| ವಿ.ಕೆ.ರವೀಂದ್ರ ಕೊಪ್ಪಳ
ಜಲಾಶಯದಿಂದ ರಭಸವಾಗಿ ಹರಿಯುವ ನೀರಿಗೆ ಅಡ್ಡ ನಿಲ್ಲುವುದು ನೂರು ಆನೆಗಳಿಗೆ ಎದೆಯೊಡ್ಡಿ ನಿಲ್ಲುವುದಕ್ಕೆ ಸಮ! ಕೊಂಚ ಮೈಮರೆತರೂ ಪ್ರಾಣಪಕ್ಷಿಯೇ ಹಾರಿಹೋಗುವ ಇಂಥ ಕಠಿಣ ಸವಾಲೊಂದು ಈಗ ತುಂಗಭದ್ರಾ ಜಲಾಶಯದ ದುರಸ್ತಿ ಸಿಬ್ಬಂದಿಗೆ ಎದುರಾಗಿದೆ.
ಜಲಾಶಯ ನಿರ್ವಣವಾದಾಗಿನಿಂದ 33 ಕ್ರಸ್ಟ್ ಗೇಟ್​ಗಳ ಪೈಕಿ ಯಾವುದೂ ಮರುಅಳವಡಿಕೆಯಾಗಿಲ್ಲ. ಹೀಗಾಗಿ 19ನೇ ಗೇಟ್ ಏಕಾಏಕಿ ತುಂಡಾಗಿರುವುದು ಆತಂಕ ಮೂಡಿಸಿದೆ. ದಶಕಗಳ ಹಿಂದೆ ಗೇಟ್ ಸಿದ್ಧಪಡಿಸಿದ್ದ ಹೈದರಾಬಾದ್​ನ ಕನ್ನಯ್ಯ ನಾಯ್ಡು ಅವರಿಂದ ವಿನ್ಯಾಸ ತರಿಸಿಕೊಂಡಿರುವ ಸರ್ಕಾರ, ಸ್ಥಳೀಯ ಹಿಂದುಸ್ಥಾನ್ ಇಂಜಿನಿಯರಿಂಗ್ಸ್ ಹಾಗೂ ನಾರಾಯಣ ಇಂಜಿನಿಯರಿಂಗ್ಸ್​ಗೆ ಹೊಸ ಗೇಟ್ ತಯಾರಿ ಹೊಣೆ ವಹಿಸಿದೆ. ಆದರೆ ಜಲಾಶಯದಿಂದ ರಭಸವಾಗಿ ಹರಿವ ನೀರಿಗೆ ಅಡ್ಡಲಾಗಿ ಗೇಟ್ ಕೂಡಿಸುವುದು ಗಂಭೀರ ಸವಾಲು ತಂದೊಡ್ಡಿದೆ. ಮೂರು ದಿನದಿಂದ ಸ್ಥಳದಲ್ಲೇ ಬೀಡುಬಿಟ್ಟ ತಜ್ಞರು, ನೀರಾವರಿ ಅಧಿಕಾರಿಗಳು ದಂಡು ನೀರು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಒಂದು ತಿಂಗಳು ಬೇಕು:ಗೇಟ್ 60 ಅಡಿ ಉದ್ದ, 20 ಅಡಿ ಅಗಲವಿದ್ದು, 48 ಟನ್ ತೂಕ ಹೊಂದಿದೆ. 60 ಅಡಿ ಉದ್ದ, 5 ಅಡಿ ಅಗಲದ ಒಂದರಂತೆ ಐದು ಭಾಗಗಳನ್ನು ಪ್ರತ್ಯೇಕವಾಗಿ ಸಿದ್ಧಪಡಿಸಲಾಗುತ್ತಿದೆ. 16-20 ಎಂಎಂ ದಪ್ಪದ ಪ್ಲೇಟ್ ಅಳವಡಿಸಲಾಗುತ್ತಿದೆ. ಜೆಎಸ್​ಡಬ್ಲ್ಯು ಹಾಗೂ ಹುಬ್ಬಳ್ಳಿಯಿಂದ ಸ್ಟೀಲ್ ತರಿಸಲಾಗುತ್ತಿದೆ. 60-70 ಕಾರ್ವಿುಕರು ಹಗಲಿರುಳು ಕಾರ್ಯ ನಡೆಸಿದ್ದಾರೆ. ಸಂಪೂರ್ಣ ಗೇಟ್ ಸಿದ್ಧಪಡಿಸಲು ಒಂದು ತಿಂಗಳು ಬೇಕು.
