| ರುದ್ರಣ್ಣ ಹರ್ತಿಕೋಟೆ ಬೆಂಗಳೂರು
ಕನ್ನಡ ಭಾಷೆಯನ್ನು ಉಳಿಸಿ, ಬೆಳೆಸುವ ಜತೆಯಲ್ಲೇ ಇಂದಿನ ತಂತ್ರಜ್ಞಾನಕ್ಕೆ ಒಗ್ಗಿಸುವ ಪ್ರಯತ್ನಕ್ಕೆ ಕೈಹಾಕಿರುವ ರಾಜ್ಯ ಸರ್ಕಾರ ನ.1ರಿಂದಲೇ ‘ನಾವು ನಮ್ಮ ಭಾಷೆ- ಸಂವಹನ’ ಎಂಬ ರಾಜ್ಯೋತ್ಸವದ ಉಡುಗೊರೆಯನ್ನು ಕನ್ನಡಿಗರಿಗೆ ನೀಡಲು ಸಂಕಲ್ಪ ತೊಟ್ಟಿದೆ. ಆಡಳಿತ ಸೇರಿ ಸಾರ್ವಜನಿಕ ಸೇವೆಯಲ್ಲಿ ಅಲ್ಪಸ್ವಲ್ಪ ಬಳಕೆಯಾಗುತ್ತಿರುವ ಇಂಗ್ಲಿಷ್ ಅನ್ನು ಬದಿಗೊತ್ತಿ ಸ್ವತಂತ್ರವಾಗಿ ಕನ್ನಡವನ್ನೇ ಸಂಪೂರ್ಣವಾಗಿ ಬಳಸಲು ಅನುವಾಗುವಂತೆ ತಜ್ಞರ ಜತೆಗೂಡಿ ಹೊಸ ತಂತ್ರಾಂಶ ಸಿದ್ಧಪಡಿಸುವ ಕಾರ್ಯಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೈಹಾಕಿದೆ.
ಸರ್ಕಾರದ ಸೂಚನೆ ಮೇರೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಿರಂತರ ಪ್ರಯತ್ನ ನಡೆಸಿದ ಫಲವಾಗಿ ಹೊಸ ತಂತ್ರಾಂಶಗಳು ಸಿದ್ಧವಾಗಿವೆ. ವಿವಿಧ ಇಲಾಖೆಗಳ ಜಾಲತಾಣಗಳು ಕನ್ನಡದಲ್ಲಿಯೇ ಇರಬೇಕೆಂಬ ಆಶಯದೊಂದಿಗೆ ಆರಂಭಿಸಿದ ಪ್ರಯತ್ನ ಹೊಸ ಹೊಸ ತಂತ್ರಾಂಶ ಸಿದ್ಧಪಡಿಸುವುದಕ್ಕೆ ವೇದಿಕೆಯಾಗಿದೆ. ತಂತ್ರಜ್ಞಾನ ಬೆಳೆದಂತೆ ಕನ್ನಡವನ್ನು ಅದಕ್ಕೆ ಹೊಂದಿಸುವ ಪ್ರಯತ್ನಕ್ಕೀಗ ಯಶಸ್ಸು ಸಿಗಲಾರಂಭಿಸಿದೆ.
