ರಾಯಚೂರು:ಕೆಲವು ಕ್ವಾರಂಟೈನ್​ ಕೇಂದ್ರಗಳು ಅವ್ಯವಸ್ಥೆಗಳ ಆಗರವಾಗಿವೆ ಎಂಬ ಆರೋಪ ಕೇಳಿಬರುತ್ತಿದೆ. ನಿನ್ನೆ ಜಮಖಂಡಿ ನಗರದ ಒಂದು ಕ್ವಾರಂಟೈನ್​ ಕೇಂದ್ರದಲ್ಲಿರುವ ಕೂಲಿ ಕಾರ್ಮಿಕರು ತಮ್ಮನ್ನು ಗಮನಿಸುವವರೇ ಇಲ್ಲ ಎಂದು ಆರೋಪಿಸಿ ಗೇಟ್​ ಬಳಿ ಬಂದು ತಟ್ಟೆ ಬಡಿದು ಪ್ರತಿಭಟನೆ ನಡೆಸಿದ್ದರು.
ಇದೀಗ ರಾಯಚೂರಿನ ದೇವದುರ್ಗ ಪಟ್ಟಣದಲ್ಲಿ ಕ್ವಾರಂಟೈನ್​ನಲ್ಲಿ ಇದ್ದವರಿಗೆ ಕಳಪೆ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಲಾಗಿದೆ.
ಇದನ್ನೂ ಓದಿ:VIDEO: ಮಿಡತೆಗಳ ಹಾವಳಿ ಹೇಗಿದೆ ನೋಡಿ!
ಪಟ್ಟಣದ ಡಿಗ್ರಿ ಕಾಲೇಜಿನಲ್ಲಿ ಕ್ವಾರಂಟೈನ್​​ನಲ್ಲಿರುವ ಸುಮಾರು 100 ಜನರಿಗೆ ನಿನ್ನೆ ರಾತ್ರಿ ನೀಡಿದ ಊಟದಲ್ಲಿ ಹುಳಗಳು ಪತ್ತೆಯಾಗಿವೆ.
ಅಷ್ಟೇ ಅಲ್ಲ, ಇಲ್ಲಿ ಹಲವರಿಗೆ ರಕ್ತದೊತ್ತಡ ಇದ್ದು, ಮಾತ್ರೆ ತಂದುಕೊಡಿ ಎಂದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದೂ ಅಲ್ಲಿದ್ದವರು ಆರೋಪಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಇದನ್ನೂ ಓದಿ:ಸಂಪಾದಕೀಯ: ಸಾಧಕ-ಬಾಧಕ ಅರಿಯಲಿ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − 15 =
Remember me
