ಮದ್ದೂರು:ಕರೊನಾ ಪರೀಕ್ಷೆ ಮಾಡಿಸದೆ ಬೆಂಗಳೂರಿನಿಂದ ತಂದ ಮಹಿಳೆಯ ಶವವನ್ನು ಬುಧವಾರ ತಾಲೂಕು ಆಡಳಿತ ವಾಪಸ್ ಕಳುಹಿಸಿತು. ಕೆ.ಕೋಡಿಹಳ್ಳಿಯ ಗ್ರಾಮದ ಈರೇಗೌಡರ ಪತ್ನಿ ಇಂದುಮತಿ (60) ಅವರನ್ನು ಜಾಂಡೀಸ್ ಸಮಸ್ಯೆ ಹಿನ್ನೆಲೆ ಬೆಂಗಳೂರಿನ ಚಾಮರಾಜಪೇಟೆಯ ಲೀಲಾವತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟಿದ್ದರು. ಕುಟುಂಬಸ್ಥರು ಸಂಜೆ 4 ಗಂಟೆಯಲ್ಲಿ ಶವವನ್ನು ಗ್ರಾಮಕ್ಕೆ ತರುವ ಸಂದರ್ಭ ನಿಡಘಟ್ಟ ಚೆಕ್​ಪೋಸ್ಟ್ ಬಳಿ ತಡೆದ ಅಧಿಕಾರಿಗಳು, ಕರೊನಾ ಪರೀಕ್ಷೆ ಮಾಡಿಸದ ಕಾರಣ ವಾಪಸ್ ಕಳುಹಿಸಿದರು. ನಂತರ ಶವವನ್ನು ವಾಹನದ ಮೂಲಕ ಚನ್ನಪಟ್ಟಣಕ್ಕೆ ತೆಗೆದುಕೊಂಡು ಹೋಗಿ ಅಧಿಕಾರಿಗಳ ಕಣ್ತಪ್ಪಿಸಿ ಹಳ್ಳಿಗಳ ಮೂಲಕ ಗ್ರಾಮವನ್ನು ತಲುಪಿ, ಅಂತ್ಯಸಂಸ್ಕಾರ ಮಾಡಲು ಮುಂದಾಗಿದ್ದರು. ವಿಷಯ ತಿಳಿದ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ ಶವ ಸಂಸ್ಕಾರಕ್ಕೆ ಅವಕಾಶ ಮಾಡಿಕೊಡದೆ, ಶವವನ್ನು ರಾಮನಗರ ಜಿಲ್ಲೆಯಿಂದ ಹೊರಗೆ ಕಳುಹಿಸಿದ್ದಾರೆ.
ಸೇಡು ತೀರಿಸಿಕೊಂಡ ಸೇನೆ: ಇಬ್ಬರು ಹಿಜ್ಬುಲ್ ಉಗ್ರರು ಫಿನಿಶ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 + 14 =
Remember me