ಇಮೇಲ್ ಯುಆರ್​ಎಲ್:ಇ ಮೇಲ್ ವಿಳಾಸವನ್ನು ಸದ್ಯ ಇಂಗ್ಲಿಷ್​ನಲ್ಲಿ ಬರೆಯಲಾಗುತ್ತದೆಯಾದರೂ ಕನ್ನಡದಲ್ಲೂ ಬರೆಯುವ ಪ್ರಯತ್ನ ಮಾಡಲಾಗುತ್ತಿದೆ. ವೆಬ್ ವಿಳಾಸವನ್ನೂ ಕನ್ನಡದಲ್ಲಿಯೇ ನೀಡಲಾಗುತ್ತದೆ. ಯುಆರ್​ಎಲ್ ಒದಗಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳು ಕೂಡ ಪ್ರಾದೇಶಿಕ ಭಾಷೆಗಳಲ್ಲಿ ಈ ಸೌಲಭ್ಯವನ್ನು ನೀಡುತ್ತಿವೆ. ಆ ನಿಟ್ಟಿನಲ್ಲಿ ನಡೆಸಿದ ಮಾತುಕತೆ ಫಲಪ್ರದವಾಗಿದೆ. ರಾಜಸ್ಥಾನ ಸರ್ಕಾರ ಇಂತಹ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಕನ್ನಡದಲ್ಲಿ ಬಳಕೆ ಸಾಧ್ಯವಾದರೆ ಕರ್ನಾಟಕ ಎರಡನೇ ರಾಜ್ಯವಾಗಲಿದೆ. ರಾಜಸ್ಥಾನದಲ್ಲಿ 1.10 ಕೋಟಿ ಇಮೇಲ್​ಗಳು ಅಲ್ಲಿನ ಭಾಷೆಯಲ್ಲಿ ಯುಆರ್​ಎಲ್ ಹೊಂದಿವೆ. ಸರ್ಕಾರ ಮತ್ತು ಜನರ ನಡುವಿನ ಸಂವಹನಕ್ಕೆ ಬಳಸಲಾಗುತ್ತದೆ. ಅತ್ಯಂತ ಕಡಿಮೆ ವೆಚ್ಚವಾಗುತ್ತದೆ.
ಇಮೇಲ್ ಸಂಗ್ರಹಿಸಿ ಸರ್ಕಾರದ ಮಾಹಿತಿಯನ್ನು ಅದರ ಮೂಲಕವೇ ಜನರಿಗೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಸುಮಾರು 2.50 ಕೋಟಿ ಜನ ಬಳಕೆ ಮಾಡಬಹುದೆಂಬ ಅಂದಾಜು ಸಹ ಮಾಡಲಾಗಿದೆ.ರಾಜ್ಯದಲ್ಲಿಯೂ ಸಹ ಆರಂಭದಲ್ಲಿ ಸರ್ಕಾರದಿಂದ ಮಾತ್ರ ಪ್ರಾಯೋಗಿಕವಾಗಿ ಬಳಸಲಾಗುತ್ತದೆ. ಒಂದು ವರ್ಷದ ನಂತರ ಸಾರ್ವಜನಿಕ ಸೇವೆಗೂ ಒದಗಿಸುವ ಉದ್ದೇಶವಿದೆ. ಕರ್ನಾಟಕ (ಡಾಟ್) ಭಾರತ ಮತ್ತು (ಡಾಟ್) ಕರ್ನಾಟಕ ಎಂಬ ಹೆಸರಿನಲ್ಲಿ ಯುಆರ್​ಎಲ್ ನೋಂದಾಯಿಸಲಾಗುತ್ತದೆ.
ಆಪ್​ಗಳು:ಪುಸ್ತಕಗಳನ್ನು ಓದುವುದರ ಜತೆಗೆ ಕೇಳುವ ಸೌಭಾಗ್ಯ ಒದಗಿಸುವ ಆಪ್​ಗಳು ಬಂದಿವೆ. ಅವುಗಳನ್ನು ಜನರಿಗೆ ಒಂದೆಡೆ ಸಿಗುವಂತೆ ನೋಡಿಕೊಳ್ಳಲು ವೇದಿಕೆ ಕಲ್ಪಿಸಲಾಗುತ್ತಿದೆ. ಇದಕ್ಕೆ ಇ ಆಡಳಿತ ಇಲಾಖೆಯ ಸಹಕಾರ ಪಡೆಯಲಾಗುತ್ತಿದೆ. ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಗಮನದಲ್ಲಿಟ್ಟುಕೊಂಡು ಹೊಸ ಹೊಸ ಟೂಲ್​ಗಳನ್ನು ಸಿದ್ಧಪಡಿಸಿದೆ. ಬೇರೆ ಬೇರೆ ಭಾಷೆಗಳಿಗೆ ಭಾಷಾಂತರಕ್ಕೆ ಅನುಕೂಲವಾಗುವಂತೆ ಆಪ್ ಸಿದ್ಧಪಡಿಸಲಾಗುತ್ತಿದೆ. ಇದರ ಜತೆಗೆ ಯಾವುದೇ ಸಭೆ, ಸಮಾರಂಭದ, ಭಾಷಣಗಳನ್ನು ಟೈಪ್ ಮಾಡಲು ಅನುಕೂಲವಾಗುವಂತಹ ಸ್ಪೀಚ್ ಟೂ ಟೆಕ್ಸ್್ಟ ತಂತ್ರಾಂಶ ಸಹ ಸಿದ್ಧವಾಗಿದೆ. ಇವುಗಳ ಪ್ರಯೋಗ ನಡೆಯುತ್ತಿದೆ.
