ಬೆಂಗಳೂರು:ಹಿಂದಿನ ಸರ್ಕಾರದ ವಿರುದ್ಧದ 40 ಪರ್ಸೆಂಟ್ ಕಮಿಷನ್ ಆರೋಪಕ್ಕೆ ಸಂಬಂಧಿದಂತೆ ರಚನೆಯಾದ ತನಿಖಾ ಆಯೋಗಕ್ಕೆ ಗುತ್ತಿಗೆದಾರರ ಸಂಘ ಮಂಗಳವಾರ ಕೆಲವು ದಾಖಲೆಗಳನ್ನು ಹಸ್ತಾಂತರಿಸಿದೆ. ಇದೇ ವೇಳೆ ಸಿದ್ದರಾಮಯ್ಯ ಸರ್ಕಾರದ ಅವಧಿಯ ‘ಕಮಿಷನ್’ ವಸೂಲಿ ಸಂಬಂಧ ದಾಖಲೆಯನ್ನೂ ಸಲ್ಲಿಸಿ ಅಚ್ಚರಿ ಮೂಡಿಸಿದೆ.
ರಾಜ್ಯದಲ್ಲಿ 40 ಪರ್ಸೆಂಟ್ ಕಮಿಷನ್ ವಸೂಲಿ ಮಾಡಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘ ಆರೋಪಿಸಿ ಪ್ರಧಾನಿಗೂ ಪತ್ರ ಬರೆದಿತ್ತು. ಚುನಾವಣೆಯಲ್ಲೂ ಇದೂ ಪ್ರಮುಖ ವಿಷಯವಾಗಿತ್ತು. ಹೊಸ ಸರ್ಕಾರ ರಚನೆಯಾದ ಬಳಿಕ ಈ ಆರೋಪದ ಕುರಿತು ತನಿಖಾ ಸಮಿತಿ ರಚಿಸಿತ್ತು.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರು ಮಂಗಳವಾರ ಆಯೋಗದ ಕಚೇರಿಗೆ ತೆರಳಿ ನಿವೃತ್ತ ನ್ಯಾಯಮೂರ್ತಿಗಳಿಗೆ ತಮ್ಮಲ್ಲಿರುವ ದಾಖಲೆಗಳನ್ನು ನೀಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆಂಪಣ್ಣ, 40 ಪರ್ಸೆಂಟ್ ಕಮಿಷನ್ ವಿಚಾರದ ದಾಖಲೆಗಳನ್ನು ಕೊಟ್ಟಿದ್ದೇವೆ. ಈಗಿನ ಸರ್ಕಾರದ ಎರಡು ಮೂರು ದಾಖಲೆಗಳನ್ನು ಕೂಡಾ ಕೊಟ್ಟಿದ್ದೇವೆ. ನಾನು ಸಂಘದ ಅಧ್ಯಕ್ಷ ಆದ ಬಳಿಕ ಈವರೆಗೆ ಸಿಕ್ಕ ಎಲ್ಲಾ ದಾಖಲೆ ನೀಡಿದ್ದೇವೆ ಎಂದರು.
ಯಾವೆಲ್ಲ ದಾಖಲೆ ನೀಡಲಾಗಿದೆ ಎಂಬ ಬಗ್ಗೆ ಯಾವುದೇ ಮಾಹಿತಿಯನ್ನೂ ಅವರೂ ನೀಡಲಿಲ್ಲ. ಈಗಿನ ಸರ್ಕಾರದ ಎರಡು ಮೂರು ದಾಖಲೆಗಳನ್ನು ಕೂಡಾ ಕೊಟ್ಟಿದ್ದೇವೆ. ಇದಿಷ್ಟೇ ಬೇರೆ ವಿಚಾರ ಏನಿಲ್ಲ ಎಂದಷ್ಟೇ ಪುನರುಚ್ಛರಿಸಿದರು.
