ಶಿವಮೊಗ್ಗ:ಹಲವು ವರ್ಷಗಳಿಂದ ಈ ದೇಶದಲ್ಲಿ ಶಾಂತಿ ಭಂಗ, ಕಾನೂನು ಬಾಹಿರ ಚಟುವಟಿಕೆ ನಡೆಸುತ್ತಿದ್ದ‌ ಪಿಎಫ್ಐ ಸೇರಿದಂತೆ ಇನ್ನಿತರ ಸಂಘಟನೆಗಳು ದೇಶಕ್ಕೆ ಮಾರಕವಾಗಿದ್ದವು. ಈ ಸಂಘಟನೆಗಳನ್ನು ನಿಷೇಧ ಮಾಡಬೇಕು ಎಂಬುದು ಹಲವು ದಿನಗಳ ಬೇಡಿಕೆಯಾಗಿತ್ತು. ಇದಕ್ಕಾಗಿ ಹೋರಾಟಗಳು ನಡೆದಿದ್ದವು. ಬಿಜೆಪಿ ಸರ್ಕಾರ ಈ ಸಂಘಟನೆಗಳನ್ನು ನಿಷೇಧ ಮಾಡಿ ಆದೇಶ ಹೊರಡಿಸಿರುವುದು, ಈ ಪ್ರಯತ್ನಕ್ಕೆ ಇದೀಗ ಜಯ ಸಿಕ್ಕಂತಾಗಿದೆ ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಪಿಎಫ್ಐ ಸೇರಿ ಐದು ಸಂಘಟನೆಗಳನ್ನು ನಿಷೇಧ ಮಾಡಿರುವ ಪ್ರಧಾನಿ ನರೇಂದ್ರ‌ ಮೋದಿ, ಗೃಹ ಸಚಿವ ಅಮಿತ್ ಷಾ ಅವರಿಗೆ ರಾಜ್ಯದ ಜನರ ಪರವಾಗಿ ಅಭಿನಂದನೆ‌ ಸಲ್ಲಿಸುತ್ತೇನೆ. ತುಂಬಾ ಹಿಂದೆಯೇ ಈ ಕೆಲಸವಾಗಬೇಕಿತ್ತು. ಆದರೆ ಈಗಲಾದರೂ ಆಗಿರುವುದು ಸ್ವಾಗತಾರ್ಹ ಎಂದರು.
ಸಿದ್ದರಾಮಯ್ಯ ಅವರ ಆರ್​​ಎಸ್​​ಎಸ್ ಬ್ಯಾನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರು ಯಾವಾಗಲೂ ತಲೆ ತಿರುಕನಂತೆ ಮಾತನಾಡುವುದು ಸ್ವಾಭಾವಿಕ. ಅವರಿಗೆ ಯಾವುದು ಸರಿ, ಯಾವುದು ತಪ್ಪು ಎನ್ನುವ ಕಲ್ಪನೆ ಇಲ್ಲ. ಇಡೀ ದೇಶದಲ್ಲಿ‌ ಹಿಂದುಗಳ ಸಂಘಟನೆ ಮಾಡುತ್ತಾ ಪ್ರಾಮಾಣಿಕ ಕೆಲಸ ಮಾಡುತ್ತಿರುವ ಆರ್​ಎಸ್​​ಎಸ್ ಬಗ್ಗೆ ನೂರಕ್ಕೆ ತೊಂಬತ್ತು ಜನ ಒಳ್ಳೆಯ ಮಾತನಾಡುತ್ತಾರೆ. ಅಂತ ಸಂಘಟನೆ ಬಗ್ಗೆ ಹಗುರವಾಗಿ ಮಾತನಾಡುವುದು ಸಿದ್ದರಾಮಯ್ಯನವರ ಯೋಗ್ಯತೆ ತೋರಿಸುತ್ತದೆ. ಅವರು ಏನೇ ಮಾತನಾಡಿದರು ಕವಡೆ ಕಾಸಿನ ಕಿಮ್ಮತ್ತಿಲ್ಲ. ಹಗುರವಾಗಿ ಮಾತನಾಡಿ ಅವರ ಗೌರವವನ್ನು ಅವರೇ ಹಾಳು ಮಾಡಿಕೊಳ್ಳುತ್ತಾರೆ ಎಂದರು.
ಪಿಎಫ್​ಐನಿಂದ ಏನೇನು ಅನಾಹುತವಾಗಿದೆ ಎಂಬುದು ಇಡೀ ದೇಶಕ್ಕೆ ಗೊತ್ತಿದೆ. ಅವರ ವಿರುದ್ಧ ಏನೇನು ಕ್ರಮ ಕೈಗೊಳ್ಳಬೇಕೋ ತೆಗೆದುಕೊಳ್ಳುತ್ತಾರೆ. ಪಿಎಫ್ಐನಂತಹ ಸಂಘಟನೆಗಳು ಬೇರೆ ಯಾವ ರೂಪದಲ್ಲೂ ತಲೆ ಎತ್ತಲು ಬಿಡುವುದಿಲ್ಲ. ಹಾಗೇನಾದರೂ ತಲೆ ಎತ್ತುವ ಕೆಲಸವನ್ನು ಮಾಡಿದರೆ ತಕ್ಕ ಶಾಸ್ತಿಯನ್ನು ಪ್ರಧಾನಿ ಹಾಗೂ ಗೃಹ ಸಚಿವರು ಮಾಡಲಿದ್ದಾರೆ ಎಂದು ಖಡಕ್ ಸೂಚನೆ ನೀಡಿದರು.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:5 × 3 =
Remember me
