ಬೆಂಗಳೂರು:ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ನಿಧನದ ಸುದ್ದಿ ಎಲ್ಲರಿಗೂ ತೀವ್ರ ಅಘಾತವನ್ನುಂಟು ಮಾಡಿದೆ. ಸ್ಪಂದನಾ ಇನ್ನಿಲ್ಲ ಎನ್ನುವ ವಿಚಾರ ಅರಗಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಸ್ಪಂದನಾ ಅವರು ಕಳೆದ ಎರಡು ತಿಂಗಳ ಹಿಂದೆ ಜಿಮ್​​​​ಗೆ ಜಾಯಿನ್ ಆಗಿದ್ದರು. ಜಿಮ್ ನಲ್ಲಿ ಸ್ಪಂದನಾ ಹೇಗಿರುತ್ತಿದ್ದರು ಎಂದು ಇದೀಗ ಫಿಟ್​​​​ನೆಸ್ ಮ್ಯಾನೇಜರ್ ನಿರಂಜನ್, ಕೋಚ್ ನರಸಿಂಹ ಅವರು ಮಾಹಿತಿ ನೀಡಿದ್ದಾರೆ.
ದಂಪತಿಗಳಿಬ್ಬರು ಸಹಕಾರ ನಗರದಲ್ಲಿ ಇರುವಂತಹ ದಿ ಫಿಟ್ ನೇಷನ್ ನಲ್ಲಿ ವರ್ಕ್ ಔಟ್ ಮಾಡುತ್ತಿದ್ದರು. ಪ್ರತಿದಿನ ಪತಿಯೊಟ್ಟಿಗೆ ವರ್ಕ್ ಔಟ್ ಮಾಡಲು ಬರುತ್ತಿದ್ದ ಸ್ಪಂದನಾ, ತುಂಬಾ ಲವಲವಿಕೆಯಿಂದ ಇರುತ್ತಿದ್ದರು. ಆರೋಗ್ಯದ ಬಗ್ಗೆ ಗಮನಹರಿಸುತ್ತಿದ್ದರು. ಇವಾಗಷ್ಟೇ ಜಿಮ್​​​​ಗೆ ಜಾಯಿನ್ ಆದ ಕಾರಣ 45 ನಿಮಿಷಗಳ ಕಾಲ ಮಾತ್ರ ಸ್ಪಂದನಾ ವರ್ಕ್ ಔಟ್ ಮಾಡುತ್ತಿದ್ದರು.
“ಜಿಮ್​​​​​ನಲ್ಲಿ ನಮ್ಮೊಟ್ಟಿಗೆ ಚೆನ್ನಾಗಿ ಮಾತಾಡುತ್ತಿದ್ದರು. ಜಾಯಿನ್ ಆಗುವಾಗ ಅವರ ಹೆಲ್ತ್ ಕಂಡಿಷನ್ ನೋಡಿದ್ವಿ, ಸ್ಪಂದನಾ ತುಂಬಾ ಫಿಟ್ & ಫೈನ್ ಆಗಿದ್ದರು. ಅವರ ಜೋಡಿ ನೋಡಿ ನಮಗೆಲ್ಲ ಖುಷಿ ಆಗ್ತಿತ್ತು. ಮೊನ್ನೆ ಒಂದಿನ ತುಂಬಾ ಬೇಗ ವರ್ಕ್ ಔಟ್ ಗೆ ಬಂದಿದ್ರು. ಯಾಕೆ ಇಷ್ಟು ಬೇಗ ಬಂದಿದ್ದು ಮೇಡಂ ಅಂತ ಕೇಳಿದಾಗ, ಅವರ ಮಗನನ್ನು ಸ್ಕೂಲ್ ಗೆ ಬಿಟ್ಟು ಬಂದಿರುವುದಾಗಿ ಹೇಳಿದರು. ಒಂದು ವಾರದ ಹಿಂದ ಜಿಮ್ ಗೆ ಬಂದಾಗ ನಾವು ಟ್ರಾವೆಲ್ ನಲ್ಲಿ ಇರ್ತಿವಿ, ಗ್ಯಾಪ್ ಆಗುತ್ತೆ ಅಂತ ಹೇಳಿದ್ದರು. ಇವಾಗ ಅವರು ಇಲ್ಲ ಅನ್ನುವ ಮಾತು ನಮಗೆ ಅರಗಿಸಿಕೊಳ್ಳು ಆಗ್ತಿಲ್ಲ” ಎಂದು ಕೋಚ್ ಮಾಹಿತಿ ಹಂಚಿಕೊಂಡಿದ್ದಾರೆ.
16 ಕೆಜಿ ತೂಕ ಕಡಿಮೆ ಆಗಬೇಕು, ಮತ್ತೆ ಸ್ಕಿನ್ ಟೈಟ್ ಆಗ್ಬೇಕು ಅಂತ ಸ್ಪಂದನಾ ಬೇಡಿಕೆ ಇಟ್ಟಿದ್ದರು ಎಂದು ಕೋಚ್ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.
ಸ್ಪಂದನಾ ನಿಧನ ಹಿನ್ನೆಲೆ; ಮಲ್ಲೇಶ್ವರಂನ ಬಿ.ಕೆ.ಶಿವರಾಂ ಮನೆ ಸಮೀಪದ ದೇವಸ್ಥಾನಗಳು ಬಂದ್

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