ಮೂಲ ಅಳತೆಯಲ್ಲಿ ಬಿಡಿ ಭಾಗಗಳಾಗಿ ಸಿದ್ಧಪಡಿಸಿಕೊಂಡು ಒಂದೊಂದೇ ಭಾಗವನ್ನು ಅಳವಡಿಸುವ ಮೂಲಕ ನೀರಿನ ಸೋರಿಕೆ ತಡೆಗೆ ತಜ್ಞರು ಮುಂದಾಗಿದ್ದಾರೆ. ಗೇಟ್ ತಯಾರಿಕೆಗೆ ಮೂರ್ನಾಲ್ಕು ದಿನ ಹಿಡಿಯಲಿದೆ. ಅಷ್ಟರಲ್ಲಿ ಇನ್ನು 3040 ಟಿಎಂಸಿ ಅಡಿ ನೀರು ಖಾಲಿಯಾಗಲಿದೆ. ಹೀಗಾಗಿ ಜಲಾಶಯ ಅರ್ಧದಷ್ಟು ಖಾಲಿ ಆಗಲಿದೆ.
ಹಗ್ಗದ ಮೇಲಿನ ನಡಿಗೆ:ಹರಿವ ನೀರಿನಲ್ಲಿ ಎಷ್ಟು ಒತ್ತಡ ಇರಲಿದೆ ಎಂಬುದನ್ನು ಅಂದಾಜಿಸುವುದು ಕಷ್ಟದ ಕೆಲಸ. ಗೇಟ್ ಭಾರವಿದ್ದು, ಇಳಿಸಲು ಬೃಹತ್ ಕ್ರೇನ್ ಅವಶ್ಯ. ಅಷ್ಟು ದೊಡ್ಡ ಕ್ರೇನ್ ಜಲಾಶಯದ ಮೇಲ್ಭಾಗದಲ್ಲಿ ತರುವುದು, ಅದರ ಭಾರದಿಂದ ಜಲಾಶಯಕ್ಕೆ ಆಗುವ ಹಾನಿ, ನೀರಿನ ಸೆಳೆತ, ಒಂದೊಂದೇ ಭಾಗಗಳನ್ನು ಇಳಿಸಿ ನೀರಿನಲ್ಲಿ ವೆಲ್ಡಿಂಗ್ ಮಾಡುವುದು ಸಾಹಸ ಹಾಗೂ ಸವಾಲಿನ ಕೆಲಸ. ಇದೆಲ್ಲವನ್ನು ಯಶಸ್ವಿಯಾಗಿ ನಿಭಾಯಿಸುವ ಜವಾಬ್ದಾರಿ ಸರ್ಕಾರ ಹಾಗೂ ತಜ್ಞರ ಹೆಗಲೇರಿದೆ.
