ಬೆಂಗಳೂರು:  ತೀರ್ಥಹಳ್ಳಿ, ಸಾಗರ ಭಾಗದಲ್ಲಿ ಮಂಗನ ಕಾಯಿಲೆಯಿಂದ ಜನ ಸಾಯುತ್ತಿದ್ದಾರೆ. ಅಧಿಕಾರಿಗಳು ಏನು ಮಾಡುತ್ತಿದ್ದಾರೆ ಎಂದು ಆಡಳಿತ ಪಕ್ಷದ ಸದಸ್ಯರೇ ಸರ್ಕಾರವನ್ನು ತರಾಟೆ ತೆಗೆದುಕೊಂಡ ಪ್ರಸಂಗ ವಿಧಾನಸಭೆಯಲ್ಲಿ ನಡೆಯಿತು.
ಶೂನ್ಯವೇಳೆ ವಿಷಯ ಪ್ರಸ್ತಾಪಿಸಿದ ಬಿಜೆಪಿಯ ಹರತಾಳು ಹಾಲಪ್ಪ ಹಾಗೂ ಎಂ.ಪಿ.ಕುಮಾರಸ್ವಾಮಿ, ಅಧಿಕಾರಿಗಳು ಕಾಯಿಲೆ ವಿಚಾರದಲ್ಲಿ ಅಸಡ್ಡೆ ತೋರಿದ್ದಾರೆ ಎಂದು ರೇಗಿದರೆ, ಅಧಿಕಾರಿಗಳು ಮತ್ತು ಅವರ ಮಕ್ಕಳಿಗೆ ಈ ಕಾಯಿಲೆ ಬರಬೇಕು ಎಂದು ಅರಗ ಜ್ಞಾನೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ಮಲೆನಾಡು ಭಾಗದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಮಂಗನ ಕಾಯಿಲೆ ತಡೆಯಲು ಸರ್ಕಾರ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ಅಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದಾರೆ. ಕರೋನಾ ಪೀಡಿತರಿಗೆ ಒಂದು ನೀತಿ ಮಂಗನ ಕಾಯಿಲೆ ರೋಗಿಗಳಿಗೆ ಇನ್ನೊಂದು ರೀತಿ ಸರಿಯೇ? ಅಧಿಕಾರಿಗಳು ಸಚಿವರಿಗೂ ತಪ್ಪು ಮಾಹಿತಿಗಳನ್ನು ನೀಡುತ್ತಿದ್ದಾರೆ. ಕಾಯಿಲೆ ತಡೆಯಲು ದಿಟ್ಟಕ್ರಮಗಳನ್ನು ಕೈಗೊಳ್ಳದಿದ್ದರೆ ಸ್ಪೀಕರ್ ಪೀಠದ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದರು.
ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ತಮ್ಮ ಕ್ಷೇತ್ರದಲ್ಲೂ ಒಬ್ಬರು ಮೃತಪಟ್ಟಿದ್ದಾರೆ. ಈ ಕಾಯಿಲೆಗೆ ನೀಡುವ ಚುಚ್ಚುಮದ್ದು ಪರಿಣಾಮಕಾರಿಯಾಗಿಲ್ಲ ಎಂಬ ಮಾತು ಕೇಳಿಬರುತ್ತಿವೆ ಎಂದರು. ಇದಕ್ಕೆ ದನಿಗೂಡಿಸಿದ ಅರಗ ಜ್ಞಾನೇಂದ್ರ, ಮಂಗನಕಾಯಿಲೆ ಯಿಂದ ಸತ್ತವರಿಗೆ 5 ಲಕ್ಷ ರೂ. ಪರಿಹಾರ ನೀಡಬೇಕು ಎಂದರು.
ಹಿಂದಿನ ಸರ್ಕಾರವೇ ವಾಸಿ ಇತ್ತು: ಹಿಂದಿನ ಸರ್ಕಾರ ಮಂಗನ ಕಾಯಿಲೆಯನ್ನು ಗಂಭೀರವಾಗಿ ತೆಗೆದುಕೊಂಡಿತ್ತು. ಕಾಯಿಲೆ ಬಂದ ಸ್ಥಳಕ್ಕೆ ವೆಂಟಿಲೇಟರ್ ಇರುವ ಆಂಬ್ಯುಲೆನ್ಸ್ ಇಟ್ಟು ರೋಗಿಗಳನ್ನು ತಕ್ಷಣ ಮಣಿಪಾಲ್ ಅಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸುತ್ತಿದ್ದರು. ಅದರೆ ಈಗ ಶಿವಮೊಗ್ಗದ ಮೆಗ್ಗಾನ್ ಅಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಅಲ್ಲಿ ಚಿಕಿತ್ಸೆ ಸಿಗದೆ ನಿನ್ನೆ ವ್ಯಕ್ತಿ ಮೃತಪಟ್ಟಿದ್ದಾರೆ ಮೆಗ್ಗಾನ್ ಅಸ್ಪತ್ರೆ ಸಾವಿನ ಕೂಪವಾಗಿದೆ ಹರತಾಳು ಹಾಲಪ್ಪ ಆಕ್ರೋಶ ಹೊರಹಾಕಿದರು. ಮಣಿಪಾಲ್​ನಲ್ಲಿ ಈ ಹಿಂದೆ ಚಿಕಿತ್ಸೆ ಪಡೆದ ಬಿಲ್ ಪಾವತಿಸಿಲ್ಲ ಎಂದು ರೋಗಿಗಳನ್ನು