ಬೆಂಗಳೂರು:ಕೇಂದ್ರದ ಲಾಕ್​ಡೌನ್ ಮಾರ್ಗಸೂಚಿಗಳನ್ವಯ ಬೆಂಗಳೂರಿನಲ್ಲಿ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸುವುದಕ್ಕೆ ನಾಲ್ಕು ವಲಯಗಳಾಗಿ ವಿಂಗಡಿಸಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಶನಿವಾರ ಮುಖ್ಯಮಂತ್ರಿ ಜತೆಗಿನ ಸಭೆಯ ನಂತರ ಮಾತನಾಡಿ, ಬೆಂಗಳೂರಿನಲ್ಲಿ ಜನಸಂಖ್ಯೆ ಹೆಚ್ಚಿರುವ ಕಾರಣದಿಂದ ಆರ್ಥಿಕ ಚಟುವಟಿಕೆಗಳು ನಡೆಯಲೇಬೇಕಾಗುತ್ತದೆ. ರಾಜಧಾನಿಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಂಟೇನ್ಮೆಂಟ್ ಝೋನ್​ಗಳನ್ನು ಮಾತ್ರ ಕೆಂಪು ವಲಯವನ್ನಾಗಿ ಉಳಿಸಿ, ಇತರೆಡೆ ಚಟುವಟಿಕೆಗಳನ್ನು ಮರು ಆರಂಭಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಬಿಎಂಪಿ ಆಯುಕ್ತರು, ಜಿಲ್ಲಾಧಿಕಾರಿ ಈ ಬಗ್ಗೆ ಅಂತಿಮ ಅಭಿಪ್ರಾಯ ನೀಡಲಿದ್ದಾರೆ ಎಂದರು.
ಕೆಂಪು ವಲಯ ಸೇರಿ ಎಲ್ಲೆಡೆ ಕಟ್ಟಡ ನಿರ್ಮಾಣ ಕಾಮಗಾರಿ ಹಾಗೂ ಕಾರ್ಖಾನೆಗಳ ಆರಂಭಕ್ಕೆ ಅನುಮತಿ ನೀಡಲಾಗಿದೆ. ಜಿಲ್ಲಾಧಿಕಾರಿಯ ಅನುಮತಿ ಪಡೆದು ಚಟುವಟಿಕೆ ಆರಂಭಿಸಬೇಕು. ಕೇವಲ ಎರಡು ಗಂಟೆಗಳಲ್ಲಿ ಅನುಮತಿ ಪಡೆಯಬಹುದಾಗಿದೆ ಎಂದರು. ವೋಲ್ವೋ ಕಾರ್ಖಾನೆಗೆ ಈಗಾಗಲೇ ಅನುಮತಿ ನೀಡಲಾಗಿದೆ. ಕಾರ್ಖಾನೆಗಳಲ್ಲಿ ಶೇಕಡ 33 ಕಾರ್ವಿುಕರು ಮಾತ್ರ ಇರಬೇಕು. ಷರತ್ತು ಬದ್ಧವಾಗಿ ಮಾರುಕಟ್ಟೆಗಳನ್ನು ತೆರೆಯಲು ತೀರ್ಮಾನ ಮಾಡಲಾಗಿದೆ. ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಔಷಧ ಮಾರಾಟಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಇತರ ಚಟುವಟಿಕೆಗಳಿಗೆ ನಿರ್ಬಂಧ ಹೇರಲಾಗಿದೆ. ನಿರ್ಮಾಣ ಕಾಮಗಾರಿಗೆ ಅಗತ್ಯವಾದ ಸ್ಯಾನಿಟರಿ, ಟೈಲ್ಸ್, ಗ್ರಾನೈಟ್, ಸಿಮೆಂಟ್, ಕಬ್ಬಿಣ, ಸುಣ್ಣ, ಬಣ್ಣದ ಮಾರಾಟಕ್ಕೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಮೊದಲ ದಿನ 51 ಸಾವಿರ ರೂ. ದಂಡ ವಸೂಲಿ