ಚೈನ್ ಲಿಂಕ್ ನಿರ್ವಹಣೆ ಲೋಪ:ಈ ಮೊದಲು ಸ್ಥಳೀಯ ಇಂಜಿನಿಯರಿಂಗ್ ಸಂಸ್ಥೆಗಳಿಗೆ ವಾರ್ಷಿಕ ನಿರ್ವಹಣೆ ನೀಡುತ್ತಿದ್ದ ಟಿಬಿ ಬೋರ್ಡ್ ಇತ್ತೀಚಿನ ವರ್ಷಗಳಲ್ಲಿ ಹೈದರಾಬಾದ್ ಮೂಲದ ಕಂಪನಿಗಳಿಗೆ ಆನ್​ಲೆನ್ ಟೆಂಡರ್ ಮೂಲಕ ಗುತ್ತಿಗೆ ವಹಿಸುತ್ತಿದೆ. ವಾರ್ಷಿಕ ನಿರ್ವಹಣೆ ಅನುದಾನ, ವಹಿಸಿದ ಸಂಸ್ಥೆ, ಜವಾಬ್ದಾರಿ ಇನ್ನಿತರ ಮಾಹಿತಿಯನ್ನು ಬೋರ್ಡ್ ಗುಟ್ಟಾಗಿಟ್ಟಿದೆ. ಇಷ್ಟೆಲ್ಲ ಅವಘಡ ನಡೆದರೂ ಬಹಿರಂಗಪಡಿಸುವ ಮನಸ್ಸು ಮಾಡುತ್ತಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯಂದಲೇ ಗೇಟ್ ಕೊಚ್ಚಿ ಹೋಗಿದ್ದನ್ನು ಪರೋಕ್ಷವಾಗಿ ಒಪ್ಪಿಕೊಂಡಂತಿದೆ. ಸದ್ಯ ಗೇಟ್ ನಿರ್ಮಾಣ ಜವಾಬ್ದಾರಿ ಹೊತ್ತ ಸ್ಥಳೀಯ ಇಂಜಿನಿಯರ್​ಗಳು ಸ್ಥಳ ಪರಿಶೀಲನೆ ನಡೆಸಿದ್ದು, ಗೇಟ್ ನಿರ್ವಹಣೆ ಆಗಿದ್ದರೂ ಚೈನ್ ಲಿಂಕ್ ಸರಿಯಾಗಿ ಗಮನಿಸಿದಂತಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ನೀರು ಹಂಚಿಕೆ ಜಿಜ್ಞಾಸೆ:ಜಲಾಶಯ ಅಂತಾರಾಜ್ಯ ಯೋಜನೆಯಾಗಿದ್ದು, 70:30 ಅನುಪಾತದಲ್ಲಿ ಕರ್ನಾಟಕ, ಆಂಧ್ರ, ತೆಲಂಗಾಣಕ್ಕೆ ನೀರು ಹಂಚಿಕೆಯಾಗಬೇಕು. ಜಲಾಶಯ ಭರ್ತಿಯಾಗುತ್ತಲೇ ನೀರಾವರಿ ಸಲಹಾ ಸಮಿತಿ ಸಭೆ ನಡೆಸದೇ ಸರ್ಕಾರ ಕಾಲುವೆಗಳಿಗೆ ನೀರು ಹರಿಸಿದೆ. 105 ಟಿಎಂಸಿ ಅಡಿ ನೀರು ಸಂಗ್ರಹವಿದ್ದಾಗ 19ನೆ ಗೇಟ್ ಕಿತ್ತು ಹೋಗಿದೆ. ಡಿಸಿಎಂ ಡಿ.ಕೆ. ಶಿವಕುಮಾರ್ ಆಂಧ್ರಕ್ಕೆ ಈಗಾಗಲೇ 25 ಟಿಎಂಸಿ ಅಡಿ ನೀರು ಬಿಟ್ಟಿದ್ದು, ಬಾಕಿ 90 ಟಿಎಂಸಿ ನೀರು ನೀಡಬೇಕು ಎಂದಿದ್ದಾರೆ. ಗೇಟ್ ಅಳವಡಿಕೆ ವೇಳೆಗೆ ಜಲಾಶಯದಲ್ಲಿ 40-50 ಟಿಎಂಸಿ ಅಡಿ ನೀರು ಉಳಿಯಲಿದೆ. ಹೀಗಾಗಿ ಯಾವ ಮಾನದಂಡದಲ್ಲಿ ನೀರು ಹಂಚಿಕೆ ಆಗಲಿದೆ ಎಂಬ ಜಿಜ್ಞಾಸೆಯೂ ಮೂಡಿದೆ.
