ಹುಬ್ಬಳ್ಳಿ:ಸರಕು ಸಾಗಾಣಿಕೆಯು ದೇಶದ ಜೀವನಾಡಿಯಾಗಿದೆ. ದೇಶದಲ್ಲಿ ಲಾಜಿಸ್ಟಿಕ್ಸ್ ವೆಚ್ಚವು ಶೇ.12 ಇದೆ. ಮುಂದುವರಿದ ರಾಷ್ಟ್ರಗಳಲ್ಲಿ ಇದು ಶೇ.3 ಇದೆ. ಭಾರತದಲ್ಲಿ 2030ರ ವೇಳೆಗೆ ಲಾಜಿಸ್ಟಿಕ್ಸ್ ವೆಚ್ಚವನ್ನು ಶೇ.6ಕ್ಕೆ ತಗ್ಗಿಸಲು ಕೇಂದ್ರ ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ನಗರದ ಖಾಸಗಿ ಹೊಟೇಲ್​ನಲ್ಲಿ ಭಾನುವಾರ ಆಯೋಜಿಸಿದ್ದ ಹುಬ್ಬಳ್ಳಿ-ಧಾರವಾಡ ಸರಕು ಸಾಗಾಣಿಕೆದಾರರ ಮತ್ತು ಲಾರಿ ಮಾಲೀಕರ ಸಂಘದ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿನ ಒಟ್ಟು ರಸ್ತೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಮಾಣ ಶೇ. 2.7 ಇದೆ. ಅದರೆ, ಇಲ್ಲಿ ಶೇ.40 ಸಾರಿಗೆ ಸಂಚಾರವಿದೆ. 2014ರ ವೇಳೆಗೆ ದೇಶದಲ್ಲಿ 91,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ಮಾರ್ಗ ಇದ್ದವು. ಇಂದು 1. 41 ಲಕ್ಷ ಕಿ.ಮೀ.ಗೆ ತಲುಪಿದೆ. ಈ ವರ್ಷ 13,000 ಕಿ.ಮೀ. ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಗುರಿ ಹೊಂದಿದ್ದೇವೆ ಎಂದು ತಿಳಿಸಿದರು.
ಮಾಜಿ ಸಿಎಂ ಜಗದೀಶ ಶೆಟ್ಟರ್ ಮಾತನಾಡಿ, ಅಂಚಟಗೇರಿ ಬಳಿ 53 ಎಕರೆ ಕಂದಾಯ ಭೂಮಿಯಲ್ಲಿ ಟ್ರಕ್ ಟರ್ವಿುನಲ್ ನಿರ್ವಣಕ್ಕೆ ಅಡ್ಡಿಗಳು ಎದುರಾಗಿವೆ. ಆ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಟ್ರಕ್ ಟರ್ವಿುನಲ್ ನಿರ್ಮಾಣ ಮಾಡಲು ಪ್ರಯತ್ನಿಸುತ್ತೇವೆ ಎಂದರು. ಲಿಂಗೈಕ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಭಾವಚಿತ್ರಕ್ಕೆ ಗಣ್ಯರು ಪುಷ್ಪಾರ್ಪಣೆ ಮಾಡಿ, ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ವಿನಯ ಜವಳಿ, ಹಿರಿಯ ಸಾರಿಗೆ ಉದ್ಯಮಿ ಚನ್ನಾರೆಡ್ಡಿ, ಸಂಘದ ಮಾಜಿ ಅಧ್ಯಕ್ಷ ಎಸ್. ಆರ್. ಹೊಸಮನಿ, ಇತರರು ಇದ್ದರು. ಸಂಘದ ಕಾರ್ಯಾಧ್ಯಕ್ಷ ವಾಸಪ್ಪ ಕೊನರಡ್ಡಿ ಸ್ವಾಗತಿಸಿದರು. ಕಾರ್ಯದರ್ಶಿ ರವೀಂದ್ರ ಬೆಳಮಕರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮೀರ್ ವಂದಿಸಿದರು.
ಕೆಲವರು ತಾವು ಮಹಾತ್ಮಾ ಗಾಂಧೀಜಿ ಹಾಗೂ ಎಸ್. ನಿಜಲಿಂಗಪ್ಪ ಅವರ ಕಾಲದಲ್ಲಿ ಬದುಕಿದ್ದೇವು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಡಾ.ವಿಜಯ ಸಂಕೇಶ್ವರ ಅವರ ಕಾಲದಲ್ಲಿ ನಾವು ಬದುಕಿದ್ದೇವೆ ಎಂಬುದು ಪ್ರತಿ ಸಾರಿಗೆ ಉದ್ಯಮಿಗಳಿಗೆ ಹೆಮ್ಮೆ ಸಂಗತಿ. ಸಂಕೇಶ್ವರ ಅವರ ಪ್ರಾಮಾಣಿಕತೆ, ಕಠಿಣ ಪರಿಶ್ರಮ ಎಲ್ಲರಿಗೂ ಮಾದರಿ.