ಕನ್ನಡ ಭಾಷಾ ಕೌಶಲ:ರಾಜ್ಯ ಸರ್ಕಾರ ಸರೋಜಿನಿ ಮಹಿಷಿ ವರದಿಯನ್ವಯ ಉದ್ಯೋಗದಲ್ಲಿ ಕನ್ನಡ ಅನುಷ್ಠಾನಕ್ಕೆ ಮುಂದಾಗಿದೆ. ಆದರೆ ರಾಜ್ಯದಲ್ಲಿದ್ದರೂ ಕನ್ನಡವನ್ನು ಕಲಿಯದ ಕನ್ನಡಿಗರು, ವಿದೇಶ ಅಥವಾ ಹೊರ ರಾಜ್ಯದಲ್ಲಿ ನೆಲೆಸಿದ ಕನ್ನಡಿಗರು ಇದರಿಂದ ವಂಚಿತರಾಗಬಾರದು ಎಂಬ ಕಾರಣದಿಂದ ಆನ್​ಲೈನ್ ಮೂಲಕ ಕನ್ನಡ ಭಾಷಾ ಕೌಶಲ ತರಬೇತಿ ಹಾಗೂ ಪರೀಕ್ಷೆ ನಡೆಸಿ ಪ್ರಮಾಣ ಪತ್ರ ನೀಡುವುದಕ್ಕೆ ಸಂಬಂಧಿಸಿದಂತೆ ತಂತ್ರಾಂಶ ರೂಪಿಸಲು ನಾಲ್ಕು ತಿಂಗಳಿನಿಂದ ಪ್ರಾಧಿಕಾರ ಸಿದ್ಧತೆ ನಡೆಸಿದೆ. ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್. ನಾಗಾಭರಣ ಅಧ್ಯಕ್ಷತೆಯಲ್ಲಿ ತಜ್ಞರು ಹಾಗೂ ಅಧಿಕಾರಿಗಳನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಅಗತ್ಯವಾದ ತಂತ್ರಾಂಶ ರೂಪಿಸಲು ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್​ನಿಂದ ಮಾಹಿತಿ ಪಡೆಯಲಾಗಿದೆ. ಅವರು 1.10 ಕೋಟಿ ರೂ.ಗಳ ಅಂದಾಜು ವೆಚ್ಚದ ಪ್ರಸ್ತಾವನೆ ಸಲ್ಲಿಸಿದ್ದಾರೆ. ಪ್ರಾಯೋಗಿಕವಾಗಿ 100 ಜನರಿಗೆ ಪರೀಕ್ಷೆ ನಡೆಸಿ, ನಂತರ ವಿಸ್ತರಣೆ ಮಾಡುವ ಉದ್ದೇಶವಿದೆ.
