ಹಾಸನ:ಪಡಿತರಿಗೆ ವಿತರಿಸಲು ಇಟ್ಟಿದ್ದ ಅಕ್ಕಿ ಗೋದಾಮಿಗೆ ಆನೆಯೊಂದು ಕನ್ನ ಹಾಕಿದೆ! ಹೌದು, ಆನೆಯೊಂದು ಬೇಲೂರು ತಾಲೂಕಿನ ಅನುಘಟ್ಟ ಸಹಕಾರ ಸಂಘದ ಗೋದಾಮಿನ ಬಾಗಿಲು ಮುರಿದು ಮೂಟೆಯಲ್ಲಿದ್ದ ಅಕ್ಕಿ ತಿಂದಿದೆ. ಆನೆ ಬಾಗಿಲು ಮುರಿದು ನುಸುಳುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಪಡಿತರಿಗೆ ವಿತರಿಸಲು ಇಟ್ಟಿದ್ದ ಅಕ್ಕಿ ಗೋದಾಮಿಗೆ ಕನ್ನ ಹಾಕಿದ ಆನೆ!#elephant#hassa#belur#rice#Trending#viralvideopic.twitter.com/jCf4NPsaGM— Vijayavani (@VVani4U)February 15, 2023
ಪಡಿತರಿಗೆ ವಿತರಿಸಲು ಇಟ್ಟಿದ್ದ ಅಕ್ಕಿ ಗೋದಾಮಿಗೆ ಕನ್ನ ಹಾಕಿದ ಆನೆ!#elephant#hassa#belur#rice#Trending#viralvideopic.twitter.com/jCf4NPsaGM
ಕಳೆದ ವರ್ಷ ಏಪ್ರಿಲ್​ನಲ್ಲಿ ಇದೇ ಆನೆ ದಾಳಿ ಮಾಡಿದ್ದ ಗೋದಾಮಿಗೆ ಪುನ ದಾಳಿ‌ ಮಾಡಿದೆ. ಅನ್ನ ಭಾಗ್ಯ ಯೋಜನೆಯಡಿ ಗೋದಾಮಿನಲ್ಲಿ 50 ಕ್ವಿಂಟಾಲ್ ಅಕ್ಕಿ ಹಾಗೂ ಗೋಧಿಯನ್ನು ಸಂಗ್ರಹಿಸಿ ಇಡಲಾಗಿತ್ತು. ಗಂಟೆಗೂ ಹೆಚ್ಚು ಕಾಲ ಗೋದಾಮಿನ ಬಾಗಿಲು ಮರಿಯಲು ಯತ್ನಿಸಿದ ಆನೆ, ಕೊನೆಗೆ ಅಕ್ಕಿ ಗೋಣಿಯನ್ನು ಹೊರಗೆ ಎಳೆದು ಹಾಕುವಲ್ಲಿ ಯಶಸ್ವಿಯಾಗಿದೆ. ಈ ಘಟನೆ ಇಂದು ಮುಂಜಾನೆ ನಡೆದಿದ್ದು, ಆನೆ ಒಂದು ಗೋಣಿ ಅಕ್ಕಿಯನ್ನು ತಿಂದಿದೆ. 2 ಗೋಣಿ ಅಕ್ಕಿ ಚೀಲವನ್ನು ಸೊಸೈಟಿಯ ಹೊರಭಾಗದಲ್ಲಿ ಎಳೆದಾಡಿದೆ. ಇದರಿಂದ ಗೋಣಿಯಲ್ಲಿದ್ದ ಅಕ್ಕಿಯೆಲ್ಲಾ ಚೆಲ್ಲಾಪಿಲ್ಲಿಯಾಗಿವೆ.
ಕಳೆದ ವರ್ಷವೂ ಇದೇ ಕೃತ್ಯ ಎಸಗಿದ್ದ ಈ ಆನೆಯನ್ನು ಸೆರೆ ಹಿಡಿದು ಚಾಮರಾಜನಗರದ ಅರಣ್ಯ ಬಿಡಲಾಗಿತ್ತು. ಈ ವೇಳೆ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ಸದ್ಯ ಆನೆಯ ಕೃತ್ಯದಿಂದ ಸೊಸೈಟಿಯ ಪೀಠೋಪಕರಣಗಳಿಗೆ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − three =
Remember me
