ಬೆಂಗಳೂರು:ಸ್ಯಾಂಡಲ್​​ವುಡ್​ ನಟ ರಮೇಶ್​​ ಅರವಿಂದ್​ ಅವರ ಜತೆ ತೆರೆ ಹಂಚಿಕೊಂಡಿದ್ದ ಬಾಲನಟಿ ಇಂದು ಐಎಎಸ್​​ ಅಧಿಕಾರಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಈ ನಟಿ ಯಾರು? ಎನ್ನುವ ಮಾಹಿತಿ ಇಲ್ಲಿದೆ…
90ರ ದಶಕದ ಕನ್ನಡ ಚಿತ್ರಗಳನ್ನು ನೋಡಿದವರಿಗೆ ಕೀರ್ತನಾ ಎಂಬ ಬಾಲನಟಿ ಚಿರಪರಿಚಿತ. ಕರ್ಪೂರದ ಗೊಂಬೆ, ಗಂಗಾ ಯಮುನ, ಮುದ್ದಿನ ಅಳಿಯ, ಉಪೇಂದ್ರ ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ​​ಸಿಂಹಾದ್ರಿ ಮುಂತಾದ ಜನಪ್ರಿಯ ಚಿತ್ರಗಳಲ್ಲಿ ಚೂಟಿ ಪುಟಾಣಿಯಾಗಿ ಕಾಣಿಸಿಕೊಂಡಿದ್ದರು ಕೀರ್ತನಾ. ಮತ್ತು ಟಿವಿ ಧಾರಾವಾಹಿಗಳಲ್ಲೂ ಕೂಡಾ ಕಾಣಿಸಿಕೊಂಡಿದ್ದಾರೆ.
ಕೀರ್ತನಾ ಅವರು UPSC CSE 2020 ರಲ್ಲಿ AIR ರ್ಯಾಂಕ್ 167 ಅನ್ನು ಪಡೆದು ಇಂದು ಐಎಎಸ್ ಆಫೀಸರ್ ಆಗಿದ್ದಾರೆ.  ಭಾರತದ ಅತ್ಯಂತ ಕಠಿಣ ಪರೀಕ್ಷೆ ಪಾಸ್ ಮಾಡಿದ್ದಾರೆ. ತನ್ನ UPSC CSE ಸಿದ್ಧತೆಗಳನ್ನು ಪ್ರಾರಂಭಿಸುವ ಮೊದಲು, ಕೀರ್ತನಾ 2011 ರಲ್ಲಿ ಕರ್ನಾಟಕ ಆಡಳಿತ ಸೇವೆ (KAS) ಪರೀಕ್ಷೆ ತೆಗೆದುಕೊಂಡು ಉತ್ತೀರ್ಣರಾಗಿದ್ದರು.

ಕೆಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವಾಗNS ಅವರು ಐಎಎಸ್ ಅಧಿಕಾರಿಯಾಗಿ ರಾಷ್ಟ್ರಕ್ಕೆ ಹೆಚ್ಚಿನ ಕೊಡುಗೆ ನೀಡಬಹುದು ಎಂಬ ಕಾರಣಕ್ಕೆ ಯುಪಿಎಸ್ಸಿ ಪರೀಕ್ಷೆಗೆ ಸಿದ್ಧತ ನಡೆಸತೊಡಗಿದರು. 6ನೇ ಪ್ರಯತ್ನದಲ್ಲಿ ಯುಪಿಎಸ್ಸಿ ಪರೀಕ್ಷೆ ಪಾಸ್ ಮಾಡಿದ ಕೀರ್ತನಾ IAS ಅಧಿಕಾರಿಯಾಗಿ ತಮ್ಮ ಮೊದಲ ಪೋಸ್ಟಿಂಗ್‌ನಲ್ಲಿ, ಮಂಡ್ಯ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಆಡಳಿತಾತ್ಮಕ ಪಾತ್ರವನ್ನು ವಹಿಸಿಕೊಂಡರು. ಅಂದು ಬಾಲನಟಿಯಾಗಿ ಸಾಲು..ಸಾಲು ಸಿನಿಮಾ ಮಾಡಿದ್ದ ನಟಿ ಇಂದು ಸರ್ಕಾರಿ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪತ್ನಿಯ ದೇಹವನ್ನು 224 ತುಂಡುಗಳಾಗಿ ಕತ್ತರಿಸಿ ನದಿಗೆ ಎಸೆದ

ಸಮುದ್ರದಲ್ಲಿ ದೋಣಿ ಮುಳುಗಿ 90 ಜನ ಜಲಸಮಾಧಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − thirteen =
Remember me
