ಬೆಂಗಳೂರು:ಬಿಎಂಪಿ ಖಾಸಗಿ ಸಹಭಾಗಿತ್ವದಲ್ಲಿ ಫ್ರೀಡಂಪಾರ್ಕ್ ಪ್ರತಿಭಟನಾ ಸಭಾಂಗಣ ಕಟ್ಟಡದಲ್ಲಿ ನಿರ್ಮಾಣ ಮಾಡಿರುವ ದೇಶದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಸೆಂಟರ್ ಶುಕ್ರವಾರ ಲೋಕಾರ್ಪಣೆಗೊಳ್ಳಲಿದೆ.
ಈ ಹಿಂದೆ ನಿಗದಿಗೊಳಿಸಿದ್ದಂತೆ ಜೂ.20ಗುರುವಾರ ಲೋಕಾರ್ಪಣೆಗೊಳ್ಳಬೇಕಿತ್ತು.ಆದರೆ ಕಾರಣಾಂತರದಿಂದ ಶುಕ್ರವಾರಕ್ಕೆ ಮುಂದೂಡಲ್ಪಟ್ಟಿದೆ.ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಹತ್ವಾಕಾಂಕ್ಷಿ ಕೇಂದ್ರವನ್ನು ಉದ್ಘಾಟನೆಗೊಳಿಸಲಿದ್ದು,ಬೆಂಗಳೂರು ಉಸ್ತುವಾರಿಯೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
ಮೆಜೆಸ್ಟಿಕ್,ಮಾರ್ಕೆಟ್,ವಿಧಾನಸೌಧ ಸುತ್ತಮುತ್ತಲ ಪ್ರದೇಶದ ವಾಹನಗಳ ಪಾರ್ಕಿಂಗ್ ಸಮಸ್ಯೆಗೆ ಈ ಪಾರ್ಕಿಂಗ್ ಸೆಂಟರ್ ಪರಿಹಾರವಾಗಿದ್ದು,ದೇಶದ ಮೊದಲ ಸ್ಮಾರ್ಟ್ ಪಾರ್ಕಿಂಗ್ ಹಾಗೂ ಬ್ರಾಂಡ್ ಬೆಂಗಳೂರು ಯೋಜನೆಯ ಮೊದಲ ಕಾರ್ಯಕ್ರಮ ಎಂಬ ಹೆಗ್ಗಳಿಕೆ ಈ ಪಾರ್ಕಿಂಗ್ ಸೆಂಟರ್ ಹೊಂದಿದೆ. ಪ್ರಿನ್ಸ್ ರಾಯಲ್ ಪಾರ್ಕಿಂಗ್ ಸಲ್ಯೂಷನ್ ಸಂಸ್ಥೆಯು ಇಲ್ಲಿನ ಪಾರ್ಕಿಂಗ್ ವ್ಯವಸ್ಥೆಯನ್ನು ವಿನ್ಯಾಸಗೊಳಿಸಿದೆ.
ದೇಶದಲ್ಲಿ ಇದೇ ಮೊದಲ ಬಾರಿಗೆ ಪಾರ್ಕಿಂಗ್ ಕೇಂದ್ರವೊಂದು ಾಸ್ಟ್‌ಟ್ಯಾಗ್ ಮೂಲಕ ಹಣಪಾವತಿಗೆ ವ್ಯವಸ್ಥೆ ಕಲ್ಪಿಸಿದೆ.ವಾಹನಗಳ ಆಗಮನ,ನಿರ್ಗಮನ,ಅವಧಿ,ಹಣ ಪಾವತಿ,ಸರಿಯಾದ ನಿಲುಗಡೆ,ಅಪಾಯದ ಮುನ್ಸೂಚನೆ,ಮಹಿಳೆಯರಿಗೆ ಭದ್ರತಾ ವ್ಯವಸ್ಥೆ,ಅಂಗವಿಕಲರಿಗೆ ಆದ್ಯತೆ ಹೀಗೆ ಪ್ರತಿಯೊಂದನ್ನು ತಂತ್ರಜ್ಞಾನದ ಮೂಲಕ ವಿನ್ಯಾಸಗೊಳಿಸಲಾಗಿದೆ.ಸುಮಾರು600ಕಾರು ಹಾಗೂ750ಬೈಕ್‌ಗಳನ್ನು ಇಲ್ಲಿ ನಿಲ್ಲಿಸಬಹುದಾಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eight + twenty =
Remember me