ನಗರದಲ್ಲಿ ಕರೊನಾ ಸೋಂಕು ಹೆಚ್ಚು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಮಾಸ್ಕ್ ಧರಿಸದೇ ಸಂಚಾರ ಮಾಡಿದ 86 ಜನರಿಂದ 51,700 ರೂ. ದಂಡ ಸಂಗ್ರಹಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೇ ಸಂಚಾರ ಮಾಡುವವರು, ಕಂಡಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಹಾಗೂ ಕಸ ಹಾಕುವುದು ಕಂಡುಬಂದರೆ 1 ಸಾವಿರ ರೂ. ದಂಡ ವಿಧಿಸುವ ಆದೇಶವನ್ನು ಮೇ 1 (ಶುಕ್ರವಾರ) ರಿಂದ ಜಾರಿಗೊಳಿಸಲಾಗಿದೆ. ಮೊದಲ ದಿನ 4 ಪ್ರಕರಣಗಳಿಂದ 2,600 ರೂ. ಸಂಗ್ರಹಿಸಿದ್ದ ಬಿಬಿಎಂಪಿ ಮಾರ್ಷಲ್​ಗಳು, ಶನಿವಾರ 86 ಪ್ರಕರಣಗಳಿಂದ 51,700 ರೂ. ದಂಡ ಸಂಗ್ರಹಿಸಿದ್ದಾರೆ.
ಕಂಟೇನ್​ವೆುಂಟ್​ನಲ್ಲಿ ಸಡಿಲಿಕೆಯಿಲ್ಲ
ಬೆಂಗಳೂರು: ಮಹಾನಗರದಲ್ಲಿ 25 ಕಂಟೇನ್​ವೆುಂಟ್ ವಾರ್ಡ್​ಗಳ ನಿರ್ಬಂಧಗಳನ್ನು ಯಾವುದೇ ಕಾರಣಕ್ಕೂ ಸಡಿಲಿಕೆ ಮಾಡುವುದಿಲ್ಲ. ಇಲ್ಲಿ ಮದ್ಯ ಮಾರಾಟಕ್ಕೂ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಲಾಕ್​ಡೌನ್ ವಿಸ್ತರಣೆ ಹಾಗೂ ಸಡಿಲಿಕೆ ಕುರಿತು ಮಾರ್ಗಸೂಚಿಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲಿ ಅಳವಡಿಸಿಕೊಳ್ಳಲಾಗುವುದು. ರಾಜ್ಯದಲ್ಲಿ ಗುರುತಿಸಲಾದ ಪಟ್ಟಿಯಲ್ಲಿ ಬೆಂಗಳೂರು ನಗರ ಕೆಂಪು ವಲಯದಲ್ಲಿದ್ದು, ಇಲ್ಲಿನ ಕಾರ್ಯ ನಿರ್ವಹಣೆ ಬಗ್ಗೆ ಮುಖ್ಯಮಂತ್ರಿ ಹಾಗೂ ಮುಖ್ಯ ಕಾರ್ಯದರ್ಶಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ನಗರದ 198 ವಾರ್ಡ್​ಗಳಿದ್ದು, ಅದರಲ್ಲಿ ಕರೋನಾ ಸೋಂಕು ಪ್ರಕರಣ ಪತ್ತೆಯಾಗದ 154 ವಾರ್ಡ್​ಗಳನ್ನು ಹಸಿರು ವಲಯವೆಂದು ಪರಿಗಣಿಸಲಾಗಿದೆ ಎಂದು ಶನಿವಾರ ಸುದ್ದಿಗಾರರಿಗೆ ಸ್ಪಷ್ಟಪಡಿಸಿದರು.