ದಾಖಲಿಸಿಕೊಳ್ಳುತ್ತಿಲ್ಲ. ಬಾಕಿ ಇರುವ ಹಣ ಹಾವತಿಸಿ ಎಂದು ಒತ್ತಾಯಿಸಿದರು. ಕಾಂಗ್ರೆಸ್​ನ ಶಿವಾನಂದ ಪಾಟೀಲ್ ಮಧ್ಯಪ್ರವೇಶಿಸಿ, ನಾನು ಆರೋಗ್ಯ ಸಚಿವರಾಗಿದ್ದಾಗ ಮಂಗನಕಾಯಿಲೆ ತಡೆಯಲು 3 ತಿಂಗಳ ಮೊದಲೇ ವಾಕ್ಸಿನೇಷನ್ ಮಾಡಿದ್ದೆವು. ಸಾಗರದಲ್ಲಿ ಪ್ರಯೋಗಾಲಯ ಸ್ಥಾಪಿಸಲು 5 ಕೋಟಿ ರೂ. ಕೊಟ್ಟಿದ್ದೆವು. ಆದರೆ ಪ್ರಯೋಗಾಲಯ ಸ್ಥಾಪಿಸಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಗರದಲ್ಲಿ ಪ್ರಯೋಗಾಲಯ
ಮಂಗನ ಕಾಯಿಲೆ ಪತ್ತೆ ಪ್ರಯೋಗಾಲಯಕ್ಕೆ ಸಾಗರದಲ್ಲಿ 6 ಎಕರೆ ಜಮೀನು ಗುರುತಿಸಲಾಗಿದೆ. ಶೀಘ್ರದಲ್ಲೇ ಪ್ರಯೋಗಾಲಯ ಸ್ಥಾಪಿಸಲಾಗುವುದು ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು. ಮಂಗನ ಕಾಯಿಲೆಯಿಂದ ಇದುವರೆಗೆ 15 ಜನ ಸತ್ತಿದ್ದಾರೆ ಎಂಬ ಸಚಿವರ ಪ್ರಸ್ತಾಪಕ್ಕೆ ಹರತಾಳು ಹಾಲಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿ, ಸತ್ತವರ ಸಂಖ್ಯೆ 23. ಅಧಿಕಾರಿಗಳು ತಪ್ಪು ಮಾಹಿತಿ ಕೊಡುತ್ತಿದ್ದಾರೆ ಎಂದು ಕೈಯಲ್ಲಿದ್ದ ಪೇಪರ್ ಅನ್ನು ಟೇಬಲ್ ಮೇಲೆ ಎಸೆದರು. ಆಗ ಎಚ್ಚೆತ್ತ ಶ್ರೀರಾಮುಲು, ಆ ಭಾಗದ ಶಾಸಕರನ್ನು ಒಗ್ಗೂಡಿಸಿ ಸಿಎಂ ನೇತೃತ್ವದಲ್ಲಿ ಸಭೆಯೊಂದನ್ನು ಸಂಘಟಿಸಿ ಪರಿಹಾರ ಕಲ್ಪಿಸುವುದಾಗಿ ಭರವಸೆ ನೀಡಿದರು.
ಸೊರಬಕ್ಕೂ ಕೆಎಫ್​ಡಿ
ಸೊರಬ: ತಾಲೂಕಿನ ಗಡಿಭಾಗದ ಕೋಡಂಬಿ ಗ್ರಾಮದ ಈಶ್ವರ್ ಕನ್ನಾನಾಯ್್ಕ (58)ಗೆ ಕೆಎಫ್​ಡಿ ಸೋಂಕು ತಗುಲಿರುವುದು ದೃಢಪಟ್ಟಿದೆ. ಇವರಿಗೆ ಮಾ.9ರಂದು ಜ್ವರ ಕಾಣಿಸಿಕೊಂಡಿದ್ದು, ಸಿದ್ದಾಪುರ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ಪ್ರಯೋಗಾಲಯಕ್ಕೆ ಕಳುಹಿಸಿದ್ದ ರಕ್ತದ ಮಾದರಿಯಲ್ಲಿ ಪಾಸಿಟಿವ್ ವರದಿ ಬಂದಿದೆ. ಆರೋಗ್ಯ ಇಲಾಖೆ ಮಾ.20ರಿಂದ ಕೋಡಂಬಿ ಸುತ್ತುಮುತ್ತ ಐದು ಕಿ.ಮೀ. ವ್ಯಾಪ್ತಿಯ ಗ್ರಾಮಗಳಲ್ಲಿ ಚುಚ್ಚುಮದ್ದು ಹಾಕಲು ತಯಾರಿ ನಡೆಸಿದೆ.
ಸಿದ್ದಾಪುರದಲ್ಲಿ ಎರಡು ಪ್ರಕರಣ
ಸಿದ್ದಾಪುರ: ತಾಲೂಕಿನಲ್ಲಿ ಸೋಮವಾರ ಮತ್ತೆರಡು ಪ್ರಕರಣ ದಾಖಲಾಗಿದ್ದು, ಒಟ್ಟು ಹತ್ತಕ್ಕೇರಿದೆ. ತ್ಯಾಗಲಿಯ 55 ವರ್ಷದ ಮಹಿಳೆ ಹಾಗೂ ಬೈಲಳ್ಳಿಯ 70 ವರ್ಷದ ವ್ಯಕ್ತಿಗೆ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಇಬ್ಬರನ್ನೂ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕರೊನಾ ಲಕ್ಷಣಗಳಿದ್ದು ಮುಚ್ಚಿಟ್ಟರೆ 6 ತಿಂಗಳು ಜೈಲು ಶಿಕ್ಷೆ; ಸುಳ್ಳು ಸುದ್ದಿ ಹರಡಿಸುವವರಿಗೂ ಇದೆ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
