ಕರೊನಾ ವೈರಸ್ ಆತಂಕ ದಿನೇದಿನೆ ಹೆಚ್ಚುತ್ತಿದೆ. ಭಾರತಕ್ಕೆ ಕರೊನಾ ವೈರಸ್​ನಿಂದ ಹೆಚ್ಚೇನೂ ಅಪಾಯವಾಗುವುದಿಲ್ಲ ಎಂದು ಈಗಾಗಲೇ ಹಲವು ಜ್ಯೋತಿಷಿಗಳು ಭವಿಷ್ಯ ನುಡಿದಿದ್ದಾರೆ. ಆದರೂ ದಿನೇದಿನೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವುದನ್ನು ನೋಡುತ್ತಿದ್ದರೆ ಸಹಜವಾಗಿ ಆತಂಕ ಆಗುತ್ತಿದೆ.
ಹೀಗಿರುವಾಗ ಚಿಕ್ಕಮಗಳೂರಿನ ಕೊಪ್ಪದ ಗೌರಿಗದ್ದೆ ಆಶ್ರಮದ ಅವಧೂತ ವಿನಯ್​ ಗುರೂಜಿ ಅವರು ಸಮಾಧಾನಕರ ವಿಷಯವೊಂದನ್ನು ಹೇಳಿದ್ದಾರೆ.
ಕರೊನಾ ಸೋಂಕಿನ ಪ್ರಮಾಣ ಮೇ 15ರ ನಂತರ ಕಡಿಮೆಯಾಗಲಿದೆ. ಹಾಗಾಗಿ ಹೆದರಬೇಕಾಗಿಲ್ಲ. ಆದರೆ ಇನ್ನೂ ಎರಡು ವರ್ಷ ಆರ್ಥಿಕ ಯುದ್ಧ ಎದುರಾಗುತ್ತದೆ. ಅದಕ್ಕೆ ನಾವು ಸಿದ್ಧರಾಗಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕರೊನಾ ಭೀತಿ ನಡುವೆಯೂ ವಿಶ್ವದಾದ್ಯಂತ ಸಿಲುಕಿರೋ ಭಾರತೀಯರನ್ನು ಕರೆತರಲು ಸರ್ಕಾರದ ಮೆಗಾ ಯೋಜನೆ!
ನಾವು ಇನ್ನೂ ಎರಡು ವರ್ಷ ಗಾಂಧೀಜಿಯವರು ಹೇಳಿದಂತೆ ಸರಳ ಜೀವನ ನಡೆಸಬೇಕು. ಇಲ್ಲದವರಿಗೆ ಇದ್ದವರು ಸಹಾಯ ಮಾಡಬೇಕು. ಪ್ರವಾಸ, ಶಾಪಿಂಗ್ ಎಂದು ವೃಥಾ ಖರ್ಚು ಮಾಡುವ ಬದಲು ಅಗತ್ಯವಿರುವ ಧಾನ್ಯವನ್ನು ಸಂಗ್ರಹಿಸಿಕೊಳ್ಳೋಣ. 10-11 ಜೊತೆ ಬಟ್ಟೆಗಳ ಖರೀದಿ ಮಾಡುವ ಬದಲು, 3-4 ಜೊತೆ ಖರೀದಿಸೋಣ.ಎಲ್ಲವನ್ನೂ ಸರ್ಕಾರವೇ ಮಾಡಲಿ ಎಂದು ಕುಳಿತುಕೊಳ್ಳಬಾರದು. ನಮ್ಮ ಕೈಲಾದಷ್ಟು ಸಹಾಯವನ್ನು ಬಡವರಿಗೆ ಮಾಡಬೇಕು ಎಂದು ವಿನಯ್​ ಗುರೂಜಿ ಹೇಳಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಈ ಔಷಧಕ್ಕಿದೆಯಂತೆ ಕರೊನಾ ಗುಣಪಡಿಸುವ ಶಕ್ತಿ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + 12 =
Remember me
