ಸರಗೂರು (ಮೈಸೂರು):ನುಗು ಜಲಾಶಯದ ಹಿನ್ನೀರಿನಲ್ಲಿ ಮೀನಿನ ಬಲೆಗೆ ಸಿಲುಕಿ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದ ಕಾಡಾನೆಯನ್ನು ಮಂಗಳವಾರ ಅರಣ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ರಾತ್ರಿ ಅಥವಾ ಬೆಳಗಿನ ಜಾವ ಜಲಾಶಯದ ಹಿನ್ನೀರಿನಲ್ಲಿ ನೀರು ಕುಡಿಯಲು ಸುಮಾರು 14ರಿಂದ 15 ವರ್ಷದ ಗಂಡಾನೆ ಬಂದಿದೆ. ಹಿನ್ನೀರಿನಲ್ಲಿ ಇಳಿದಾಗ ಮೀನು ಹಿಡಿಯಲು ಗುತ್ತಿಗೆದಾರ ಹಾಕಿದ್ದ ಬಲೆಗೆ ಕಾಲುಗಳು ಸಿಕ್ಕಿ ಹಾಕಿಕೊಂಡಿದ್ದರಿಂದ ದಡಕ್ಕೆ ವಾಪಸ್ ಬರಲು ಸಾಧ್ಯವಾಗದೆ ಒದ್ದಾಡಿತು.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೂ 8 ಗಂಟೆಗಳ ಕಾಲ ಆನೆ ಮೀನಿನ ಬಲೆಯಿಂದ ಬಿಡಿಸಿಕೊಳ್ಳಲು ನಿಂತಲ್ಲೇ ನಿಂತು ಹರಸಾಹಸವನ್ನೇ ಮಾಡಿತು. ಬೆಳಗ್ಗೆ ಜಮೀನಿಗೆ ತೆರಳುತ್ತಿದ್ದ ರೈತರು ಆನೆಯ ಪರದಾಟ ನೋಡಿ ಸ್ಥಳೀಯ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ಆರ್‌ಎಫ್‌ಒ ಗೀತಾ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೋಟ್ ಮೂಲಕ ಹತ್ತಿರಕ್ಕೆ ಹೋಗಿ ಹಿನ್ನೀರಿನ ಮಧ್ಯಭಾಗದಲ್ಲಿ ಬಲೆಯಲ್ಲಿ ಸಿಲುಕಿ ಒದ್ದಾಡುತ್ತಿದ್ದ ಆನೆಯನ್ನು ಪರಿಶೀಲಿಸಿದರು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಜತೆಗೂಡಿ ಕಾರ್ಯಾಚರಣೆ ಆರಂಭಿಸಿದರು.

ಇದನ್ನೂ ಓದಿ:ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!
ಪಾತಾಳ ಗರಡಿ ಮೂಲಕ ನಾಕಾಬಂದಿ ಕಾರ್ಯಾಚರಣೆ ನಡೆಸಿ ಮೀನಿನ ಬಲೆಯನ್ನು ಕಿತ್ತು ಹಾಕಲಾಯಿತು. ಕಾಲಿಗೆ ಸಿಲುಕಿಕೊಂಡಿದ್ದ ಬಲೆಯಿಂದ ಹೊರಬಂದ ಆನೆ ದಡ ಸೇರಲು ವೇಗವಾಗಿ ನೀರಿನಲ್ಲಿ ಮುನ್ನುಗ್ಗಿತು. ದಡ ಸೇರಿದ ಆನೆ ಅರಣ್ಯದತ್ತ ಓಡಿಹೋಯಿತು. ಅರಣ್ಯ ಇಲಾಖೆಯ ಸುಮಾರು 50, ಅಗ್ನಿಶಾಮಕ ಇಲಾಖೆ 7 ಹಾಗೂ ಪೊಲೀಸ್ ಇಲಾಖೆಯ 10ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ನುಗು ವಲಯ ಆರ್‌ಎಫ್‌ಒ ಗೀತಾ, ಯಡಿಯಾಲ ಆರ್‌ಎಫ್‌ಒ ಮಂಜುನಾಥ್, ಸರಗೂರು ಠಾಣಾ ಪಿಎಸ್‌ಐ ದಿವ್ಯಾ, ಅಗ್ನಿ ಶಾಮಕದಳ ಠಾಣಾ ಅಧಿಕಾರಿ ಕೆ.ಸಿ.ರಮೇಶ್, ಅಗ್ನಿ ಶಾಮಕ ದಳದ ಅಶೋಕ್‌ನರ್ತಿ, ಚಾಲಕ ದಿನೇಶ್, ಸಿಬ್ಬಂದಿ ಆನಂದ್, ವಿನಯ್ ಕುಮಾರ್, ಪುಂಡಲೀಕ ಲಂಬಾಣಿ, ರೈತ ಮುಖಂಡ ವಿವೇಕ ಕಾರ್ಯಪ್ಪ ಇದ್ದರು. ಆನೆ ನೋಡುವುದಕ್ಕೆ ಜನರ ದಂಡೇ ಅಲ್ಲಿ ನೆರೆದಿತ್ತು.
ನಾನ್​ವೆಜ್​ ಪ್ರಿಯರಿಗೆ ಶುಭ ಸುದ್ದಿ! 1 ಗಂಟೆಯಲ್ಲಿ ಇಷ್ಟು ತಿಂದರೆ ನಿಮಗೆ ಸಿಗುತ್ತೆ ಬುಲೆಟ್​ ಬೈಕ್​!

‘ಟಾಪ್​ ಬಿಚ್ಚಿ, ಬರಿ ಬ್ರಾನಲ್ಲಿ ಡೈಲಾಗ್​ ಹೇಳು ಅಂದಿದ್ರು!’ ಜಿಯಾ ಖಾನ್​ ಬದುಕಿನ ಕಹಿ ಘಟನೆ ಬಿಚ್ಚಿಟ್ಟ ಸಹೋದರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