ಕನ್ನಡದಲ್ಲಿ ಇಮೇಲ್, ಯುಆರ್​ಎಲ್, ಕನ್ನಡದ ಕೀಲಿಮಣೆ, ಆಡಿಯೋ ಪುಸ್ತಕ ಆಪ್​ಗಳಿಗೆ ವೇದಿಕೆ, ಶಿಕ್ಷಣಕ್ಕೆ ಬೇಕಾದ ಟೂಲ್ಸ್​ಗಳು, ಭಾಷಾಂತರಕ್ಕೆ ಅನುಕೂಲವಾಗುವ ತಂತ್ರಾಂಶ, ಸ್ಪೀಕ್​ ಟು ಟೆಕ್ಸ್ಟ್​, ಆನ್​​ಲೈನ್​ನಲ್ಲಿ ಕನ್ನಡ ಭಾಷಾ ಕೌಶಲ ತರಬೇತಿ
ಇಮೇಲ್​ನಲ್ಲಿ ಕನ್ನಡ ಯುಆರ್​ಎಲ್ 2.50 ಕೋಟಿ ಜನ ಬಳಸಬಹುದು
ರಾಜಸ್ಥಾನ ನಂತರ ಸ್ಥಳೀಯ ಭಾಷೆ ಬಳಸುವ ಎರಡನೇ ರಾಜ್ಯ ಕರ್ನಾಟಕ
ಕಂಪ್ಯೂಟರ್​ಗೆ ಈಗ ಇಂಗ್ಲಿಷ್ ಕೀಲಿಮಣೆ ಬಳಸಲಾಗುತ್ತಿದೆ. ಆದರೆ ಕನ್ನಡ ಅಕ್ಷರಗಳ ಕೀಲಿಮಣೆಯನ್ನೇ ಅಭಿವೃದ್ಧಿ ಪಡಿಸಲಾಗಿದೆ. ಗುರುಪ್ರಸಾದ್ ಎಂಬ ತಜ್ಞರು ರೂಪಿಸಿಕೊಟ್ಟಿರುವ ಇದನ್ನು ಅರ್ಧಗಂಟೆಯಲ್ಲಿ ಕಲಿಯಬಹುದಾಗಿದೆ. ಯೂನಿಕೋಡ್​ನಲ್ಲಿಯೇ ಟೈಪ್ ಆಗುವುದರಿಂದ ಕನ್ವರ್ಟ್ ಮಾಡುವ ಅಗತ್ಯವೂ ಇರುವುದಿಲ್ಲ.
ಹೊಸ ಹೊಸ ತಂತ್ರಾಂಶಕ್ಕೆ ಕನ್ನಡವನ್ನು ಒಗ್ಗಿಸುವ ಪ್ರಯತ್ನ ನಡೆಸಲಾಗಿದೆ. ಸರ್ಕಾರದ ಬಳಕೆಗೆ ಮೊದಲ ಆದ್ಯತೆ ನೀಡಿ ನಂತರ ಸಾರ್ವಜನಿಕ ಸೇವೆಗೆ ನೀಡಲಾಗುತ್ತದೆ. ನ.1ರಿಂದ ಎಲ್ಲ ತಂತ್ರಾಂಶಗಳ ಬಳಕೆ ಆರಂಭವಾಗುತ್ತದೆ. ಈ ನಿಟ್ವಿನಲ್ಲಿ ಸಭೆ ನಡೆಸಲಾಗಿದೆ.
| ಟಿ.ಎಸ್.ನಾಗಾಭರಣ,ಅಧ್ಯಕ್ಷ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೇರೆ ಬೇರೆ ಸಂಸ್ಥೆಗಳ ಮತ್ತು ತಜ್ಞರ ಸಹಕಾರದಲ್ಲಿ ವಿವಿಧ ತಂತ್ರಾಂಶಗಳನ್ನು ರೂಪಿಸುತ್ತಿದೆ. ಇದರಿಂದ ಭಾಷೆಯ ಬೆಳವಣಿಗೆಗೆ ಸಹಾಯಕವಾಗುತ್ತದೆ.
| ಸಿ.ಟಿ.ರವಿಕನ್ನಡ ಮತ್ತು ಸಂಸ್ಕೃತಿ ಸಚಿವ
ಕನ್ನಡ ಪರವಾಗಿ ಹೊಸ ಆವಿಷ್ಕಾರಗಳಿಗೆ ಪ್ರಾಧಿಕಾರ ಪ್ರಯತ್ನ ನಡೆಸಿದೆ. ಅದರಲ್ಲಿ ಯಶಸ್ಸಿಯೂ ಆಗುತ್ತಿದೆ. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಅನೇಕ ಕೆಲಸಗಳು ಪ್ರಾಧಿಕಾರದಿಂದ ಆಗುತ್ತಿವೆ.
| ಡಾ. ಕೆ. ಮುರಳೀಧರ, ಕಾರ್ಯದರ್ಶಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರ
18 ಸಾವಿರ ಜನರಿಗೆ ಆಕ್ಸ್​ಫರ್ಡ್​ ವಿವಿ ಲಸಿಕೆ ಪ್ರಯೋಗ; ಮತ್ತೆ ಶುರುವಾಯ್ತು ಕ್ಲಿನಿಕಲ್​ ಟ್ರಯಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − two =
Remember me