ಕಂಟೇನ್​ವೆುಂಟ್​ನಲ್ಲಿ ಮದ್ಯಕ್ಕೆ ನಿರ್ಬಂಧ: ನಗರದಲ್ಲಿ 28 ದಿನಗಳಿಂದೀಚೆಗೆ ಸೋಂಕಿತರು ಕಂಡುಬಂದಿರುವ 25 ವಾರ್ಡ್​ಗಳಲ್ಲಿ ಕಂಟೈನ್​ವೆುಂಟ್ ಸೀಲ್ ಮಾಡಲಾಗಿದೆ. ಇಲ್ಲಿ ಮನೆಯಿಂದ ಜನರು ಹೊರ ಬರಲು ಅವಕಾಶವಿಲ್ಲ. ಹೀಗಾಗಿ ಈ ಪ್ರದೇಶಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಒಂದು ವೇಳೆ ಸರಬರಾಜು ಮಾಡುವುದು ಕಂಡುಬಂದರೆ, ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಹಾಗೂ ದಂಡಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಹಸಿರು ವಲಯದಲ್ಲಿ ಅಗತ್ಯ ಚಟುವಟಿಕೆಗಳಿಗೆ ವಿನಾಯಿತಿ ನೀಡುವಂತೆ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಮಾಡಲಾಗಿದ್ದು, ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿ ಅನುಮತಿ ಪಡೆಯಲು ಸೂಚಿಸಿದ್ದಾರೆ ಎಂದು ಮಾಹಿತಿ ನೀಡಿದರು.
ವರ್ಣವಾರು ವಾರ್ಡ್ ವಿಂಗಡಣೆ
ರಾಜಧಾನಿಯ 198 ವಾರ್ಡ್​ಗಳನ್ನು ವಿವಿಧ ವಲಯಗಳನ್ನಾಗಿ ಗುರುತಿಸ ಲಾಗಿದ್ದು, ರಾಜ್ಯದ ಸಡಿಲಿಕೆ ನಿಯಮಗಳು ವಲಯವಾರು ಅನ್ವಯವಾಗಲಿವೆ. 2 ವಾರ್ಡ್ ಕೆಂಪು ವಲಯಕ್ಕೆ ಸೇರಿದ್ದರೆ, 173 ವಾರ್ಡ್​ಗಳನ್ನು ಹಸಿರು ವಲಯಕ್ಕೆ ಸೇರಿಸಲಾಗಿದೆ
ರಾಜ್ಯದಲ್ಲಿ ಲಾಕ್​ಡೌನ್ 3.0 ಸಡಿಲಿಕೆ ಸೋಮವಾರ ಆರಂಭವಾಗಲಿದ್ದು, ಅದಕ್ಕೆ ಅನ್ವಯವಾಗುವಂತೆ 4 ಬಣ್ಣಗಳಲ್ಲಿ ವಿವಿಧ ವಲಯಗಳಾಗಿ ವಿಂಗಡಿಸಲಾಗಿದೆ. ಅದರಲ್ಲಿ ಹಸಿರು ವಲಯಗಳಿಗೆ ಪ್ರತ್ಯೇಕ ಲಾಕ್​ಡೌನ್ ಸಡಿಲಿಕೆ ಅನ್ವಯವಾಗಲಿವೆ. ಪಾದರಾಯನಪುರ ಮತ್ತು ಹೊಂಗಸಂದ್ರದಲ್ಲಿ ವಾರ್ಡ್​ಗಳಲ್ಲಿ ಅತಿಹೆಚ್ಚು ಕರೊನಾ ಸೋಂಕಿತ ಪ್ರಕರಣಗಳು ಪತ್ತೆಯಾಗಿರುವ ಕಾರಣ ಇವುಗಳನ್ನು ಕೆಂಪು ವಲಯ ಹಾಗೂ ಕಂಟೇನ್​ವೆುಂಟ್ ವಲಯ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ. ಇನ್ನು ಕರೊನಾ ಸೋಂಕಿತರು ಕಂಡುಬಾರದ ಹಾಗೂ ಈಗಾಗಲೇ ಸೋಂಕಿತರು ಗುಣಮುಖರಾಗಿ 28 ದಿನ ಕಳೆದ ವಾರ್ಡ್​ಗಳನ್ನು ಹಸಿರು ವಲಯಕ್ಕೆ ಸೇರ್ಪಡೆ ಮಾಡಲಾಗಿದೆ.

