ಸೊರಬ:ಕರೊನಾ ಸೋಂಕು ಹರಡುವಿಕೆ ನಿಯಂತ್ರಿಸಲು ಮಾಸ್ಕ್​ ಧರಿಸಬೇಕು ಎಂದು ವೈದ್ಯಲೋಕ ಹೇಳುತ್ತಿದ್ದಂತೆ ಮುಖಗವಸಿಗೆ ಎಲ್ಲಿಲ್ಲದ ಡಿಮಾಂಡ್​ ಬಂದಿದೆ. ಮನೆಯಲ್ಲೇ ಮೊಬೈಲ್​ ಬಿಟ್ಟು ಹೊರಬಂದರೂ ಸರಿಯೇ ಮಾಸ್ಕ್​ ಇಲ್ಲದೆ ಆಚೆ ಕಾಲಿಡೋಕು ಜನ ಭಯ ಪಡುತ್ತಿದ್ದಾರೆ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಮಾರುಕಟ್ಟೆಗೆ ತರಹೇವಾರಿ ಮಾಸ್ಕ್​ಗಳೂ ಲಗ್ಗೆ ಇಟ್ಟಿವೆ. ಕಾಸಿಗೆ ತಕ್ಕಂತೆ ಕಜ್ಜಾಯ ಎಂಬಂತೆ ತ್ರೀ ಫೋಲ್ಡೆಡ್​, ಎನ್​ ಮತ್ತು 95 ಮಾಸ್ಕ್​ಗಳ ಜತೆಗೆ ಮ್ಯಾಚಿಂಗ್​ ಮಾಸ್ಕ್​ಗಳೂ ಇವೆ. ಅನೂಕೂಲಕ್ಕೆ ತಕ್ಕಂತೆ ಮುಖಗವಸು ಖರೀದಿಯ ಭರಾಟೆ ಜೋರಾಗಿದೆ. ಬಹುಶಃ ಈಗ ನೀವು ನೋಡುತ್ತಿರುವ ಮಾಸ್ಕ್​ ವಿಶ್ವದಲ್ಲೇ ಬಂದಿರಲಿಕ್ಕಿಲ್ಲ! ಇದು ತೆಂಗಿನ ಕರಟದ(ಚಿಪ್ಪಿನ) ಮಾಸ್ಕ್​.
ಇದನ್ನೂ ಓದಿರಿಕಂಡವರ ಹೆಂಡ್ತಿ ಜತೆ ಅವಿವಾಹಿತನ ಲವ್ವಿ ಡವ್ವಿ… ಆಕೆಯ ಮನೆಯವರಿಗೆ ತಾನೇ ಫೋಟೋ ಕಳಿಸಿ ಗುಟ್ಟನ್ನು ರಟ್ಟು ಮಾಡಿದ!
ಸೊರಬ ಪಟ್ಟಣದಲ್ಲಿ ನಾಗರಾಜ್​ ಎಂಬುವವರು ತೆಂಗಿನಕಾಯಿ ಚಿಪ್ಪಿನಿಂದ ಮಾಸ್ಕ್​ ಮಾಡಿಕೊಂಡಿದ್ದಾರೆ. ಬುಧವಾರ ಸೊರಬ ಮಾರುಕಟ್ಟೆಯಲ್ಲಿ ತೆಂಗಿನಚಿಪ್ಪಿಗೆ ಮಾಸ್ಕ್​ನಂತೆ ವ್ಯವಸ್ಥಿತವಾಗಿ ದಾರದಿಂದ ಕಟ್ಟಿ ಮುಖಕ್ಕೆ ಧರಿಸಿ ಛತ್ರಿ ಹಿಡಿದು ಮಳೆಯಲ್ಲಿ ಓಡಾಡುತ್ತಿದ್ದರು. ಅವರನ್ನು ನೋಡಿದ ಜನರಿಗೆಲ್ಲ ಅಚ್ಚರಿಯೋ ಅಚ್ಚರಿ.
ಇತ್ತೀಚೆಗಷ್ಟೇ ಭೋಪಾಲ್​ನಲ್ಲಿ ನರೇಂದ್ರ ಮೋದಿ ಅವರ ಮುಖ ಮುದ್ರಿತವಾಗಿರುವ ಮಾಸ್ಕ್ ಕೂಡ ಮಾರುಕಟ್ಟೆಗೆ ಬಂದಿದ್ದು, ಮಾರಾಟ ಜೋರಾಗಿದೆ.
ಇದನ್ನೂ ಓದಿರಿಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಮೋದಿ ಮಾಸ್ಕ್​: ಭರ್ಜರಿ ಮಾರಾಟ
ಲೈಂಗಿಕವಾಗಿ ಬಳಸಿಕೊಂಡು ಸಾಲ ಕೊಟ್ಟ, ಆಕೆ ಹಣ ಹಿಂತಿರುಗಿಸಿದರೂ ಮತ್ತೆ ಬರುವಂತೆ ಪೀಡಿಸಿದ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
