ಶಿವಮೊಗ್ಗ:ಮೂತ್ರಕೋಶ ಸಮಸ್ಯೆಗೆ ಚಿಕಿತ್ಸೆ ಪಡೆಯಲೆಂದು ಮೆಗ್ಗಾನ್​ ಆಸ್ಪತ್ರೆ ದಾಖಲಾಗಿದ್ದ 56 ವರ್ಷದ ಮಹಿಳೆ ಚಿಕಿತ್ಸೆ ಫಲಿಸಿದೆ ಮಂಗಳವಾರ ಮೃತಪಟ್ಟಿದ್ದಾರೆ. ಆದರೆ, ಮರುದಿನವೇ ಮೃತರಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕಿನ ಮಹಿಳೆ ಮೃತರು. ಮೂತ್ರಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಮಹಿಳೆಯು ಮೂರು ದಿನಗಳ ಹಿಂದೆ ಮೆಗ್ಗಾನ್​ ಆಸ್ಪತ್ರೆಗೆ ದಾಖಲಾಗಿದ್ದರು. ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಸೋಮವಾರ ಮಹಿಳೆಯ ಗಂಟಲು ದ್ರವ ಸಂಗ್ರಹ ಮಾಡಿ ಲ್ಯಾಬ್​ಗೆ ಕಳುಹಿಸಲಾಗಿದ್ದು, ವರದಿ ಬರುವ ಮುನ್ನವೇ ಅಂದರೆ ಮಂಗಳವಾರ ತಡರಾತ್ರಿ ಅಸುನೀಗಿದ್ದರು.ಇದನ್ನೂ ಓದಿರಿಯುವಕ ಮೃತಪಟ್ಟ ಎರಡು ದಿನದ ಬಳಿಕ ಕುಟುಂಬಸ್ಥರಿಗೆ ಕಾದಿತ್ತೊಂದು ಶಾಕ್​!
ಮಹಿಳೆಯ ಗಂಟಲ ದ್ರವದ ಲ್ಯಾಬ್​ ರಿಪೋರ್ಟ್​ ಬುಧವಾರ ಬೆಳಗ್ಗೆ ಬಂದಿದ್ದು, ಕರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಶವವನ್ನು ದಾವಣಗೆರೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಒಪ್ಪಿಸಲಾಗಿದ್ದು, ಕರೊನಾ ಮಾರ್ಗಸೂಚಿ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್​ ತಿಳಿಸಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಕರೊನಾಗೆ ಮೊದಲ ಬಲಿ ಇದಾಗಿದೆ.
ಇದನ್ನೂ ಓದಿರಿಜಿಂದಾಲ್​ ಬೆನ್ನಲ್ಲೇ ಮತ್ತೊಂದು ಪ್ರತಿಷ್ಠಿತ ಕಂಪನಿಗೂ ವಕ್ಕರಿಸಿದ ಕರೊನಾ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × one =
Remember me
