ಹಾವೇರಿ:ಮುಖ್ಯಮಂತ್ರಿ ಕುರ್ಚಿ ಖಾಲಿಯಿಲ್ಲ. ಅಲ್ಲಿ ಟಗರು ಕೂತಿದೆ. ಅಷ್ಟು ಸುಲಭವಾಗಿ ಕೆಳಗೆ ಇಳಿಸೋಕೆ ಆಗಲ್ಲ. ಟಗರು ಕೊಂಬು ಮುರಿಯೋಕೆ ಯಾರಿಂದಲೂ ಸಾಧ್ಯವಿಲ್ಲ ಎಂದು ಸಚಿವ ಜಮೀರ್ ಅಹಮ್ಮದ್​ ಸಿಎಂ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಇದನ್ನೂ ಓದಿ:ಛತ್ತೀಸ್‌ಗಢದ ದಾಂತೇವಾಡದಲ್ಲಿ ಭದ್ರತಾ ಪಡೆಗಳ ಎನ್​​ಕೌಂಟರ್; 9 ನಕ್ಸಲರ ಹತ್ಯೆ!
ಹಾವೇರಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ವಕ್ಪ್ ಅದಾಲತ್ ಸಭೆ ಬಳಿಕ ಮಾತನಾಡಿದ ಸಚಿವ ಜಮೀರ್ ಅಹ್ಮದ್ ಅವರು, ನನಗೂ ಮುಖ್ಯಮಂತ್ರಿಯಾಗುವ ಸಿಎಂ ಆಗುವ ಆಸೆ ಇದೆ, ನಿಮಗೆ ಇಲ್ಲವೇ ಎಂದು ಪ್ರಶ್ನಿಸಿದರು.
ಸಿಎಂ ಆಸೆ ಎಲ್ಲರಿಗೂ ಇದೆ. ಯಾರಿಗೆ ಇರುವುದಿಲ್ಲ ಹೇಳಿ ನಿಮಗೆ ಮುಖ್ಯಮಂತ್ರಿಯಾಗುವ ಆಸೆ ಇಲ್ಲವೇ, ಪರೋಕ್ಷವಾಗಿ ನನಗೂ ಸಿಎಂ ಆಸೆ ಇದೆ ಎಂದು ಜಮೀರ್ ಅಹ್ಮದ್ ಎಂದು ಪುನರುಚ್ಚರಿಸಿದರು.
ಶಿಗ್ಗಾಂವಿ ಉಪ ಚುನಾವಣೆ ವಿಚಾರ ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಹೈಕಮಾಂಡ್ ಗೆ ಮನವಿ ಮಾಡಿದ್ದೇವೆ. ಐದು ಸಲ ಸೋತಿದ್ದಾರೆ ಬೇಡ ಎಂದಿದ್ದಾರೆ.
ಈ ಸಲವೂ ಕೊಡಿ. ನಾವು ಗೆಲ್ಲಿಸುತ್ತೇವೆ ಎಂದಿದ್ದೇವೆ ನಿರೀಕ್ಷೆ ಇದೆ ಕೊಡುತ್ತಾರೆ ಎಂದು. ಆದರೆ ಕೇಳುವುದು ನಮ್ಮ ಕರ್ತವ್ಯ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಗೆಲ್ಲಿಸಿಕೊಂಡು ಬರುತ್ತೇವೆ ಕಾಂಗ್ರೆಸ್ ನಲ್ಲಿ ಪೈಟ್ ಇದೆ ಎಂದರೆ ಗೆಲ್ಲುತ್ತೇವೆ ಎಂದರ್ಥ ಅಲ್ಲಿ ಡಿಮ್ಯಾಂಡ್ ಇದೆ ಅದಕ್ಕೆ ಕಾಂಗ್ರೆಸ್ ನಿಂದ ಟಿಕೆಟ್ ಕೇಳುತ್ತಿದ್ದಾರೆ. ಅಂತಿಮವಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳುತ್ತದೆ
ಕೇಂದ್ರ ಮಂತ್ರಿ ಎಚ್​.ಡಿ ಕುಮಾರಸ್ವಾಮಿ ಅವರು ಹಗಲು ಕಸನು ಕಾಣುತ್ತಿದ್ದಾರೆ. ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಕಾಂಗ್ರೆಸ್​ ಪಕ್ಷ 30 ಸಾವಿರ ಲೀಡ್ ನಲ್ಲಿ ಗೆಲ್ಲುತ್ತೇವೆ ಎಂದು ಎಚ್​ಡಿಕೆಗೆ ತಿರುಗೇಟು ನೀಡಿದರು.
ನೂತನ ಸಂಸದ ಬಸವರಾಜ್ ಬೊಮ್ಮಾಯಿ ಅವರು ರಾಜೀನಾಮೆಯಿಂದ ತೆರವಾಗಿರುವ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸದಸ್ಯದಲ್ಲೇ ಉಪ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್​ನಿಂದ ಈ ಬಾರಿ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡಲು ಜಮೀರ್ ಅಹಮ್ಮದ್​ ಆಗ್ರಹಿಸಿದ್ದಾರೆ.
ಈ ಬಾರಿಯೂ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ಕೊಡಿ ಎಂದು ಹೈಕಮಾಂಡ್​ಗೆ ಮನವಿ ಮಾಡಿದ್ದೇವೆ. ಐದು ಸಲ ಸೋತಿದ್ದಾರೆ ಬೇಡ ಎಂದಿದ್ದಾರೆ. ಈ ಸಲವೂ ಕೊಡಿ. ನಾವು ಗಲ್ಲಿಸುತ್ತೇವೆ ಎಂದಿದ್ದೇವೆ. ಟಿಕೆಟ್ ಸಿಗುವ ನಿರೀಕ್ಷೆ ಇದೆ ಕೊಡುತ್ತಾರೆ ಎಂದು ಹೇಳಿದರು.
ಬಿಭವ್ ಕುಮಾರ್​ಗೆ ಜಾಮೀನು ಸಿಕ್ಕಿದ ಬೆನ್ನಲ್ಲೇ ದ್ರೌಪದಿ ವಸ್ತ್ರಾಹರಣ ಚಿತ್ರ ಪೋಸ್ಟ್ ಮಾಡಿದ ಸ್ವಾತಿ ಮಾಲಿವಾಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
