ಬೆಂಗಳೂರು:ಆರ್ಥಿಕ ಹಿಂದುಳಿದವರನ್ನು ಉದ್ಯಮಿಗಳನ್ನಾಗಿಸುವ ಸಲುವಾಗಿ ಸಮಾಜ ಕಲ್ಯಾಣ ಇಲಾಖೆ ಜಾರಿಗೆ ತಂದಿರುವ ಸಮೃದ್ಧಿ ಯೋಜನೆಯಡಿ ವಿವಿಧ ಫ್ರಾಂಚೈಸಿ ಸಂಸ್ಥೆಗಳು, ಫಲಾನುಭವಿಗಳು ಹಾಗೂ ಇಲಾಖೆ ನಡುವೆ ಸೋಮವಾರ ಒಪ್ಪಂದ ಮಾಡಿಕೊಳ್ಳಲಾಯಿತು.
ಖಾಸಗಿ ಸಂಸ್ಥೆ ಜತೆಗೂಡಿ ಫ್ರಾಂಚೈಸಿ ಪಡೆದು ಉದ್ಯಮ ಆರಂಭಿಸುವ ಅರ್ಹ ಫಲಾನುಭವಿಗಳಿಗೆ ಸಮೃದ್ಧಿ ಯೋಜನೆಯಡಿ 10 ಲಕ್ಷ ರೂ. ಧನಸಹಾಯ ನೀಡಲಾಗುತ್ತದೆ. ಈವರೆಗೆ 150 ಜನರು ಯೋಜನೆಯ ನೆರವು ಪಡೆದು ಹೋಟೆಲ್, ಟೆಕ್ಸ್​ಟೈಲ್ಸ್ ಮತ್ತಿತರ ಉದ್ಯಮಗಳನ್ನು ನಡೆಸುತ್ತಿದ್ದಾರೆ. 2021ರ ವೇಳೆಗೆ 2 ಸಾವಿರಕ್ಕೂ ಹೆಚ್ಚಿನ ಉದ್ಯಮಿಗಳನ್ನು ಹಾಗೂ 10 ಸಾವಿರಕ್ಕೂ ಹೆಚ್ಚಿನ ನೇರ ಮತ್ತು ಪರೋಕ್ಷ ಉದ್ಯೋಗ ಸೃಷ್ಟಿಸುವ ಗುರಿಹೊಂದಲಾಗಿದೆ. ಅದರ ಅಂಗವಾಗಿ ಸೋಮವಾರ 800ಕ್ಕೂ ಹೆಚ್ಚಿನ ಫಲಾನುಭವಿಗಳ ಜತೆಗೆ 40ಕ್ಕೂ ಹೆಚ್ಚಿನ ಫ್ರಾಂಚೈಸಿ ಸಂಸ್ಥೆಗಳು ಮತ್ತು ಇಲಾಖೆ ಪರಸ್ಪರ ಒಡಂಬಡಿಕೆ ಮಾಡಿಕೊಳ್ಳಲಾಯಿತು.
ಖಾಸಗಿ ಹೋಟೆಲ್​ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯುಕ್ತ ರವಿಕುಮಾರ ಸುರಪುರ ಸಮ್ಮುಖದಲ್ಲಿ ಫ್ರಾಂಚೈಸಿ ಮತ್ತು ಫಲಾನುಭವಿಗಳು ಹಾಗೂ ಇಲಾಖೆ ಅಡಿಯಲ್ಲಿ ಕೆಲಸ ಮಾಡುವ ವಿವಿಧ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಒಪ್ಪಂದಕ್ಕೆ ಸಹಿ ಮಾಡಿದರು.
ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಪರಶುರಾಮ್ ಶಿನ್ನಾಲ್ಕರ್, ತಾಂಡಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಲ್. ಶಿವಶಂಕರ್ ನಾಯ್ಕ, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ಎಂಡಿ ಕವಿತಾ ಎಂ. ವಾರಂಗಲ್, ಭೋವಿ ಅಭಿವೃದ್ಧಿ ನಿಗಮದ ಎಂಡಿ ಮಾಯಾದೇವಿ ಗಲಗಲಿ, ಆದಿಜಾಂಬವ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಎಸ್ಕ್ರೋ ಖಾತೆಯಲ್ಲಿ ಹಣ
ಒಪ್ಪಂದದ ಪ್ರಕಾರ, ಇಲಾಖೆಯಿಂದ ಉದ್ಯಮ ಆರಂಭಿಸಲು 10 ಲಕ್ಷ ರೂ. ನೀಡಲಾಗುತ್ತದೆ. ಆದರೆ, ಆ ಹಣ ಫಲಾನುಭವಿಗಳಿಗೆ ದೊರಕದೆ, ಎಸ್ಕ್ರೋ ಖಾತೆಯನ್ನು ತೆರೆದು ಅದರಲ್ಲಿಡಲಾಗುತ್ತದೆ. ಆ ಹಣದಿಂದ ಫಲಾನುಭವಿ ಆಯ್ಕೆ ಮಾಡಿರುವ ಸಂಸ್ಥೆಯ ಶಾಖೆಯನ್ನು ತೆರೆಯಲು ನೆರವು ನೀಡಲಾಗುತ್ತದೆ. ಫ್ರಾಂಚೈಸಿ ಶುಲ್ಕ, ಮಳಿಗೆ ವಿನ್ಯಾಸ ಇನ್ನಿತರ ಅವಶ್ಯಕತೆಗಳಿಗೆ ಆ ಹಣ ಬಳಕೆಯಾಗಲಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × two =
Remember me
