ವಿಲಾಸ ಮೇಲಗಿರಿ ಬೆಂಗಳೂರು
ಕರೊನಾ ಜನರಲ್ಲಿ ಭೀತಿ ಹುಟ್ಟಿಸಿದೆ. ಹಾಗಾಗಿ ಸುರಕ್ಷಿತ ವಲಯ ಹುಡುಕಿ ಹೋಗುವವರ ಸಂಖ್ಯೆ ಕೂಡ ದಿನೇದಿನೆ ಹೆಚ್ಚುತ್ತಿದೆ. ಗಡಿಭಾಗದಲ್ಲಿ ವಲಸೆ ಪ್ರಮಾಣ ಹೆಚ್ಚುತ್ತಿದ್ದು, ಇದು ಜಿಲ್ಲಾಡಳಿತಗಳಿಗೆ ದೊಡ್ಡ ತಲೆನೋವಾಗಿದೆ. ರಾಜ್ಯದ 8 ಜಿಲ್ಲೆಗಳನ್ನು ಕರೊನಾವೈರಸ್ ಹಾಟ್​ಸ್ಪಾಟ್​ಗಳೆಂದು, 11 ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಲಾಗಿದೆ. ಸೋಂಕಿನ ಯಾವುದೇ ಪ್ರಕರಣಗಳು ವರದಿಯಾಗದೆ ಇರುವ 11 ಜಿಲ್ಲೆಗಳನ್ನು ಗ್ರೀನ್ ಝೋನ್​ಗಳಾಗಿ ಘೊಷಿಸಲಾಗಿದೆ. ಈಗ ಈ ಹಸಿರು ವಲಯಗಳತ್ತ ಅನೇಕರ ದೃಷ್ಟಿ ನೆಟ್ಟಿದೆ!
ಕೆಂಪು ವಲಯದಲ್ಲಿನ ಕುಟುಂಬಗಳು ಒಂದೊಂ ದಾಗಿ ಬೇರೆಡೆಗೆ ಕಾಲು ಕೀಳಲು ಹೊಂಚು ಹಾಕಿವೆ. ಶಾಶ್ವತವಾಗಿ ನೆಲೆಯೂರಿರುವವರು ಮನೆ, ಜಮೀನು, ಸಂಬಂಧಗಳಿಂದಾಗಿ ಊರು ಬಿಡಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರೆ, ಕೆಲಸ ಅರಸಿ ಬಂದು ತಾತ್ಕಾಲಿಕವಾಗಿ ಬಿಡಾರ ಹೂಡಿದವರ ಚಿತ್ತ ಈಗ ಸುರಕ್ಷಿತ ವಲಯದತ್ತ ನೆಟ್ಟಿದೆ. ಗಡಿ ಭಾಗದಲ್ಲಿರುವವರಂತೂ ಸದ್ದುಗದ್ದಲವಿಲ್ಲದೆ ಕಾನೂನಿನ ಕಣ್ಣಿಗೂ ಕಾಣದೆ ನುಸುಳಿಕೊಳ್ಳುತ್ತಿದ್ದಾರೆ. ತವರು ಮನೆ, ಗಂಡನ ಮನೆ, ನೆಂಟರ ಮನೆ, ಹುಟ್ಟು, ಸಾವುಗಳ ನೆಪದಲ್ಲಿ ಸ್ಥಾನ ಪಲ್ಲಟವಾಗುತ್ತಿದ್ದಾರೆ. ಮನೆ, ಮನೆ ಸರ್ವೆ ಸಂದರ್ಭಗಳಲ್ಲಿ ಅಂಗನವಾಡಿ, ಆರೋಗ್ಯ ಹಾಗೂ ಆಶಾ ಕಾರ್ಯಕರ್ತೆಯರ ಕಣ್ಣಿಗೂ ಬೀಳದೆ ಕೆಲವರು ಊರಿಂದ ಊರಿಗೆ ಬಂದು ಠಿಕಾಣಿ ಹೂಡುತ್ತಿದ್ದಾರೆಂದು ಹೇಳಲಾಗುತ್ತಿದೆ. ಇದು ಹಸಿರು ವಲಯ ವಾಸಿಗಳನ್ನು ಆತಂಕಕ್ಕೆ ದೂಡಿದೆ.
ಕಾಯೋದೇ ಕಷ್ಟ!: ಕರೊನಾ ಸೋಂಕು ಲಕ್ಷಣಗಳು ಶೇ.80 ಜನರಲ್ಲಿ ಆರಂಭಿಕ ಹಂತದಲ್ಲಿ ಕಾಣಿಸುವುದೇ ಇಲ್ಲ. ಯಾರಿಗೆ ತಗುಲಿದೆ? ಯಾರಿಗೆ ಇಲ್ಲ? ಎಂಬುದು ತಿಳಿಯದ ಕಾರಣ ಊರಿಂದ ಊರಿಗೆ ಬಂದು ನೆಲೆಸುವವರು ದೊಡ್ಡ ಸವಾಲಾಗಿ ಪರಿಣಮಿಸಿದ್ದಾರೆ. ಕೆಲವರು ಜ್ವರದ ಮಾತ್ರೆ ತೆಗೆದುಕೊಂಡು ಸೋಂಕು ಮರೆಮಾಚುವ ಸಂದರ್ಭಗಳು ಉಂಟು!