ಇನ್ನಷ್ಟು ಬಿರುಕುಗಳು:ಒಂದೆಡೆ ಗೇಟ್ ತುಂಡಾಗಿ ರೈತರ ಬದುಕು ಅಭದ್ರಗೊಳಿಸಿದೆ. ಮತ್ತೊಂದೆಡೆ ಬಹುತೇಕ ಬಾಕಿ ಗೇಟ್​ಗಳ ಸೈಡ್ ವಾಲ್​ನಲ್ಲಿ ಸಣ್ಣಪುಟ್ಟ ಬಿರುಕುಗಳಿವೆ. ಬಹುಪಾಲು ಜಲಾಶಯ ಕಲ್ಲು, ಗಾರೆ, ಸುಣ್ಣದಿಂದ ಕಟ್ಟಲ್ಪಟ್ಟಿದೆ. ಸೈಡ್ ವಾಲ್​ಗಳಲ್ಲಿ ಪಿಲ್ಲರ್ ಅಳವಡಿಸಿದ್ದು, ಅಲ್ಲಲ್ಲಿ ಸಿಮೆಂಟ್ ಬಳಕೆಯಾಗಿದೆ. ಇದರಲ್ಲೇ ಬಿರುಕುಗಳು ಕಾಣಿಸಿಕೊಂಡಿದ್ದು, ಅದರಿಂದಲೂ ಅಪಾಯ ಎಂಬುದು ರೈತರು ಹಾಗೂ ವಿಪಕ್ಷಗಳ ವಾದ. ಈ ಬಗ್ಗೆಯೂ ಟಿಬಿ ಬೋರ್ಡ್ ಎಚ್ಚರಿಕೆವಹಿಸಬೇಕಿದೆ.
5 ಕೋಟಿ ರೂ. ಕೊಡುತ್ತ ಟಿಬಿಬಿ ?:ಟಿಬಿ ಡ್ಯಾಂ ಗೇಟ್ ಕೊಂಡಿ ಕಳಚಿ ಅವಘಡದ ಹಿನ್ನೆಲೆಯಲ್ಲಿ ಟಿಬಿಬಿ ಅಧ್ಯಕ್ಷ ವೀರೇಂದ್ರ ಶರ್ಮ ಹಾಗೂ ಟಿಬಿಬಿ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ಜತೆ ವಿಡಿಯೋ ಕಾನ್ಪರೆನ್ಸ್​ನಲ್ಲಿ ಚರ್ಚೆ ನಡೆದಿದೆ. ಟಿಬಿಬಿ ಖಾತೆಯಿಂದ ಐದು ಕೋಟಿ ರೂ. ವರೆಗೆ ನಿರ್ಮಾಣ ವೆಚ್ಚ ಭರಿಸಲು ತೀರ್ವನವಾಗಿದೆ.
ಎರಡು ಕಂಪನಿಗಳಿಗೆ ಗೇಟ್ ನಿರ್ವಿುಸುವ ಕೆಲಸ ವಹಿಸಿದ್ದೇವೆ. ತಜ್ಞರ ಜತೆ ನಿರಂತರ ಸಭೆ ನಡೆಸಲಾಗುತ್ತಿದೆ. ಸದ್ಯ ಹರಿವ ನೀರಿಗೆ ಅಡ್ಡಲಾಗಿ ಗೇಟ್ ಹಾಕಿ ನೀರು ಉಳಿಸಿಕೊಳ್ಳುವುದು ಮತ್ತೊಂದು ಗೇಟ್ ಲೆವೆಲ್​ವರೆಗೆ ನೀರು ಖಾಲಿ ಮಾಡಿ ನಂತರ ಗೇಟ್ ಇಳಿಸುವ ಬಗ್ಗೆ ಎರಡು ಯೋಜನೆ ಹಾಕಿಕೊಳ್ಳಲಾಗಿದೆ.
| ಶಿವರಾಜ ತಂಗಡಗಿ ಸಚಿವ-ಐಸಿಸಿ ಅಧ್ಯಕ್ಷ, ಕೊಪ್ಪಳ
* ಭಾನುವಾರ 8.035 ಟಿಎಂಸಿ ನೀರು ಹೊರಕ್ಕೆ
* ಸೋಮವಾರವೂ ಅಷ್ಟೇ ನೀರು ಹೊರಕ್ಕೆ
* 2 ದಿನದಲ್ಲಿ ಸರಾಸರಿ 16 ಟಿಎಂಸಿ ನೀರು ಖಾಲಿ
ಆಗಸ್ಟ್​ 13ರಿಂದ 15ರವರೆಗೆ ಪೀಣ್ಯ ಇಂಡಸ್ಟ್ರೀ-ನಾಗಸಂದ್ರ ನಡುವೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:13 + 6 =
Remember me
