ಬೆಂಗಳೂರು:ಬಿಜೆಪಿಯವರು ಚುನಾವಣೆ ಬಂದಾಗ ಧರ್ಮ ಸೂಕ್ಷ್ಮ ವಿಚಾರ ಕೈಗೆತ್ತಿಕೊಳ್ಳುತ್ತಾರೆ. ಚುನಾವಣಾ ರಾಜಕಾರಣಕ್ಕೆ ಒಂದು ವಿಷಯ ಬೇಕು, ಹಾಗಾಗಿ ಈಗ ರಾಮಮಂದಿರ ವಿಷಯ ಎತ್ತಿಕೊಂಡಿದ್ದಾರೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ, ಅವರಿಗೆ ಇನ್ನೂ ಮಂದಿರ ಉದ್ಘಾಟನೆಗೆ ಆಹ್ವಾನ ನೀಡಿಲ್ಲ ಎಂದು ಕೃಷಿ ಸಚಿವ ಚಲುವರಾಯ ಸ್ವಾಮಿ ಹೇಳಿದ್ದಾರೆ.ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಅವರು, ಬಿಜೆಪಿಯವರು ಎಷ್ಟು ರಾಮನ ಜಪ ಮಾಡುತ್ತಾರೋ ಅದಕ್ಕಿಂತಲೂ ಹೆಚ್ಚು ನಾವು ಮಾಡುತ್ತೇವೆ. ಆದರೆ, ಅವರು ಚುನಾವಣೆ ಕಾರಣಕ್ಕೆ ಧರ್ಮದ ವಿಚಾರಗಳನ್ನು ಎತ್ತಿಕೊಳ್ಳುತ್ತಾರೆ. ಬಿಜೆಪಿಯವರಿಗೆ ಕೆಲಸ ಇಲ್ಲ, ಅಭಿವೃದ್ಧಿ ವಿಚಾರ ಇಲ್ಲ ಕೇವಲ ಚುನಾವಣೆಗೋಸ್ಕರ ಇಂಥ ವಿಷಯ ಎತ್ತಿಕೊಳ್ಳುತ್ತಾರೆ ಎಂದರು.ಒಬ್ಬ ರಾಜ್ಯದ ಸಿಎಂಗೆ ಆಹ್ವಾನ ಕೊಟ್ಟಿಲ್ಲ ಅಂದರೆ ಅದು ರಾಜಕಾರಣ. ಬಿಜೆಪಿಯವರು ಮಾತ್ರವಲ್ಲ ಎಲ್ಲರೂ ಶ್ರೀರಾಮನನ್ನ ಆರಾಧಿಸುತ್ತಾರೆ ಎಂದು ಟೀಕಿಸಿದರು.ಇನ್ನು ಬಿಜೆಪಿ, ಜೆಡಿಎಸ್‌ನವರು ತಮ್ಮ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ಸರ್ಕಾರದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಸರ್ಕಾರ ಉರುಳುತ್ತೆ ಎಂದು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾಗಿದೆ. ಅಶೋಕ್, ವಿಜಯೇಂದ್ರ ವಿಚಾರವಾಗಿ ಅಸಮಾಧಾನ ಇದೆ. ಅದನ್ನು ಮುಚ್ಚಿಕೊಳ್ಳಲು ಸರ್ಕಾರದ ಬಗ್ಗೆ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಹೇಳಿದರು.ಮಂಡ್ಯ ಲೋಕಸಭಾ ಕ್ಷೇತ್ರದ ವಿಚಾರವಾಗಿಯೂ ಸ್ಪಷ್ಟನೆ ನೀಡಿದ ಅವರು ನಾನಾಗಲೀ, ನಮ್ಮ ಕುಟುಂಬದವರಾಗಲೀ ಯಾರೂ ಸ್ಪರ್ಧಿಸುವುದಿಲ್ಲ. ನಾನು ಎಂಪಿ ಚುನಾವಣಾ ಅಭ್ಯರ್ಥಿಯಾಗಬೇಕೆಂದು ಹೈಕಮಾಂಡ್ ಪ್ರಸ್ತಾವನೆ ಕೊಟ್ಟಿಲ್ಲ. ಸಿಎಂ, ಡಿಸಿಎಂ ಕೂಡ ಈ ಬಗ್ಗೆ ಮಾತನಾಡಿಲ್ಲ ಎಂದರು.ಜೆಡಿಎಸ್, ಬಿಜೆಪಿಯಿಂದ ಶಾಸಕರು ಕಾಂಗ್ರೆಸ್‌ಗೆ ಬರುತ್ತಾರೆ. ಹದಿನೈದು ಜನ ಶಾಸಕರು ಕಾಂಗ್ರೆಸ್ ಬರುತ್ತಾರೆ ಕಾದು ನೋಡಿ. ಈಗಾಗಲೇ ಪಕ್ಷಕ್ಕೆ ಬರಲು ಶಾಸಕರು ಸಿದ್ಧರಿದ್ದಾರೆ ಎಂದು ಹೇಳಿದರಲ್ಲದೇ, ಪಿಎಂ, ಗೃಹ ಸಚಿವರನ್ನ ಭೇಟಿ ಮಾಡಿದ ಮೇಲೂ ಬರ ಪರಿಹಾರ ಬಿಡುಗಡೆಗೆ ಏನೂ ಆಗಿಲ್ಲ. ಬೇಗ ಹಣ ಬಿಡುಗಡೆ ಮಾಡುತ್ತೇವೆ ಎಂದು ಹೇಳಿದ್ದರು, ಕೇಂದ್ರದ ತಂಡ ಕೂಡ ರಿಪೋರ್ಟ್ ಸಲ್ಲಿಸಿದೆ ಎಂದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven + 11 =
Remember me