ಕಾಲ್ನಡಿಗೆ, ಎತ್ತಿನಗಾಡಿ, ಬೈಕ್..: ಸರ್ಕಾರ ಎಷ್ಟೇ ಕಠಿಣ ನಿಯಮ ರೂಪಿಸಿದರೂ ದಿನಕ್ಕೆ ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ಕನಿಷ್ಟ 100-200 ಜನ ಸ್ಥಾನಪಲ್ಲಟವಾಗುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ. ಗಡಿ ಭಾಗದಲ್ಲಿ ಒಂದೂರಿನಿಂದ ಇನ್ನೊಂದು ಊರಿಗೆ ಹೋಗುವವರು ಸಮೀಪವಿದ್ದರೆ ಕಾಲ್ನಡಿಗೆ, ಸ್ವಲ್ಪ ದೂರವಿದ್ದರೆ ಕೃಷಿ ಚಟುವಟಿಕೆ ನೆಪದಲ್ಲಿ ಎತ್ತಿನಗಾಡಿ, ಇನ್ನೂ ದೂರವೆಂದಾದರೆ ಬೈಕ್​ಗಳನ್ನು ಬಳಕೆ ಮಾಡಿಕೊಂಡು ಪ್ರಯಾಣ ಬೆಳೆಸುತ್ತಾರೆ. ಗಡಿಯಲ್ಲಿ ಭದ್ರತಾ ಸಿಬ್ಬಂದಿ ಇದ್ದರೂ ಗುರುತು ಪರಿಚಯ ಕಷ್ಟ. ಕಾರಣ ಅನಾಮಿಕರೂ ಅನಾಯಸವಾಗಿ ಒಂದೂರಿಂದ ಇನ್ನೊಂದು ಊರಿಗೆ ಪ್ರಯಾಣಿಸುತ್ತಾರೆ. ಹಾಗಾಗಿ ಗಡಿಯಲ್ಲಿ ಸ್ಥಳೀಯರ ನೇಮಕ ಮಾಡುವ ಮೂಲಕ ವಲಸಿಗರ ಮೇಲೆ ನಿಗಾ ವಹಿಸುವುದು ಅವಶ್ಯ ಎನ್ನಲಾಗುತ್ತಿದೆ.
ಹಾಟ್​ಸ್ಪಾಟ್ ಗ್ರೀನ್ ಝೋನ್
ಬೆಂಗಳೂರು ನಗರ, ಮೈಸೂರು, ಬೆಳಗಾವಿ, ದಕ್ಷಿಣ ಕನ್ನಡ, ಬೀದರ್, ಕಲಬುರಗಿ, ಬಾಗಲಕೋಟೆ, ಧಾರವಾಡ ಹಾಟ್​ಸ್ಪಾಟ್ ಜಿಲ್ಲೆಗಳು. ಚಿಕ್ಕಮಗಳೂರು, ರಾಮನಗರ, ಹಾಸನ, ಹಾವೇರಿ, ಶಿವಮೊಗ್ಗ, ಚಾಮರಾಜನಗರ, ಕೋಲಾರ, ರಾಯಚೂರು, ಕೊಪ್ಪಳ, ಯಾದಗಿರಿ ಸೇರಿ 11 ಜಿಲ್ಲೆಗಳನ್ನು ಹಸಿರು ವಲಯಗಳೆಂದು ಪರಿಗಣಿಸಲಾಗಿದೆ.
ಏನು ಮಾಡಬೇಕು?
ವಲಸೆಗೆ ಸಂಪೂರ್ಣ ನಿರ್ಬಂಧ
ಗಡಿ ಭಾಗಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್
ವಲಸೆ ಬಂದವರ ಕಟ್ಟುನಿಟ್ಟಾಗಿ ಕ್ವಾರಂಟೈನ್
ವಲಸಿಗರ ಮೇಲೆ ಗ್ರಾಮ ಆರೋಗ್ಯ ಸಮಿತಿಗಳು ನಿಗಾ
ವಲಸಿಗರು ನೆಲೆಸುವ ಮನೆಯವರನ್ನೇ ಹೊಣೆಗಾರ ರನ್ನಾಗಿ ಮಾಡೋದು
ದೆಹಲಿ ಪ್ರಾಣಿಸಂಗ್ರಹಾಲಯದಲ್ಲಿ ಹೆಣ್ಣು ಹುಲಿಯ ಸಾವು; ಕರೋನಾ ಸೋಂಕಿನಿಂದ ಮೂತ್ರಪಿಂಡ ವೈಫಲ್ಯ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − nine =
Remember me