|ಡಾ. ಜಿ.ಆರ್. ಷಣ್ಮುಗಪ್ಪಆಲ್ ಇಂಡಿಯಾ ಮೋಟಾರ್ ಟ್ರಾನ್ಸ್​ಪೋರ್ಟ್ ಕಾಂಗ್ರೆಸ್ ಅಧ್ಯಕ್ಷ
ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಅಪಾರ ಅವಕಾಶಗಳಿದ್ದು, ಇಲ್ಲಿ ಬೆಳವಣಿಗೆಗೆ ಎಂದಿಗೂ ಹಿಂಜರಿತವಿಲ್ಲ. ಆದರೆ, ವಾಮಮಾರ್ಗದಿಂದ ಈ ಉದ್ಯಮ ವಿಸ್ತರಿಸಲು ಸಾಧ್ಯವಿಲ್ಲ ಎಂಬುದನ್ನು ಪ್ರತಿಯೊಬ್ಬರೂ ನೆನಪಿಟ್ಟುಕೊಳ್ಳಬೇಕು ಎಂದು ವಿಆರ್​ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೇಳಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕು ಸಾಗಾಣಿಕೆ ಹಾಗೂ ಸಾರಿಗೆ ಉದ್ಯಮದಲ್ಲಿ ಕಾನೂನುಬಾಹಿರ ಅಭ್ಯಾಸಗಳು, ಶಾರ್ಟ್​ಕಟ್ ಮಾರ್ಗ ಎಂದಿಗೂ ಬೇಡ. ನೇರ ವ್ಯವಹಾರ, ಹಣಕಾಸು ಶಿಸ್ತು ಹಾಗೂ ನೈತಿಕ ಮಾರ್ಗದಿಂದ ಪ್ರಗತಿ ಸಾಧಿಸಬಹುದು. ಬಹಳ ವರ್ಷಗಳ ಹಿಂದೆ ಕ್ಲೀನರ್ ಇದ್ದವರು ಇಂದು 10-20 ಸರಕು ವಾಹನಗಳ ಮಾಲೀಕರಾಗಿರುವುದನ್ನು ನೋಡಿದರೆ ಲಾಜಿಸ್ಟಿಕ್ಸ್ ಉದ್ಯಮದಲ್ಲಿ ಬೆಳವಣಿಗೆಗೆ ಅವಕಾಶ ಇದೆ ಎಂಬುದನ್ನು ಸೂಚಿಸುತ್ತದೆ. ಯಾವುದೇ ಕ್ಷೇತ್ರವಿರಲಿ, ಮತ್ತೊಬ್ಬರು ಮಾಡಿದ್ದನ್ನು ನಕಲು ಮಾಡಬೇಡಿ. ನಿಮ್ಮದೇ ಆದ ಮಾರ್ಗದಲ್ಲಿ ಸಾಗಿದರೆ ವೈಫಲ್ಯ ಹೊಂದಲು ಸಾಧ್ಯವಿಲ್ಲ ಎಂದು ಹೇಳಿದರು. ಲಾಜಿಸ್ಟಿಕ್ಸ್ ಉದ್ಯಮ ಪ್ರಾರಂಭದಲ್ಲಿ 10-12 ವರ್ಷ ತಪಸ್ಸು ಮಾಡಬೇಕಾಗುತ್ತದೆ. ನಾವು ಪ್ರಾರಂಭದಲ್ಲಿ ಎಷ್ಟು ಲಾಭ ಗಳಿಸಿದ್ದೇವೆ ಎಂಬುದು ಮುಖ್ಯವಾಗುವುದಿಲ್ಲ. ಎಷ್ಟು ಕಳೆದುಕೊಂಡಿದ್ದೇವೆ ಎಂಬುದನ್ನು ನೆನಪಿನಲ್ಲಿಟ್ಟುಕೊಂಡರೆ ಸುಧಾರಣೆಗೆ ಅವಕಾಶ ಇರುತ್ತದೆ ಎಂದು ಸಲಹೆ ನೀಡಿದರು.
ಜ್ಞಾನಯೋಗಿಯ ಬಳಿ ಪಾರಿವಾಳ; ಸಿದ್ದೇಶ್ವರ ಸ್ವಾಮಿಗಳ ಭಾವಚಿತ್ರ ಬಿಟ್ಟು ಹೋಗದ ಪಕ್ಷಿ!

ಡಾ.ಬ್ರೋ ಯಾವಾಗ ವಿದೇಶಕ್ಕೆ ಹೋಗಲ್ಲ?; ಒಂದು ದೇಶಕ್ಕೆ ಹೊರಟಾಗ ಅವರ ಅಧ್ಯಯನ ಹೇಗಿರುತ್ತೆ?; ಇಲ್ಲಿದೆ ಮಾಹಿತಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
