ಕಲಬುರಗಿ:‘ಎಣ್ಣೆ’ ಗಮ್ಮತ್ತು ಹೇಗೆಲ್ಲ ಆಡಿಸುತ್ತೆ ನೋಡಿ. ಮದ್ಯದ ನಶೆಯಲ್ಲಿದ್ದ ಕಡುಕನೊಬ್ಬ ಜಿಮ್ಸ್ ಆಸ್ಪತ್ರೆ ಆವರಣದಲ್ಲಿ ಮರವೇರಿ ಸತ್ತಂತೆ ಮಲಗಿ ಹೈಡ್ರಾಮಾ ಸೃಷ್ಟಿಸಿದ್ದ.
ಆಸ್ಪತ್ರೆ ಆವರಣದಲ್ಲಿನ ಮರ ಹತ್ತಿದ ವ್ಯಕ್ತಿಯೊಬ್ಬ ಅಲ್ಲೇ ಕುಡಿದು ಕೊಂಬೆ ಮೇಲೆಯೇ ಮಲಗಿದ್ದ. ಇದನ್ನು ಕಂಡ ಜನರು ಎಷ್ಟು ಜೋರಾಗಿ ಕೂಗಿದರೂ ಆತ ಎಚ್ಚರಗೊಂಡಿಲ್ಲ. ಮರದ ಮೇಲೆ ಶವ ಇದೆ ಅಂದುಕೊಂಡ ಸ್ಥಳೀಯರು ಗಾಬರಿಗೊಂಡಿದ್ದರು.ಇದನ್ನೂ ಓದಿರಿಜನರೇ ಎಚ್ಚರ! ಕರೊನಾ ಟೆಸ್ಟ್ ಮಾಡದಂತೆ ಮೇಲಿಂದ ಆರ್ಡರ್​ ಆಗಿದೆ
ಜಿಮ್ಸ್ ಆಸ್ಪತ್ರೆ ಆವರಣಕ್ಕೆ ಭಾನುವಾರ ಮದ್ಯದ ಬಾಟಲಿ ಜತೆಗೆ ಬಂದ ವ್ಯಕ್ತಿಯೊಬ್ಬ ಅಲ್ಲಿನ ಮರವೊಂದನ್ನು ಹತ್ತಿದ್ದಾನೆ. ಮರದ ರೆಂಬೆ ಮೇಲೆಯೇ ಕುಳಿತು ಕುಡಿದಿದ್ದಾನೆ. ಇದಕ್ಕೂ ಮೊದಲೇ ಆತ ಸಾಕಷ್ಟು ಎಣ್ಣೆ ಕುಡಿದಿದ್ದ. ಅದರೊಂದಿಗೆ ಇನ್ನಷ್ಟು ಸೇರಿದ್ದರಿಂದ ನಶೆ ಹೆಚ್ಚಾಗಿ ಇಕ್ಕೆಲದ ರೆಂಬೆ ಮೇಲೆ ನಿದ್ರೆಗೆ ಜಾರಿದ್ದಾನೆ.ಸ್ವಲ್ಪವೂ ಅಲುಗಾಡದೆ ಮಲಗಿದ್ದನ್ನು ಗಮನಿಸಿದ ಜನರು ಯಾರೋ ಆತ್ಮಹತ್ಯೆ ಮಾಡಿಕೊಂಡಿರಬೇಕು, ಹೆಣವಿದೆ ಎಂದು ಭಾವಿಸಿ ಪೊಲೀಸರಿಗೆ ಮಾಹಿತಿ ಮುಟ್ಟಿಸಿದರು. ತಕ್ಷಣ ದೌಡಾಯಿಸಿದ ಪೊಲೀಸರು, ಮರವೇರಿ ನೋಡಿದಾಗ ಆತ ಸತ್ತಿಲ್ಲ, ಬದಲಿಗೆ ಮತ್ತೇರಿ ಮಲಗಿರುವುದು ಗೊತ್ತಾಯಿತು.
ಇದನ್ನೂ ಓದಿರಿಗಂಡ-ಹೆಂಡ್ತಿ ಸಮಸ್ಯೆ ಬಗೆಹರಿಸಿ ಅಂದ್ರೆ ಪಲ್ಲಂಗಕ್ಕೆ ಕರೀತಾರೆ!
ಬಳಿಕ ಜನರ ಸಹಕಾರದೊಂದಿಗೆ ಆತನನ್ನು ಕೆಳಗೆ ಜೋತು ಬೀಳುವಂತೆ ಮಾಡಿ, ಕೆಳಗಿದ್ದವರು ಹಿಡಿದು ಇಳಿಸಿಕೊಂಡರು. ಇದ್ಯಾವುದರ ಪರಿವೇ ಇಲ್ಲದೆ ಆತ ಮಾತ್ರ ಗುಂಡಿನ ಗಮ್ಮತ್ತಿನಲ್ಲೇ ತೇಲಾಡುತ್ತಿದ್ದ. ನಂತರ ವೈದ್ಯರು ಪರೀಕ್ಷೆ ನಡೆಸಿದ್ದು, ನಶೆಯಲ್ಲಿ ಇದ್ದುದ್ದರಿಂದ ಹೆಸರು, ವಿವರ ಪತ್ತೆಯಾಗಿಲ್ಲ. ಕುಡಿದ ಅಮಲಿನಲ್ಲಿ ಮರವೇರಿ ಸತ್ತಂತೆ ಮಲಗಿದ್ದ ವಿಡಿಯೋ ವೈರಲ್​ ಆಗಿದೆ.
https://www.facebook.com/VVani4U/videos/3043587949066173/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty − 11 =
Remember me
