ಹಾವೇರಿ:ಕೃಷಿ ಜಮೀನಿನ ರಸ್ತೆ ವಿವಾದ ಕೋರ್ಟ್​ನಲ್ಲಿದ್ದರೂ ಅಕ್ಕಪಕ್ಕದ ರೈತರು ಸೋಮವಾರ ಹೊಲದಲ್ಲೇ ಬಡಿದಾಡಿಕೊಂಡಿದ್ದಾರೆ.
ಹಾನಗಲ್​ ತಾಲೂಕಿನ ದೇವರಹೊಸಪೇಟೆ ಗ್ರಾಮದ ಜಮೀನೊಂದರಲ್ಲಿ ರಸ್ತೆ ಇದೆ -ಇಲ್ಲ ಎಂಬ ವಿಚಾರವಾಗಿ ಸುಮಾರು 25 ಜನರ ನಡುವೆ ಶುರುವಾದ ವಾಗ್ವಾದ ವಿಕೋಪಕ್ಕೆ ತಿರುಗಿದ್ದು, ಗುದ್ದಲಿ ಹಿಡಿದುಕೊಂಡೇ ಜಗಳಕ್ಕೆ ನಿಂತರು. ಈ ಮಾರಾಮಾರಿಯ ವಿಡಿಯೋ ವೈರಲ್​ ಆಗಿದೆ.
ಇದನ್ನೂ ಓದಿರಿಕಾಂಗ್ರೆಸ್​ ಸಭೆಯಲ್ಲಿ ನಡೆದೇ ಹೋಯ್ತು ಮಾರಾಮಾರಿ.. ವಿಡಿಯೋ ವೈರಲ್​!
ರೈತ ಯಲ್ಲಪ್ಪ ಕೋತಂಬರಿ ಮತ್ತು ಕುಟುಂಬಸ್ಥರ ಮೇಲೆ ಸುರೇಶ್ ಮಹಾರಾಜಪೇಟ, ರಾಮಪ್ಪ, ಮಹದೇವ, ಸಿದ್ದಲಿಂಗೇಶ, ನೀಲಪ್ಪ ಮತ್ತು ಬಸವನಣ್ಣೆ ಅವರಿದ್ದ ಗುಂಪು ಹಲ್ಲೆ ಮಾಡಿದೆ. ಗಾಯಗೊಂಡ ಯಲ್ಲಪ್ಪ ಕೋತಂಬರಿ ಅವರನ್ನು ಹಾನಗಲ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಯಲ್ಲಪ್ಪನನ್ನು ನೆಲದ ಮೇಲೆ ಕೆಡವಿ ರೈತರು ಹೊಡೆಯುತ್ತಿರುವ ಮತ್ತು ವಿವಾದಿತ ಪ್ರದೇಶದಲ್ಲಿ ನೀರು ಹರಿಯುತ್ತಿದ್ದ ಕಾಲುವೆ ಮುಚ್ಚುತ್ತಿರುವ ದೃಶ್ಯ ವೈರಲ್​ ಆಗಿದೆ. ಹಾನಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ರಸ್ತೆ ವಿವಾದ ಕೋರ್ಟ್​ನಲ್ಲಿ ವಿಚಾರಣೆ ಹಂತದಲ್ಲಿದೆ.
https://www.facebook.com/VVani4U/videos/253385145866917/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:1 × two =
Remember me