ನಾವು 40 ಪರ್ಸೆಂಟ್ ಆರೋಪ ಮಾಡಿದ್ದೆವು, ಅದರ ದಾಖಲೆ ಕೊಟ್ಟಿದ್ದೇವೆ. ಯಾವ ದಾಖಲೆ ಕೊಟ್ಟಿದ್ದೇವೆ, ಎಷ್ಟು ದಾಖಲೆ ಕೊಟ್ಟಿದ್ದೇವೆ ಎಂಬುದನ್ನು ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ. ಆಯೋಗ ಮುಂದಿನದನ್ನು ನೋಡಿಕೊಳ್ಳುತ್ತದೆ ಎಂದು ಹೇಳಿದರು.
ನಾವು ಬಿಜೆಪಿಯೂ ಅಲ್ಲ, ಕಾಂಗ್ರೆಸ್ ಕೂಡಾ ಅಲ್ಲ. ನಾವು ಕಂಟ್ರಾಕ್ಟರ್. ನಮಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ನೀರಾವರಿ, ಲೋಕೋಪಯೋಗಿ, ಪಂಚಾಯತ್ ರಾಜ್, ಆರೋಗ್ಯ ಇಲಾಖೆಗೆ ಸಂಬಂಧಿಸಿದ ದಾಖಲೆ ಕೊಟ್ಟಿದ್ದೇವೆ. ಇನ್ನಷ್ಟು ದಾಖಲೆ ಕೇಳಿದ್ದಾರೆ. 10 ದಿನಗಳ ನಂತರ ಒದಗಿಸುತ್ತೇವೆ ನೀಡುತ್ತೇವೆ ಎಂದು ಹೇಳಿದರು.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಅವರ ಸಾವಿಗೆ ಹಿಂದಿನ ಸರ್ಕಾರ ಒಬ್ಬ ಸಚಿವರು ಮತ್ತು ಅಧಿಕಾರಿಗಳು ಕಾರಣ ಎಂದು ಇದೇ ವೇಳೆ ಆರೋಪಿಸಿದರು.
ದಾಖಲೆಗಳು ಏನೇನು? (ಹಿಂದಿನ ಅವಧಿಯದ್ದು):ಶಾಸಕರು, ಅಧಿಕಾರಿಗಳು ಗುತ್ತಿಗೆದಾರರೊಂದಿಗೆ ನಡೆಸಿದ ಸಂಭಾಷಣೆ ಆಡಿಯೋ. ಗುತ್ತಿಗೆ ಕಮೀಷನ್ ಬಗ್ಗೆ ಮಾತನಾಡಿರುವ ವಿಡಿಯೋ ತುಣುಕು. ಮೂರನೇ ವ್ಯಕ್ತಿಗಳಿಂದ ಕಮೀಷನ್ ಕೊಡಬೇಕೆಂಬ ಪ್ರಸ್ತಾಪ. ಕಮೀಷನ್ ಕೊಡದೇ ಹೋದರೆ ಪರಿಣಾಮ ಎದುರಿಸುವ ಒತ್ತಡ ಹೇರಿರುವ ವಿಚಾರ.
ಗುರುತರ ಆರೋಪವೇನು?:ವಿವಿಧ ಇಲಾಖೆಗಳ ಕಾಮಗಾರಿ ಹಿಡಿಯುವ ಗುತ್ತಿಗೆದಾರರಿಗೆ ಸಚಿವರು, ಶಾಸಕರು, ಅಧಿಕಾರಿಗಳಿಗೆ ಕಮೀಷನ್ ಕೊಡುವ ಅನಿವಾರ್ಯ ಸ್ಥಿತಿ ಇದ್ದು, ಒಟ್ಟಾರೆ ಕಾಮಗಾರಿಯ ಶೇ.40ರಷ್ಟು ಹಣ ಕಮೀಷನ್ ಪಡೆಯುವ ವ್ಯವಸ್ಥೆ ಇದೆ ಎಂಬುದು ಗುತ್ತಿಗೆದಾರರ ಸಂಘದ ಗುರುತರ ಆರೋಪ. ಈ ಸರ್ಕಾರದ ಅವಧಿಯಲ್ಲೂ ಕಮೀಷನ್​ಗೆ ಬೇಡಿಕೆ ಇಟ್ಟಿರುವ ಸಂಬಂಧ ದಾಖಲೆಯೊಂದು ಲಭ್ಯವಾಗಿದ್ದು, ಅದನ್ನು ಆಯೋಗಕ್ಕೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
