| ಮೃತ್ಯುಂಜಯ ಕಪಗಲ್ ಬೆಂಗಳೂರು
ಅನಾವೃಷ್ಟಿಗೆ ಬೆಳೆ ನಷ್ಟ ಪರಿಹಾರ, ರೈತ ಕುಟುಂಬಗಳಿಗೆ ಜೀವನೋಪಾಯ ಪರಿಹಾರ ಭತ್ಯೆ ವಿತರಣೆ ಇನ್ನೂ ಮುಗಿದಿಲ್ಲ. ಅಷ್ಟರಲ್ಲಾಗಲೇ ರಾಜ್ಯ ಸರ್ಕಾರದ ಅಂಗಳದಲ್ಲಿ ಅತಿವೃಷ್ಟಿ, ಪ್ರವಾಹದ ಸವಾಲು ಪಟ್ಟಾಗಿ ಬಂದು ಕುಳಿತಿದೆ.
ಕಳೆದ ವರ್ಷ ಮುಂಗಾರು, ಹಿಂಗಾರು ಮಳೆ ಕೈಕೊಟ್ಟು ತ್ರಾಹಿ ತ್ರಾಹಿ ಎನ್ನುವಂತಾಗಿತ್ತು. ಆದರೆ ಈ ಬಾರಿ ಉತ್ತಮ ಮಳೆ ಬೀಳಲಾರಂಭಿಸಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ಕರಾವಳಿ, ಮಲೆನಾಡು ಪ್ರಾಂತದಲ್ಲಿ ಮಳೆ ಅಬ್ಬರ, ಕೇರಳ, ಮಹಾರಾಷ್ಟ್ರದಲ್ಲಿ ಭಾರಿ ಮಳೆಯ ಕಾರಣ ಪ್ರಮುಖ ನದಿಗಳೆಲ್ಲ ಭೋರ್ಗರೆಯುತ್ತಿವೆ. ರಾಜ್ಯದ ದಕ್ಷಿಣ ಭಾಗದಲ್ಲಿ ಕಾವೇರಿ, ಕಬಿನಿ, ಕಪಿಲಾ, ಉತ್ತರ ಭಾಗದಲ್ಲಿ ಕೃಷ್ಣಾ, ಘಟಪ್ರಭಾ, ತುಂಗಾ, ಭದ್ರಾ, ತುಂಗಭದ್ರಾ, ವರದಾ, ಭೀಮಾ ಮತ್ತಿತರ ನದಿಗಳು ಪ್ರವಾಹ ಪರಿಸ್ಥಿತಿಗೆ ಕಾರಣವಾಗಿವೆ. ಗಂಗಾವಳಿ ನದಿ ಅಪಾಯಮಟ್ಟ ಮೀರಿ ಹರಿದು ಶಿರೂರು ಗುಡ್ಡ ಕುಸಿತ ಏಳು ಜನರನ್ನು ಬಲಿ ಪಡೆದಿದ್ದರೆ, ನಾಪತ್ತೆಯಾದವರ ಹುಡುಕಾಟ ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.
ವಾಡಿಕೆಗಿಂತ ಹೆಚ್ಚು: ಜೂನ್, ಜುಲೈ ಎರಡು ತಿಂಗಳು ಸೇರಿ ವಾಡಿಕೆಗಿಂತ ಶೇ.26 ಮಳೆಯಾಗಿದೆ. ರಾಜ್ಯದ 31 ಜಿಲ್ಲೆಗಳ ಪೈಕಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ವಿಜಯನಗರ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ. ಬೆಳಗಾವಿ, ಬಾಗಲಕೋಟೆ, ಯಾದಗಿರಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಅತಿವೃಷ್ಟಿಗಿಂತ ನದಿಗಳ ಮಹಾಪೂರದಿಂದ ಊರುಗಳಿಗೆ ನೀರು ನುಗ್ಗಿದೆ. ಹೊಲ, ಗದ್ದೆ, ತೋಟಗಾರಿಕೆ ಬೆಳೆಗಳು ಮುಳುಗಡೆಯಾಗಿವೆ.
