ಬೆಂಗಳೂರು: ಕರೊನಾ ಭೀತಿಯಿಂದ ಇಡೀ ರಾಜ್ಯ ಗಾಬರಿಯಲ್ಲಿದೆ. ಇದೇ ಹೊತ್ತಲ್ಲಿ ವಿಧಾನಸಭೆಯಲ್ಲಿ ಸರ್ಕಾರವೇ ನೀಡಿರುವ ಅಂಕಿಅಂಶ ಗಮನಿಸಿದರೆ ಆರೋಗ್ಯ ಇಲಾಖೆ ಯಾವ ರೀತಿಯಲ್ಲಿದೆ ಎಂಬುದು ಗಮನಾರ್ಹ ವಿಚಾರ. ಇಲಾಖೆಯಲ್ಲಿ ‘ಎ’, ‘ಬಿ’ ಮತ್ತು ‘ಸಿ’ ಶ್ರೇಣಿಯ ಮಂಜೂರಾದ ಹುದ್ದೆಗಳು 51,167 ಇದ್ದರೆ, 31,875 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಅಂದರೆ ಅಂದಾಜು ಶೇ.48 ಕೊರತೆ ಕಾಣಿಸಿದೆ. ಜನರಲ್ ಡ್ಯೂಟಿ ಮೆಡಿಕಲ್ ಆಫೀಸರ್ 3046 ಮಂಜೂರಾದ ಹುದ್ದೆಗಳಾಗಿದ್ದು, 2173 ಮಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ 712 ತಜ್ಞ ವೈದ್ಯರ ಕೊರತೆ ಇದೆ. ಹೆಲ್ತ್ ಪ್ರೋಗ್ರಾಮ್ ಅಧಿಕಾರಿಗಳು 583, ಬ್ಲಾಕ್ ಹೆಲ್ತ್ ಎಜುಕೇಶನ್ ಆಫೀಸರ್ 176 ಹುದ್ದೆ ಖಾಲಿ ಇದೆ. ತಾತ್ಕಾಲಿಕವಾಗಿ 837 ಹುದ್ದೆಗಳಿಗೆ ಮಂಜೂರಾತಿ ನೀಡಲಾಗಿದ್ದು ಕೊರತೆಗಳನ್ನು ನೀಗಿಸಲು ಪ್ರಯತ್ನ ನೀಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಶ್ರೀರಾಮುಲು ಅವರು ಶಾಸಕ ರವಿಸುಬ್ರಹ್ಮಣ್ಯ ಪ್ರಶ್ನೆಗೆ ಉತ್ತರಿಸಿದರು.
ಪರೀಕ್ಷೆ ಮುಂದೂಡಿಕೆ
ಕೆಇಎ ಎಪಿಪಿ-ಎಜಿಪಿ ನೇಮಕಾತಿ ಸಂಬಂಧ ಮಾ.28ರಂದು ನಡೆಸಲು ಉದ್ದೇಶಿಸಲಾಗಿದ್ದ ಪರೀಕ್ಷೆಯನ್ನು ಅನಿರ್ಧಿಷ್ಟಾವಧಿವರೆಗೆ ಮುಂದೂಡಲಾಗಿದೆ.
ಎಸ್ಸೆಸ್ಸೆಲ್ಸಿ ಪರೀಕ್ಷೆ ಕುರಿತು ಮಾ.23ರ ನಂತರ ತೀರ್ಮಾನ ತೆಗೆದುಕೊಳ್ಳಲು ಶಿಕ್ಷಣ ಇಲಾಖೆ ನಿರ್ಧರಿಸಿದೆ.
ಸಾರಿಗೆ ಬಸ್​ಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ಪ್ರಯಾಣಿಕರು ಟಿಕೆಟ್ ರದ್ದುಗೊಳಿಸಿದರೆ ಮಾ. 31ರವರೆಗೆ ಶುಲ್ಕ ವಿಧಿಸುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಪಿಎಂ ಸಂವಾದ
ಬೆಂಗಳೂರು: ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಶುಕ್ರವಾರ (ಮಾ.20) ಎಲ್ಲ ರಾಜ್ಯಗಳ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿ ಜತೆಗೆ ವಿಡಿಯೋ ಸಂವಾದ ನಡೆಸಲಿದ್ದಾರೆ. ಕೇಂದ್ರ ಆರೋಗ್ಯ ಸಚಿವರ ಜತೆ ಮಧ್ಯಾಹ್ನ 4 ಗಂಟೆಗೆ ನಡೆಯಲಿರುವ ವಿಡಿಯೋ ಸಂವಾದದಲ್ಲಿ ಕೆಲವೊಂದು ಸಲಹೆ ಸೂಚನೆಗಳನ್ನು ಪ್ರಧಾನಿ ನೀಡಲಿದ್ದಾರೆ. ಆರೋಗ್ಯ ಸಚಿವ ಬಿ. ಶ್ರೀರಾಮುಲು, ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹಾಗೂ ಅಧಿಕಾರಿಗಳು ಭಾಗವಹಿಸಿ ರಾಜ್ಯ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗೆ ವಿವರಿಸಲಿದ್ದಾರೆ.
ಕೋಟಿ ಕೋಟಿ ನುಂಗಿದ ಕರೊನಾ ವೈರಸ್​ ಸೋಂಕು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 + 2 =
Remember me