ರೆಡ್ ಝೋನ್​ನಲ್ಲಿ ಬೆಂ.ಗ್ರಾ. ಬೇಡ
ಬೆಂಗಳೂರು: ಕೇಂದ್ರದ ಮಾರ್ಗಸೂಚಿ ಪ್ರಕಾರ ಕೆಂಪು ವಲಯದಲ್ಲಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸೋಂಕಿತರು ಇಲ್ಲದ ಕಾರಣ, ಆ ವಲಯದಿಂದ ಹೊರಗಿಡುವಂತೆ ಕೇಂದ್ರ ಸರ್ಕಾರಕ್ಕೆ ಪತ್ರ ಬರೆಯಲಾಗುವುದು ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ಯಾವ ಕಾರಣಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಕೆಂಪುವಲಯದಲ್ಲಿ ಸೇರಿಸಿದೆ ಎಂಬುದು ಗೊತ್ತಿಲ್ಲ. ಈ ಬಗ್ಗೆ ಆಶ್ಚರ್ಯ ಉಂಟಾಗಿದೆ. ಹೆಚ್ಚಿನ ಕೈಗಾರಿಕೆಗಳು ನೆಲಮಂಗಲ, ಹೊಸಕೋಟೆ, ದೇವನಹಳ್ಳಿ ತಾಲೂಕುಗಳ ವ್ಯಾಪ್ತಿಯಲ್ಲಿಯೇ ಬರುತ್ತವೆ. ಅಲ್ಲಿ ಕೈಗಾರಿಕೆಗಳು ಆರಂಭವಾಗಬೇಕಾಗಿದೆ. ಆದ್ದರಿಂದ ಕೆಂಪುವಲಯದಿಂದ ಹೊರ ಗಿಡುವಂತೆ ಮನವಿ ಮಾಡ ಲಾಗುವುದು ಎಂದು ಹೇಳಿದರು.
ಗ್ರಾಮಾಂತರ ಜಿಲ್ಲೆಯಲ್ಲಿ ಕೈಗಾರಿಕೆಗಳ ಆರಂಭಕ್ಕೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಲಾಗುವುದು. ಶೇ. 33 ಕಾರ್ವಿುಕರೊಂದಿಗೆ ಕಾರ್ಯ ನಿರ್ವಹಣೆಗೆ ಷರತ್ತು ವಿಧಿಸಲಾಗುವುದು ಎಂದರು.
ಇದನ್ನೂ ಓದಿVIDEO| ಲಾಕ್​ಡೌನ್​ ಸಮಯದಲ್ಲಿ ಮಂಡ್ಯದ ಮದ್ಯದ ಅಂಗಡಿಯಲ್ಲಿ ಇಲಿಗಳು ಕದ್ದು ಎಣ್ಣೆ ಕುಡಿದಿವೆಯಂತೆ!
ಲಾಕ್​ಡೌನ್ 3.0 ಏನು ಲಭ್ಯ?
ಕೆಲ ಸರ್ಕಾರಿ ಕಚೇರಿಗಳು, ಔಷಧ, ದಿನಸಿ,ಆಹಾರ ಡೆಲಿವರಿ, ತರಕಾರಿ, ಹಣ್ಣು ಮಾರಾಟ, ಆಸ್ಪತ್ರೆಗಳು, ಹಾಲು, ಪತ್ರಿಕೆ ವಿತರಣೆ, ಅಗತ್ಯ ಸೇವೆಗಳ ವಾಹನ ಸಂಚಾರ, ಅಗತ್ಯ ವಸ್ತುಗಳ ಕೈಗಾರಿಕೆ, ಬ್ಯಾಂಕ್, ಕೆಲವು ಎಲೆಕ್ಟ್ರಿಕಲ್ ರಿಪೇರಿ ಅಂಗಡಿ ಸೇವೆ ಲಭ್ಯವಿರುತ್ತದೆ. ಹಸಿರು ವಲಯದಲ್ಲಿ ಮಾತ್ರ ಮದ್ಯದಂಗಡಿ ಇರುತ್ತದೆ.
