ದೊಡ್ಡಬಳ್ಳಾಪುರ:ಮಹಿಳೆಯೊಬ್ಬರ ಗರ್ಭಕೋಶದ ಸುತ್ತ ಬೆಳೆದಿದ್ದ 4.5 ಕೆಜಿ ತೂಕದ ಗಡ್ಡೆ ಹೊರ ತೆಗೆಯುವಲ್ಲಿ ಯಶಸ್ವಿಯಾಗಿರುವ ದೊಡ್ಡಬಳ್ಳಾಪುರದ ತಾಯಿ-ಮಗು ಸರ್ಕಾರಿ ಆಸ್ಪತ್ರೆ ವೈದ್ಯರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
ಗರ್ಭಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಶಿಲ್ಪಾ (35) ಅವರು ಮಂಗಳವಾರ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದರು. ವೈದ್ಯರು ಮಹಿಳೆಯನ್ನು ಪರೀಕ್ಷಿಸಿದಾಗ ಹೊಟ್ಟೆಯಲ್ಲಿ 4 ರಿಂದ 5 ಕೆಜಿಯಷ್ಟು ಗಡ್ಡೆ ಪತ್ತೆಯಾಗಿತ್ತು. ಕೂಡಲೇ ಕಾರ್ಯಪ್ರವೃತ್ತರಾದ ಪ್ರಸೂತಿ ಸೀರೋಗ ತಜ್ಞೆ ಡಾ.ಕೆ.ಎಲ್.ಅರ್ಚನಾ ನೇತೃತ್ವದ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡಿದ್ದಾರೆ.
ಇದೊಂದು ಅಚ್ಚರಿಸಾಮಾನ್ಯವಾಗಿ ಮಹಿಳೆಯರ ಗರ್ಭಕೋಶ, ಅಂಡಾಶಯಗಳಲ್ಲಿ ಗಡ್ಡೆಯು 100ಕ್ಕೆ 10 ಮಂದಿಯಲ್ಲಿ ಬಹಳ ಸಣ್ಣದಾಗಿ ಕಂಡುಬರುತ್ತದೆ. ಆದರೆ, ಅಚ್ಚರಿ ಎಂಬಂತೆ ಈ ಮಹಿಳೆಯಲ್ಲಿ 4ರಿಂದ 5 ಕೆಜಿ ಗಾತ್ರದ ಗಡ್ಡೆ ಪತ್ತೆಯಾಗಿದೆ. ಮಹಿಳೆ ಒಂದೆರಡು ದಿನ ತಡವಾಗಿ ದಾಖಲಾಗಿದ್ದರೆ ಜೀವಕ್ಕೆ ಹಾನಿಯಾಗುತ್ತಿತ್ತು. ಸದ್ಯ ಗರ್ಭಕೋಶದ ಸುತ್ತ ಬೆಳೆದಿದ್ದ ದೊಡ್ಡ ಗಾತ್ರದ ಗಡ್ಡೆ ಹೊರತೆಗೆಯಲಾಗಿದ್ದು, ಮಹಿಳೆ ಆರೋಗ್ಯವಾಗಿದ್ದಾರೆ ಎಂದು ವೈದ್ಯೆ ಅರ್ಚನಾ ತಿಳಿಸಿದ್ದಾರೆ.
ಸವಾಲಿನ ಪ್ರಕರಣಇದೊಂದು ಗಂಭೀರ ಮತ್ತು ಸವಾಲದ ಪ್ರಕರಣವಾಗಿತ್ತು. ಬಿಪಿ, ಉಸಿರಾಟ ನಿಯಂತ್ರಣಕ್ಕೆ ಪಡೆದು, ಶಸಚಿಕಿತ್ಸೆ ಆರಂಭಿಸಿದೆವು. ರಕ್ತದ ಅಗತ್ಯತೆ ಇದ್ದಿದ್ದರಿಂದ ಮುಂಚಿತವಾಗಿಯೇ 4 ಬಾಟಲ್‌ಗಳಷ್ಟು ರಕ್ತವನ್ನು ತರೆಸಿಕೊಂಡಿದ್ದೇವು ಎಂದು ಶಸಚಿಕಿತ್ಸೆ ತಂಡದ ಡಾ.ಪ್ರೇಮಲತಾ ತಿಳಿಸಿದರು.
ಇಂಥಾ ವ್ಯಕ್ತಿಯಿಂದ ಒಳ್ಳೆಯದು ಸಾಧ್ಯವೇ? ಹೊಸ ಪಕ್ಷ ಘೋಷಣೆ ಬೆನ್ನಲ್ಲೇ ವಿಜಯ್​ ವಿರುದ್ಧ ಮಹಿಳೆ ಗಂಭೀರ ಆರೋಪ

ನಾಯಕತ್ವ ಬದಲಾವಣೆ ಬಗ್ಗೆ MI ಕೋಚ್​ ಸಮರ್ಥನೆ: ಸಿಡಿದೆದ್ದ ರೋಹಿತ್​ ಪತ್ನಿ, ಕಿಡಿ ಹೊತ್ತಿಸಿದ ರಿತಿಕಾ​ ಕಾಮೆಂಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 2 =
Remember me
