನೀರು ಬಿಟ್ಟಿಲ್ಲ ಎನ್ನುವುದು, ಸಭಾತ್ಯಾಗ ಮಾಡುವುದೆನ್ನಲ್ಲ ಮಾಡುತ್ತಿದ್ದಾರೆ. ನಮ್ಮ ರೈತರ ಬೆಳೆ, ಕುಡಿಯುವ ನೀರು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದರು.ನ್ಯಾಯಾಧಿಕರಣ ಅಥವಾ ಸುಪ್ರಿಂಕೋರ್ಟ್‌ನಲ್ಲಿ ಸಂಕಷ್ಟ ಸೂತ್ರ ಆಗಿಲ್ಲ, ಇದಾಗಬೇಕು. ಮೇಕೆದಾಟು ಸಮತೋಲನ ಜಲಾಶಯ ಕಟ್ಟಬೇಕು. ಸಂಕಷ್ಟ ಬಂದಾಗ 67 ಟಿಎಂಸಿ ಮೇಕೆದಾಟುವಿನಲ್ಲಿ ಇರುವುದರಿಂದ ಅವರಿಗೂ ನೀರು ಕೊಡಬಹುದು. ಜಲ ಆಯೋಗ ಹೇಳಿದಂತೆ ಡಿಪಿಆರ್ ಸಲ್ಲಿಸಿದ್ದೇವೆ. 21 ರಂದು ನಾಟ್ ಮೇಂಟೇನೇಬಲ್ ಅನ್ನೋದು ನಮ್ ವಾದ ಇತ್ತು. ಹೀಗಾಗಿ ತ್ರಿಸದಸ್ಯ ಪೀಠ ಆಗಿದೆ. ವಾರಾಂತ್ಯದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ. ಸಮರ್ಥ ವಾದ ಮಾಡಬೇಕು. ಅವರ ಅರ್ಜಿ ವಜಾ ಆಗುವಂತೆ ಮಾಡಬೇಕು. ಕರ್ನಾಟಕದ ಹಿತ ಕಾಪಾಡಲು ಅಗತ್ಯ ಕ್ರಮ ತಗಬೇಕು ಅಂತ ಸೂಚಿಸಿದ್ದೇವೆ ಎಂದು ವಿವರಿಸಿದರು.
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:two × 5 =
Remember me
