ರಾಮನಗರ:ಜಿಲ್ಲೆಯಲ್ಲಿ ಕೊವಿಡ್​-19ಗೆ ಮೊದಲ ಬಲಿಯಾಗಿದೆ. 45 ವರ್ಷದ ತರಕಾರಿ ವ್ಯಾಪಾರಿಯೋರ್ವ ಸೋಂಕಿನಿಂದ ಸಾವನ್ನಪ್ಪಿದ್ದಾರೆ.
ಬಿಡದಿಯಲ್ಲಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಇವರಿಗೆ ಮೊದಲು ಎದೆನೋವು ಕಾಣಿಸಿಕೊಂಡಿತ್ತು. ಚಿಕಿತ್ಸೆಗಾಗಿ ಬೆಂಗಳೂರಿನ ಬೋರಿಂಗ್​ ಆಸ್ಪತ್ರೆಗೆ ದಾಖಲಾಗಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.ಇವರಿಗೆ ಮೊದಲು ಕೊವಿಡ್​-19 ಟೆಸ್ಟ್ ಮಾಡಿರಲಿಲ್ಲ. ಮೃತಪಟ್ಟ ಬಳಿಕ ಗಂಟಲಿನ ದ್ರವದ ಮಾದರಿಯನ್ನು ಕರೊನಾ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ವರದಿಯಲ್ಲಿ ಸೋಂಕು ದೃಢಪಟ್ಟಿದೆ.ಇದನ್ನೂ ಓದಿ:ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ, ಆತನದ್ದು ಕೊಲೆ; ತನಿಖೆಯಾಗಬೇಕು ಎಂದ ಕುಟುಂಬ
ಈ ತರಕಾರಿ ವ್ಯಾಪಾರಿಯ ಟ್ರಾವೆಲ್​ ಹಿಸ್ಟರಿಯನ್ನು ಆರೋಗ್ಯಾಧಿಕಾರಿಗಳು ಕಲೆ ಹಾಕುತ್ತಿದ್ದಾರೆ. ಈತನ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್​ಗೆ ಒಳಪಡಿಸಲು ಸಿದ್ಧತೆ ಮಾಡುತ್ತಿದ್ದಾರೆ.ಇಂದು 2 ಕೇಸ್​ಗಳು ಪತ್ತೆ
ರಾಮನಗರ ಜಿಲ್ಲೆಯಲ್ಲಿ ಇಂದು ಎರಡು ಹೊಸ ಕೇಸ್​ಗಳು ಪತ್ತೆಯಾಗಿವೆ. ಪಟ್ಟಣದ ಟಿಪ್ಪುನಗರದ ನಿವಾಸಿಗಳಾದ ತಾಯಿ (48), ಮಗ (28)ನಲ್ಲಿ ಕರೊನಾ ಕಾಣಿಸಿಕೊಂಡಿದೆ. ಈ ಯುವಕ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಇವರಿಬ್ಬರಿಗೂ ರಾಮನಗರದ ಕೊವಿಡ್​-19 ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.ಇದನ್ನೂ ಓದಿ:PHOTOS| ಶುಭಾ ಪೂಂಜ ಕೈ ಹಿಡಿಯುವ ವರನ್ಯಾರು ಗೊತ್ತ? ಇಲ್ಲಿವೆ ನೋಡಿ ಈ ಜೋಡಿಯ ಫೋಟೋಗಳು..
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