ಮಹಾರಾಷ್ಟ್ರದ ಕೊಯ್ನಾ ಅಣೆಕಟ್ಟೆಯಿಂದ ಹೊರ ಹರಿವು ನಿರಂತರವಾಗಿದೆ. ಇದರಿಂದಾಗಿ ಘಟಪ್ರಭಾ ನದಿ ಹರಿವು 81 ಸಾವಿರ ಕ್ಯುಸೆಕ್​ನಷ್ಟಿದ್ದು ಅಪಾಯಮಟ್ಟ ಮೀರಿದೆ. ಕೃಷ್ಣಾ ನದಿ ಹರಿವು 3 ಲಕ್ಷ ಕ್ಯುಸೆಕ್ ಆಸುಪಾಸಿನಲ್ಲಿದ್ದು, 4 ಲಕ್ಷ ಕ್ಯುಸೆಕ್ ಸಮೀಪಿಸಿದರೆ ಅಪಾಯಮಟ್ಟ ಮೀರಲಿದೆ ಎಂದು ನೈಸರ್ಗಿಕ ವಿಪತ್ತು ನಿರ್ವಹಣಾ ಕೋಶದ ಮೂಲಗಳು ಹೇಳಿವೆ. ರಾಜ್ಯದಲ್ಲಿ 2223 ಗ್ರಾಮಗಳು ಪ್ರವಾಹಕ್ಕೆ ತುತ್ತಾಗುವ ಸಾಧ್ಯತೆ ಇದೆ. 760 ತೀವ್ರ, 1003 ಮಧ್ಯಮ ಸೇರಿ 23 ಜಿಲ್ಲೆಗಳ 1763 ಹಳ್ಳಿಗಳು ಸಂಭಾವ್ಯ ಪ್ರವಾಹಪೀಡಿತ ಹಳ್ಳಿಗಳನ್ನು ಗುರುತಿಸಲಾಗಿದೆ. 64 ಕಾಳಜಿ ಕೆಂದ್ರ ತೆರೆಯಲಾಗಿದೆ. ಈವರೆಗೆ 10 ಸಾವಿರ ಜನರಿಗೆ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಕಲ್ಪಿಸಲಾಗಿದೆ. 832 ಮನೆಗಳಿಗೆ ಹಾನಿಯಾಗಿದೆ. ಸಿಡಿಲಿಗೆ 8, ಮರಗಳು ಬಿದ್ದು 6, ಮನೆ ಬಿದ್ದು 14, ನೀರಿನಲ್ಲಿ ಮುಳುಗಿ 12 ಜನ ಸೇರಿ ಒಟ್ಟು 48 ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಆಡಳಿತ, ಪ್ರತಿಪಕ್ಷ ದೌಡು:ಅತಿವೃಷ್ಟಿ, ನೆರೆ ಹಾವಳಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ ಕಳೆದ ಎರಡು ದಿನಗಳಿಂದ ಬಾಧಿತ ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದಾರೆ. ಆಯಾ ಜಿಲ್ಲೆಗಳ ಉಸ್ತುವಾರಿ ಸಚಿವರು, ಶಾಸಕರು ಸಾಥ್ ನೀಡಿ ನಷ್ಟ-ಕಷ್ಟದ ಮಾಹಿತಿಯನ್ನು ಕೃಷ್ಣಬೈರೇಗೌಡರ ಜತೆಗೆ ಹಂಚಿಕೊಳ್ಳುತ್ತಿದ್ದು, ಅಧಿಕಾರಿಗಳು ವರದಿಗಳನ್ನು ಒಪ್ಪಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಕಾರ್ಯನಿಮಿತ್ತ ದೆಹಲಿಗೆ ಹೋಗಿದ್ದರೆ, ಬಹಳಷ್ಟು ಉಸ್ತುವಾರಿ ಸಚಿವರು ಭೇಟಿ ನೀಡುತ್ತಿಲ್ಲವೆಂಬ ಟೀಕೆಗಳು ಕೇಳಿಬರುತ್ತಿವೆ. ಪ್ರತಿಪಕ್ಷ ಬಿಜೆಪಿಯ ಆರು ತಂಡಗಳು ಅತಿವೃಷ್ಟಿ ಹಾಗೂ ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ ನೀಡಿ, ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿಯೊಂದನ್ನು ಸಿದ್ಧಪಡಿಸಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಸಲ್ಲಿಸಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ಸಂತ್ರಸ್ತರ ಒತ್ತಾಯ:ಭಾರಿ ಮಳೆ, ನೆರೆ ಹಾವಳಿಗೆ ಸದ್ಯ 44 ಸಾವಿರ ಹೆಕ್ಟೇರ್​ಗೂ ಅಧಿಕ ಜಮೀನಿ ನಲ್ಲಿ ಬೆಳೆ ಹಾನಿಗೀಡಾಗಿದ್ದರೆ, 832 ಮನೆಗಳು ಕುಸಿದು ಬಿದ್ದಿವೆ. ಯಡಿಯೂರಪ್ಪ, ಬೊಮ್ಮಾಯಿ ಸರ್ಕಾರ ನೀಡಿದ ರೀತಿಯಲ್ಲಿ ಪೂರ್ಣಬಿದ್ದ ಮನೆಗಳಿಗೆ ಐದು ಲಕ್ಷ ರೂ. ಪರಿಹಾರ, ಬೆಳೆ ನಷ್ಟ ಪರಿಹಾರಕ್ಕೂ ಅದೇ ಮಾನದಂಡ ಅನ್ವಯಿಸಲು ಸರ್ಕಾರಕ್ಕೆ ಸಂತ್ರಸ್ತರು ಒತ್ತಾಯಿಸಲಾರಂಭಿಸಿದ್ದಾರೆ. ಬರಗಾಲದ ಬೆಳೆ ನಷ್ಟ, ಜೀವನೋಪಾಯ ಪರಿಹಾರ ಭತ್ಯೆ, ಮತ್ತಿತರ ಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರ್ಕಾರದ 3,454 ಕೋಟಿ ರೂ. ಸೇರಿ ಈವರೆಗೆ 4,047 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ವೆಚ್ಚ ಮಾಡಿದೆ. ಅಚ್ಚುಕಟ್ಟು ಪ್ರದೇಶದ ಕಾಲುವೆ ಭಾಗದ ಬೆಳೆ ನಷ್ಟ, ಇನ್ನೂ ಅನೇಕ ರೈತ ಕುಟುಂಬಗಳಿಗೆ ಪರಿಹಾರ ಭತ್ಯೆ ಪ್ರಗತಿಯಲ್ಲಿದ್ದು, ಇದೀಗ ಮತ್ತೊಂದು ಪ್ರಕೃತಿ ವಿಕೋಪದ ನಷ್ಟ ಭರಿಸುವ ಭಾರ ಸರ್ಕಾರದ ಹೆಗಲೇರಿದೆ.

ರಾಜ್ಯದಲ್ಲಿ ವಿಶೇಷವಾಗಿ ಪಶ್ಚಿಮಘಟ್ಟ, ಕರಾವಳಿ, ಬೆಳಗಾವಿ, ಮಹಾರಾಷ್ಟ್ರ ಗಡಿಯಲ್ಲಿ ಭಾರಿಮಳೆ, ನದಿಗಳು ಉಕ್ಕಿಹರಿಯುತ್ತಿವೆ. ಕುರ್ಚಿ ಉಳಿಸಿಕೊಳ್ಳಲು ಸಿಎಂ, ಡಿಸಿಎಂ ದೆಹಲಿಗೆ ಹೋಗಿದ್ದರೆ, ಜಿಲ್ಲಾ ಉಸ್ತುವಾರಿ ಸಚಿವರು ನಾಪತ್ತೆಯಾಗಿದ್ದಾರೆ.
| ಎ.ಎಸ್. ಪಾಟೀಲ ನಡಹಳ್ಳಿ, ಬಿಜೆಪಿ ರೈತ ಮೋರ್ಚಾ ರಾಜ್ಯಾಧ್ಯಕ್ಷ

ಹೈಕಮಾಂಡ್‌ಗೆ ಮುಡಾ, ವಾಲ್ಮೀಕಿ ಹಗರಣದ ವರದಿ ನೀಡಿದ ಸಿಎಂ, ಡಿಸಿಎಂ: ಸಭೆಯಲ್ಲಿ ಏನೇನು ಚರ್ಚೆ? ಇಲ್ಲಿದೆ ವಿವರ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:nineteen − 15 =
Remember me
