|ಮಂಜುನಾಥ್ ಸೂಲಿಬೆಲೆ
ಗ್ರಾಪಂ ವ್ಯಾಪ್ತಿಯ ವಾರ್ಡ್​ಗಳು ಅವ್ಯವಸ್ಥೆಯ ಆಗರವಾಗಿವೆ. ಅದರಲ್ಲೂ 5ನೇ ವಾರ್ಡ್ ಅವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ಸ್ವಚ್ಛತೆಗೆ ಇಲ್ಲಿ ಎಳ್ಳುನೀರು ಬಿಡಲಾಗಿದೆ. ಮಳೆ ಬಂದರೆ ಕೊಳಚೆ ನೀರು ಮನೆಗಳಿಗೆ ನುಗ್ಗುತ್ತದೆ. ಪ್ರತಿ ಮಳೆಗಾಲದಲ್ಲಿ ಇದೇ ಅವಾಂತರ ಎದುರಿಸುತ್ತಿರುವ ಜನತೆ ಅಧಿಕಾರಿಗಳಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಲೇ ಇದ್ದಾರೆ. ಆದರೆ ಇದುವರೆಗೆ ಸಮಸ್ಯೆಗೆ ಪರಿಹಾರ ಎನ್ನುವುದು ಮರೀಚಿಕೆಯಾಗಿಯೇ ಉಳಿದಿದೆ.
ರಾಜಕಾಲುವೆ ಒತ್ತುವರಿ ತಂದ ಸಂಕಷ್ಟ:ಇಲ್ಲಿನ ಖಾಸಗಿ ಶಾಲೆಯ ಬಳಿ ರಾಜಕಾಲುವೆ ಒತ್ತುವರಿಯಿಂದ ನೀರು ಸರಾಗವಾಗಿ ಹರಿಯದೆ ಮಳೆ ಬಂದಾಗಲೆಲ್ಲ ಮನೆಗೆ ಕೊಳಚೆ ನೀರು ನುಗ್ಗುತ್ತದೆ. ಹಲವು ವರ್ಷದಿಂದ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.
ಚರಂಡಿಯಲ್ಲಿ ಹೂಳು:5ನೇ ವಾರ್ಡ್​ನ ಚರಂಡಿ ಕಿರಿದಾಗಿದ್ದು, ಚರಂಡಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ತೆಂಗಿನ ಕಾಯಿ ಚಿಪ್ಪುಗಳ ರಾಶಿ ತುಂಬಿದೆ. ಇದುವರೆಗೆ ಚರಂಡಿ ಸ್ವಚ್ಛತೆಗೆ ಕ್ರಮಕೈಗೊಂಡಿಲ್ಲ. ಮಳೆ ಬಂದಾಗ ನೀರು ಸರಾಗವಾಗಿ ಹರಿಯದೆ ಮನೆಗಳಿಗೆ ನುಗ್ಗುತ್ತದೆ. ಕೊಳಚೆ ನೀರಿನ ಅವಾಂತರದಿಂದ ಜೀವನ ದುಸ್ತರವಾಗಿದೆ.
ಇದೇ ರೀತಿ 1ನೇ ವಾರ್ಡ್​ನ ಮುಖ್ಯ ಕಾಲುವೆ ಸಂಪೂರ್ಣ ಮುಚ್ಚಿದ್ದು, ಕಾಲುವೆ ಸುತ್ತಮುತ್ತಲಿನ 20ಕ್ಕೂ ಹೆಚ್ಚಿನ ಕುಟುಂಬಗಳ ನಿವಾಸಿಗಳು ದುರ್ವಾಸನೆ ಸಹಿಸಲಾಗದೆ ಮೂಗು ಮುಚ್ಚಿ ಓಡಾಡುವಂತಾಗಿದೆ. ಜತೆಗೆ ಸೊಳ್ಳೆ ಕಾಟಕ್ಕೆ ಹೈರಾಣಾಗಿದ್ದಾರೆ. ಸೂಲಿಬೆಲೆ-ಶಿಡ್ಲಘಟ್ಟ ರಸ್ತೆಯ ಸರ್ಕಾರಿ ಸಾರ್ವಜನಿಕ ವಿದ್ಯಾರ್ಥಿನಿಲಯದ ಬಳಿ ದೊಡ್ಡ ಕಾಲುವೆ ಮುಚ್ಚಿ ಹೋಗಿದೆ. ಇಷ್ಟೆಲ್ಲ ಅವ್ಯವಸ್ಥೆ ಇದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.
| ರಮೇಶ್ಸ್ಥಳೀಯ ನಿವಾಸಿ
ಕಾಮಗಾರಿಗೆ ಉತ್ಸಾಹ:ಹೊಸ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಲು ಉತ್ಸಾಹ ತೋರಿಸುವ ಜನಪ್ರತಿನಿಧಿಗಳು, ಹಳೇ ಕಾಮಗಾರಿಗಳ ದುರಸ್ತಿ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. ಕಸ ವಿಲೇವಾರಿ ಹಾಗೂ ಚರಂಡಿ ಸ್ವಚ್ಛತೆ ವಿಚಾರದ ಕಡೆಗೆ ಗಮನ ನೀಡುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ಪ್ರಶ್ನಿಸಿದರೆ ಹಾರಿಕೆ ಉತ್ತರ ನೀಡಿ ಜಾರಿಕೊಳ್ಳುತ್ತಾರೆ ಎಂಬುದು ಸ್ಥಳೀಯರ ದೂರು.
| ಸುಂದರ್ಪಿಡಿಒ ಸೂಲಿಬೆಲೆ ಗ್ರಾಮ ಪಂಚಾಯಿತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × five =
Remember me