ಏನೇನು ಲಭ್ಯವಿಲ್ಲ?
ಶಾಪಿಂಗ್ ಮಾಲ್, ಚಿತ್ರಮಂದಿರ, ಹೋಟೆಲ್, ಸಾರಿಗೆ, ಕ್ಷೌರದಂಗಡಿ, ಶಾಲೆ- ಕಾಲೇಜು ಸೇವೆ ಇರುವುದಿಲ್ಲ.
ನಾಳೆಯಿಂದ ಸಿಮೆಂಟ್ ಮಾರಾಟ
ಸೀಲ್​ಡೌನ್ ಹೊರತುಪಡಿಸಿದ ಪ್ರದೇಶಗಳಲ್ಲಿ ಸಿಮೆಂಟ್ ಮಾರಾಟ, ಕಬ್ಬಿಣ ವ್ಯಾಪಾರ, ಪ್ಲಂಬಿಂಗ್ ಮಳಿಗೆಗಳನ್ನು ಮೇ 4 ರಿಂದ ಆರಂಭಿಸಬಹುದು ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್. ಅನಿಲ್ ಕುಮಾರ್ ಆದೇಶಿಸಿದ್ದಾರೆ.
ಜಂಟಿ ಆಯುಕ್ತರಿಗೆ ವಿಶೇಷಾಧಿಕಾರ
ಬೆಂಗಳೂರು: ನಗರದಲ್ಲಿ ಲಾಕ್​ಡೌನ್ ಮೂರನೇ ಭಾಗದ ಕೊಂಚ ಸಡಿಲಿಕೆ ನಂತರವೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಎಲ್ಲ ವಲಯಗಳ ಜಂಟಿ ಆಯುಕ್ತರು ಸೇರಿ 9 ಅಧಿಕಾರಿಗಳನ್ನು ತಾತ್ಕಾಲಿಕವಾಗಿ ವಿಶೇಷ ಕಾರ್ಯನಿರ್ವಾಹಕ ದಂಡಾಧಿಕಾರಿಗಳನ್ನಾಗಿ ರಾಜ್ಯ ಸರ್ಕಾರ ನೇಮಿಸಿದೆ.
ಲಾಕ್​ಡೌನ್ ಅವಧಿ ಮುಕ್ತಾಯಗೊಳ್ಳು ವವರೆಗೂ ಕರೊನಾ ಸೋಂಕಿತ ಪ್ರದೇಶಗಳು ಸೇರಿ ಎಲ್ಲೆಡೆ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಮುಂಜಾಗ್ರತೆಯಿಂದ ವಿಶೇಷಾಧಿಕಾರ ನೀಡಲಾಗಿದೆ. 8 ವಲಯಗಳ ಜಂಟಿ ಆಯುಕ್ತರ ಜತೆಗೆ ಆರ್.ಆರ್. ನಗರ ಕ್ಷೇತ್ರ ವ್ಯಾಪ್ತಿಯ ಯಶವಂತ ಪುರ ವಾರ್ಡ್​ಗೆ, ಕೆಐಎಡಿಬಿ ಭೂಸ್ವಾಧೀನ ವಿಶೇಷಾಧಿಕಾರಿ ಎ.ಬಿ. ವಿಜಯಕುಮಾರ್ ಅವರನ್ನು ವಿಶೇಷ ಕಾರ್ಯ ನಿರ್ವಾಹಕ ದಂಡಾಧಿಕಾರಿಯಾಗಿ ನೇಮಿಸಲಾಗಿದೆ.
ಇದನ್ನೂ ಓದಿhttp://ದೇಣಿಗೆಗಾಗಿ ಹರ್ಷಲ್​ ಗಿಬ್ಸ್ ಬ್ಯಾಟ್ ಹರಾಜು; ಕೋವಿಡ್​ 19 ವಿರುದ್ಧ ಹೋರಾಟಕ್ಕೆ ದೇಣಿಗೆ
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
Sign in to your account
Please enter an answer in digits:one × 5 =
Remember me
