ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ಬಂದರೆ, ಮಾಲ್ ಮತ್ತಿತರ ಜನ ಸಂದಣಿ ಸೇರುವ ಪ್ರದೇಶಗಳನ್ನು ಬಿಟ್ಟು ಉಳಿದೆಡೆ ತುಸು ಮಟ್ಟಿಗೆ ಲಾಕ್​ಡೌನ್ ಸಡಿಲಿಸಬಹುದು. ಆದರೆ, ಈಗಲೇ ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ. ಪರಿಸ್ಥಿತಿ ತಹಬದಿಗೆ ಬಂದಿದೆ ಎಂಬುದು ಖಚಿತವಾದ ನಂತರ ಈ ಬಗ್ಗೆ ಪರಿಶೀಲಿಸುವ ಇಂಗಿತವನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಕರೊನಾ ನಿಯಂತ್ರಣಕ್ಕೆ ಇನ್ನಷ್ಟು ಬಿಗಿ ಕ್ರಮಗಳನ್ನು ಕೈಗೊಳ್ಳುವ ಕುರಿತು ರಾಜಧಾನಿಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಖ್ಯಮಂತ್ರಿ ಬಿಎಸ್​ವೈ ಶನಿವಾರ ಸಭೆ ನಡೆಸಿದ್ದು, ರಾಜ್ಯದಲ್ಲಿ ಇದುವರೆಗೂ 144 ಕರೊನಾ ದೃಢಪಟ್ಟ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ ಅರ್ಧದಷ್ಟು ಪ್ರಕರಣಗಳು ಬೆಂಗಳೂರಿನಲ್ಲಿಯೇ ಪತ್ತೆಯಾಗಿವೆ. ಈ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಮಾರಕ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ರ್ಚಚಿಸಲಾಯಿತು.
ಕರೊನಾ ನಿಯಂತ್ರಣಕ್ಕೆ ಏ.14ರವರೆಗೆ ರಾಷ್ಟ್ರವ್ಯಾಪಿ ಲಾಕ್​ಡೌನ್ ಘೊಷಿಸಲಾಗಿದೆ. ಈ ಆದೇಶವನ್ನು ಕಟ್ಟು
ನಿಟ್ಟಾಗಿ ಅನುಷ್ಠಾನಗೊಳಿಸಲು ನಿಮ್ಮ ಕ್ಷೇತ್ರಗಳಲ್ಲಿ ಸಹಕಾರ ಕೊಡಿ, ಏ.14ರ ನಂತರ ಹಂತಹಂತವಾಗಿ ದಿಗ್ಬಂಧನವನ್ನು ಸಡಿಲ ಮಾಡುತ್ತ ಹೋಗೋಣ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಚಿವರಾದ ವಿ ಸೋಮಣ್ಣ .ಆರ್. ಅಶೋಕ್, ಸಂಸದರಾದ ಪಿ.ಸಿ.ಮೋಹನ್, ತೇಜಸ್ವಿ ಸೂರ್ಯ, ಡಿ.ಕೆ.ಸುರೇಶ್, ರಾಜ್ಯಸಭಾ ಸದಸ್ಯ ಕುಪೇಂದ್ರ ರೆಡ್ಡಿ, ಮೇಯರ್ ಗೌತಮ್ ಕುಮಾರ್, ಜಮೀರ್ ಅಹಮ್ಮದ್ ಸೇರಿದಂತೆ ಶಾಸಕರು,ವಿಧಾನ ಪರಿಷತ್ ಸದಸ್ಯರು, ಪಾಲಿಕೆ ಸದಸ್ಯರು ಹಾಗೂ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆಯ ಮುಖ್ಯಾಂಶಗಳು
ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಒದಗಿಸಲು ಕೈಗೊಂಡ ಕ್ರಮಗಳು ಹಾಗೂ 480 ಹಾಪ್​ಕಾಮ್ಸ್ಗಳ ಮೂಲಕ ಮತ್ತು ಸಂಚಾರಿ ಹಾಪ್​ಕಾಮ್್ಸ ಮೂಲಕವೂ ತರಕಾರಿ ಪೂರೈಕೆ.
ಅಗತ್ಯ ವಸ್ತುಗಳ ಪೂರೈಕೆಯನ್ನು ಜಿಲ್ಲಾಡಳಿತಗಳ ಮೂಲಕ ವ್ಯವಸ್ಥಿತವಾಗಿ ನಿರ್ವಹಿಸುವಂತೆ ಸಲಹೆ.
