ಹುಬ್ಬಳ್ಳಿ:ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ ಹಾಗೂ ಸ್ಫೋಟಕ್ಕೆ ಒಳಗಾಗಿ, ನೌಕರರು ಗಂಭೀರ ಗಾಯಗೊಂಡಿರುವ ಕಾರ್ಖಾನೆ ಅನಧಿಕೃತ ಎಂಬದು ಬೆಳಕಿಗೆ ಬಂದಿದೆ. ಹುಬ್ಬಳ್ಳಿಯ ತಾರಿಹಾಳ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿರುವ ಶಾಸಕ ಅರವಿಂದ್ ಬೆಲ್ಲದ್ ಈ ವಿಷಯ ಬಹಿರಂಗ ಪಡಿಸಿದ್ದಾರೆ.
ಅವಘಡಕ್ಕೆ ಒಳಗಾಗಿರುವ ಸ್ಥಳ ಪರಿಶೀಲನೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ದುರಂತದ ಕುರಿತು ತೀವ್ರ ಬೇಸರ ವ್ಯಕ್ತಪಡಿಸಿದರು. ಈ ಘಟನೆ ನಡೆಬಾರದಿತ್ತು ನಡೆದಿದೆ, ಈ ಫ್ಯಾಕ್ಟರಿ ಕೇವಲ 15 ದಿನದ ಹಿಂದಷ್ಟೆ ಆರಂಭವಾಗಿದೆ. ಈ ಫ್ಯಾಕ್ಟರಿ ಅನಧಿಕೃತವಾಗಿದ್ದು, ಯಾರಿಗೂ ತಿಳಿಯದೇ ಆರಂಭ ಮಾಡಲಾಗಿದೆ ಎಂಬುದನ್ನು ಅವರು ತಿಳಿಸಿದರು.
ಇದನ್ನೂ ಓದಿ:ಕಾರ್ಖಾನೆಯೊಂದರಲ್ಲಿ ಭಾರಿ ಸ್ಫೋಟ, 8 ಮಂದಿಗೆ ಗಂಭೀರ ಗಾಯ: ರಕ್ಷಣೆ ವೇಳೆ ಮತ್ತೆ ಸ್ಫೋಟ…
ಈ ಅವಘಡದಿಂದಾಗಿ ಫ್ಯಾಕ್ಟರಿ ಮಾಲೀಕ ತಬ್ಸುಮ್ ಶೇಕ್ ಹೆದರಿ ತಲೆಮರೆಸಿಕೊಂಡಿದ್ದಾನೆ. ಆತನ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ. ಸ್ಥಳೀಯರ ಸಮಯ ಪ್ರಜ್ಞೆಯಿಂದ ದೊಡ್ಡ ಅಪಾಯ ತಪ್ಪಿದೆ, ಹೀಗಾಗಿ ಹಲವರ ಪ್ರಾಣ ಉಳಿದಿದೆ. ಘಟನೆ ಕುರಿತಂತೆ ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ ಎಂದು ತಿಳಿಸಿದರು.
https://www.vijayavani.net/college-lecturer-suicide-at-udupi-district/
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:3 × four =
Remember me
