ಶಿವಮೊಗ್ಗ:ತನ್ನ ಪುತ್ರ ಕೆಇ ಕಾಂತೇಶ್​ಗೆ ಬಿಜೆಪಿ ಟಿಕೆಟ್ ಕೈತಪ್ಪಿದ ಕಾರಣದಿಂದ ಬಿಎಸ್ ಯಡಿಯೂರಪ್ಪ ವಿರುದ್ಧ ಆಕ್ರೋಶಗೊಂಡಿರುವ ಮಾಜಿ ಕೆಎಸ್ ಈಶ್ವರಪ್ಪ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಂಡಾಯ ಸ್ಪರ್ಧೆ ಮಾಡುವುದಾಗಿ ಮೊನ್ನೆಯಷ್ಟೇ ಘೋಷಣೆ ಮಾಡಿದ್ದಾರೆ. ಇದರಿಂದಾಗಿ ಯಡಿಯೂರಪ್ಪ ಪುತ್ರ ಬಿವೈ ರಾಘವೇಂದ್ರಗೆ ಸೋಲಿನ ಭೀತಿ ಎದುರಾಗಿದ್ದು, ಬಿಜೆಪಿ ಹೈಕಮಾಂಡ್​ ಪರವಾಗಿ ಕೇಂದ್ರ ಬಿಜೆಪಿ ನಾಯಕರು ಈಶ್ವರಪ್ಪ ಅವರ ಮನವೊಲಿಕೆಗೆ ಹರಸಾಹಸ ಪಡುತ್ತಿದ್ದಾರೆ.
ಇದನ್ನೂ ಓದಿ:ಅಬಕಾರಿ ಹಗರಣ: ದೆಹಲಿ ಸಿಎಂ ಕ್ರೇಜಿವಾಲ್​ಗೆ 9ನೇ ಬಾರಿ ಸಮನ್ಸ್​ ನೀಡಿದ ಇ.ಡಿ
ನಾಳೆ ಪ್ರಧಾನಿ ನರೇಂದ್ರ ಮೋದಿ ಅವರು ಶಿವಮೊಗ್ಗ ಕ್ಷೇತ್ರಕ್ಕೆ ಆಗಮಿಸಲಿದ್ದು, ಇದಕ್ಕೂ ಮುನ್ನ ಭಾನುವಾರ ಶಿವಮೊಗ್ಗದ ಮಲ್ಲೇಶ್ವರ ನಗರದಲ್ಲಿರುವ ನಿವಾಸಕ್ಕೆ ಭೇಟಿ ಬಿಜೆಪಿ ಹೈಕಮಾಂಡ್ ಪರವಾಗಿ ಮಾಜಿ ಸಚಿವ ಈಶ್ವರಪ್ಪ ಮನೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮೋಹನ್​ ಅಗರವಾಲ್​ ಹಾಗೂ ರಾಜೇಶ್ ಬಂದಿದ್ದು ಸುಮಾರು ಒಂದು ಗಂಟೆ ಕಾದರು ಬಾರದ ಈಶ್ವರಪ್ಪ ಬಂದ ದಾರಿಗೆ ಸುಂಕ ಇಲ್ಲವೆಂಬಂತೆ ಬಿಜೆಪಿ ನಾಯಕರು ಈಶ್ವರಪ್ಪ ನಿವಾಸದಿಂದ ವಾಪಸ್ ಹೋಗಿದ್ದಾರೆ.
ಈ ಸಂದರ್ಭದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಬಿಜೆಪಿ ಚುನಾವಣಾ ಉಸ್ತುವಾರಿ ರಾಧಾ ಮೋಹನ್ ಅಗರ್ವಾಲ್, ಕೆ.ಎಸ್​ ಈಶ್ವರಪ್ಪ ಅವರು ಭೇಟಿಯಾಗಿದ್ದರೆ ಚರ್ಚೆ ಮಾಡಬಹದಿತ್ತು. ಅವರ ಕುಟುಂಬಸ್ಥರ ಜೊತೆ ಏನು ಮಾತನಾಡಲಿ. ಈಶ್ವರಪ್ಪ ಅವರು ತುರ್ತು ಕೆಲಸ ಇದೆ ಅಂತ ಹೇಳಿ ಮನೆಯಿಂದ ಹೊರಟ ಹೋಗಿದ್ದಾರೆ. ಒಂದು ಗಂಟೆ ಕಾಲ ಕಾದರು ಬಂದಿಲ್ಲ ಎಂದು ಹೇಳಿದರು.
ರಾಜ್ಯ ನಾಯಕರ ಸಂಧಾನವೂ ವಿಫಲ:ಕೇಂದ್ರ ಬಿಜೆಪಿ ನಾಯಕರು ಬರುವುದಕ್ಕೂ ಮುನ್ನಾ ಭಾನುವಾರ ಬೆಳಗ್ಗೆಯಿಂದಲ್ಲೇ ಕೆಶ್ವರಪ್ಪ ಅವರ ಮನೆಗೆ ಬಿಜೆಪಿ ನಾಯಕರು ಬರುತ್ತಿದ್ದು ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹಾಗೂ ಎಂಎಲ್​ಸಿ ಎನ್​. ರವಿಕುಮಾರ್ ಬಂದು ಈಶ್ವರಪ್ಪ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ಈಶ್ವರಪ್ಪ ಮಣಿಯದ ಹಿನ್ನೆಲೆಯಲ್ಲಿ ವಾಪಸ್​ ಬಂದಿದ್ದರು.
ಜನ ಸಂಘಟನೆಗೆ ಮುಂದಾದ ಕಾಂತೇಶ್:ಶಿವಮೊಗ್ಗ ಕ್ಷೇತ್ರದಲ್ಲಿ ತಂದೆ ಈಶ್ವರಪ್ಪ ಅವರು ಬಿವೈ ರಾಘವೇಂದ್ರ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಹಿನ್ನೆಲೆ, ಕಾರ್ಯಕರ್ತರು, ಜನರನ್ನು ಮತ್ತು ಅಭಿಮಾನಿಗಳನ್ನು ಸಂಘಟಿಸಲು ಕೆಇ ಕಾಂತೇಶ್ ಮುಂದಾಗಿದ್ದಾರೆ. ಇಂದು ಶಿವಮೊಗ್ಗ ನಗರ ಮತ್ತು ಗ್ರಾಮೀಣ ಕ್ಷೇತ್ರದಲ್ಲಿ ಸಂಘಟನೆಗೆ ತೆರಳಿದ್ದು, ಈಶ್ವರಪ್ಪಗೆ ಬೆಂಬಲ ನೀಡುವಂತೆ ಮನವಿ ಮಾಡಲಿದ್ದಾರೆ.
ಹಾಸ್ಟೆಲ್​ನಲ್ಲಿ ನಮಾಜ್‌ ಮಾಡಿದ ವಿದೇಶಿ ವಿದ್ಯಾರ್ಥಿಗಳ ಮೇಲೆ ದಾಳಿ: ಐವರಿಗೆ ಗಾಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:7 + 1 =
Remember me