9.8 ಲಕ್ಷ ಪಿಪಿಇ ಕಿಟ್​ಗಳಿಗೆ ಆದೇಶ ಮಾಡಿದ್ದು, ಈಗಾಗಲೇ 1.43 ಲಕ್ಷ ಕಿಟ್ ಪೂರೈಕೆ.
18.33 ಲಕ್ಷ ಎನ್ 95 ಮಾಸ್ಕ್ ಖರೀದಿಗೆ ಕಾರ್ಯಾದೇಶ. 4.13 ಲಕ್ಷ ಸರಬರಾಜು.
1,570 ವೆಂಟಿಲೇಟರ್ ಖರೀದಿಗೆ ಆದೇಶ. 17 ಸರಬರಾಜಾಗಿದೆ. ಮುಂದಿನ ವಾರ 20 ಬರಲಿದೆ.
ಪಕ್ಷಭೇದವಿಲ್ಲದೆ ಎಲ್ಲರೂ ಒಟ್ಟಾಗಿ ಕೆಲಸ ನಿರ್ವಹಿಸುವ ನಿಟ್ಟಿನಲ್ಲಿ ಸಚಿವರು, ಸಂಸದರು, ಶಾಸಕರ ಸಹಯೋಗ ಅಗತ್ಯ.
ರಾಜ್ಯದಲ್ಲಿ 17 ಸಮಿತಿಗಳು, ಸಹಾಯವಾಣಿಗಳು ಮತ್ತು ವಾರ್ ರೂಂ ಗಳನ್ನು ಸ್ಥಾಪಿಸಲಾಗಿದ್ದು, ಅವುಗಳು ದಿನದ 24 ಗಂಟೆಯೂ ಕಾರ್ಯನಿರ್ವಹಣೆ ಮಾಡುತ್ತಿವೆ.
ಪಿಎಂ ಕಿಸಾನ್ ಯೋಜನೆಯಡಿ ಈ ತಿಂಗಳ 10ನೇ ತಾರೀಖಿನೊಳಗೆ 2 ಸಾವಿರ ರೂ. ಜಮಾ.
ಬಡವರಿಗೆ ಅರ್ಧ ಲೀಟರ್ ಹಾಲು ಉಚಿತವಾಗಿ ವಿತರಿಸಲು ಕ್ರಮ.
ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಎರಡು ತಿಂಗಳ ಮುಂಗಡ ಮೊತ್ತ ಈ ತಿಂಗಳ 10 ರೊಳಗೆ ಜಮಾ.
15 ಲಕ್ಷ ಫಲಾನುಭವಿಗಳ ಖಾತೆಗಳಿಗೆ ಗ್ಯಾಸ್ ಸಿಲಿಂಡರ್ ಮೊತ್ತ ಜಮಾ ಆರಂಭ.
ಅಸಂಘಟಿತ ವಲಯದ ಕಾರ್ವಿುಕರಿಗೆ ಪರಿಹಾರ ಹಾಗೂ ಅಗತ್ಯ ವಸ್ತುಗಳನ್ನು ಒದಗಿಸಲು ಕ್ರಮ.
ಜನರ ಅನವಶ್ಯಕ ಓಡಾಟ ನಿಯಂತ್ರಿಸಲು ಇನ್ನಷ್ಟು ಕ್ರಮ.
ಪಡಿತರ ಚೀಟಿ ಹೊಂದಿಲ್ಲದವರಿಗೂ ಆಹಾರ ಧಾನ್ಯ ಪೂರೈಕೆ.
ಖಾಸಗಿ ಕ್ಲಿನಿಕ್​ಗಳು ತೆರೆಯುವಂತೆ ಕಟ್ಟುನಿಟ್ಟಿನ ಸೂಚನೆ.
ಅಗತ್ಯ ವಸ್ತುಗಳ ಪೂರೈಕೆಯಲ್ಲಿನ ಸಮಸ್ಯೆಗಳ ಕುರಿತು ಚರ್ಚೆ. ಇನ್ನಷ್ಟು ವ್ಯವಸ್ಥಿತವಾಗಿ ನಿರ್ವಹಣೆಗೆ ಪಣ.
ಏ.14ರ ನಂತರ ಹಂತಹಂತವಾಗಿ ಲಾಕ್​ಡೌನ್ ಸಡಿಲಗೊಳಿಸುವ ಆಶಯ.
ರಾಜ್ಯ ಸರ್ಕಾರಿ ನೌಕರರ ವೇತನ ಕಡಿತ ಬೇಡ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 17 =
Remember me
