ಬೆಂಗಳೂರು:ನಟೋರಿಯಸ್ ರೌಡಿ ಲಕ್ಷ್ಮಣ ಕೊಲೆ ಪ್ರಕರಣದಲ್ಲಿ ಬಂಧಿತನಾದ ರೌಡಿ ಪತಿಯನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಒಡಹುಟ್ಟಿದವನ ಹತ್ಯೆಗೆ ಅಕ್ಕನೇ ಸುಪಾರಿ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಯಲಹಂಕ ನಿವಾಸಿ ಸಂದೀಪ್ ರೆಡ್ಡಿ (24) ಹಲ್ಲೆಗೊಳಗಾದ ವ್ಯಕ್ತಿ. ಈತನ ಸಹೋದರಿ ಬಂಡೆ ಬೊಮ್ಮಸಂದ್ರ ನಿವಾಸಿ ಸುಮಲತಾ (25) ಹಾಗೂ ಸುಪಾರಿ ಪಡೆದು ಹತ್ಯೆಗೆ ಯತ್ನಿಸಿದ್ದ ಪೀಣ್ಯ ನಿವಾಸಿ ಮಂಜು (28), ವಿನಯ್ ನಾಯಕ್ (19), ಮೌಲಾ ಅಲಿಖಾನ್ (19) ಮತ್ತು ಮಾರುತಿನಗರ ನಿವಾಸಿ ಮಂಜು (28) ಎಂಬುವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸ ಲಾಗಿದೆ ಎಂದು ಯಲಹಂಕ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಬಂಧಿಸಲು ಮುಂದಾದ ಪೇದೆಗೆ ಹಲ್ಲೆ: ರೌಡಿ ಕಪ್ಪೆ ಕಾಲಿಗೆ ಗುಂಡೇಟು
ಏನಿದು ಪ್ರಕರಣ?:ಬಾಗೇಪಲ್ಲಿ ಮೂಲದವರಾದ ಸಂದೀಪ್ ರೆಡ್ಡಿ ಹೂವಿನ ವ್ಯಾಪಾರ ಮಾಡಿ ಕೊಂಡಿದ್ದಾರೆ. ಈತನ ಅಕ್ಕ ಸುಮಲತಾ, ಮಂಡ್ಯ ಮೂಲದ ರೌಡಿ ಕ್ಯಾಟ್​ರಾಜನನ್ನು ಮದುವೆಯಾಗಿ ಬಂಡೆ ಬೊಮ್ಮಸಂದ್ರದಲ್ಲಿ ನೆಲೆಸಿದ್ದಳು.
ಹಣಕ್ಕಾಗಿ ಆಸ್ತಿ ಮಾರುವಂತೆ ಒತ್ತಾಯ
ಒಂದು ವರ್ಷದ ಹಿಂದೆ ನಟೋರಿಯಸ್ ರೌಡಿ ಲಕ್ಷ್ಮಣ ಎಂಬುವನ ಹತ್ಯೆಯಾಗಿದ್ದು, ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಸುಮಲತಾ ಪತಿ ಕ್ಯಾಟ್ ರಾಜನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ಈತನನ್ನು ಜೈಲಿನಿಂದ ಬಿಡುಗಡೆ ಮಾಡಿಸಲು ಖರ್ಚಿಗೆ ಹಣ ಕೊಡುವಂತೆ ಸುಮಲತಾ ತನ್ನ ಸಹೋದರ ಸಂದೀಪ್​ಗೆ ಪೀಡಿಸಿದ್ದಳು. ಬಾಗೇಪಲ್ಲಿಯಲ್ಲಿರುವ ಆಸ್ತಿ ಮಾರಾಟ ಮಾಡಿ ಹಣ ಹೊಂದಿಸುವಂತೆ ಒತ್ತಾಯಿಸಿದ್ದಳು. ಇದಕ್ಕೆ ಸಂದೀಪ್ ನಿರಾಕರಿಸಿದ್ದ ಎನ್ನಲಾಗಿದೆ.
6 ತಿಂಗಳಿಂದ ಕೊಲೆಗೆ ಯತ್ನ
ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸಹೋದರನ ಮೇಲೆ ದ್ವೇಷ ಇಟ್ಟುಕೊಂಡಿದ್ದಳು. ಜೈಲಿನಲ್ಲಿರುವ ಪತಿ ಕ್ಯಾಟ್ ರಾಜನ ಜತೆಗೂಡಿ ಸಹೋದರನ ಹತ್ಯೆಗೆ ಸುಪಾರಿ ಕೊಟ್ಟಿದ್ದಳು. ಕೊಲೆಗೆ ಯತ್ನಿಸುತ್ತಿರುವ ವಿಚಾರ ಸಂದೀಪ್​ಗೆ ಗೊತ್ತಾಗಿತ್ತು. ಈ ಹಿನ್ನೆಲೆಯಲ್ಲಿ ಊರು ಬಿಟ್ಟು ತಾಯಿ ಜೊತೆ ಯಲಹಂಕದಲ್ಲಿ ಬಾಡಿಗೆ ಮನೆ ಮಾಡಿಕೊಂಡು ನೆಲೆಸಿದ್ದ. ಮೇ 29ರ ಮಧ್ಯಾಹ್ನ 12 ಗಂಟೆಯಲ್ಲಿ ಮನೆಯಲ್ಲಿ ಮಲಗಿದ್ದ. ಈ ವೇಳೆ 4-5 ಮಂದಿ ದುಷ್ಕರ್ವಿುಗಳು ಏಕಾಏಕಿ ಮನೆಗೆ ನುಗ್ಗಿದ್ದು, ಮಾರಕಾಸ್ತ್ರಗಳಿಂದ ದಾಳಿ ನಡೆಸಿದ್ದಾರೆ. ಎರಡು ಕೈಗಳಿಗೆ ಹಾಗೂ ತೊಡೆಗೆ ಮಚ್ಚಿನ ಏಟು ತಗುಲಿದ್ದು, ದುಷ್ಕರ್ವಿುಗಳಿಂದ ತಪ್ಪಿಸಿಕೊಂಡಿದ್ದರು. ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಸಂದೀಪ್ ರೆಡ್ಡಿಯಿಂದ ಹೇಳಿಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ:ತೆರಿಗೆ ವಂಚಿಸಿದ್ದಕ್ಕೆ ಬೆಂಝ್​​​ ಕಾರ್ ಜಪ್ತಿ
ಪಾಕಿಸ್ತಾನ್ ಜಿಂದಾಬಾದ್ ಘೋಷಣೆಯ ವಿಡಿಯೋ ಸಾಗರದಲ್ಲಿ ವೈರಲ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 + 12 =
Remember me
