ಪ್ರಶಾಂತ ರಿಪ್ಪನ್​ಪೇಟೆ ಬೆಂಗಳೂರು
ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಹಾಟ್‌ಸ್ಪಾಟ್‌ಗಳಲ್ಲಿ ಹೆಬ್ಬಾಳ ಜಂಕ್ಷನ್ ಪ್ರಮುಖವಾದದ್ದು.ಹೆಬ್ಬಾಳ ಮಾರ್ಗವಾಗಿ ಹೋಗುವ ಪ್ರಯಾಣಿಕರು ನಿತ್ಯ ಟ್ರಾಫಿಕ್ ಸಮಸ್ಯೆಯನ್ನು ಎದುರಿಸದೇ ಅನ್ಯ ಮಾರ್ಗವಿಲ್ಲ.ಈ ನಡುವೆ ಬುಧವಾರದಿಂದ ಕೆ.ಆರ್.ಪುರಂ ಕಡೆಯಿಂದ ಹೆಬ್ಬಾಳ ಮಾರ್ಗವಾಗಿ ಮೇಖ್ರಿ ಸರ್ಕಲ್ ಕಡೆಗೆ ಸಂಪರ್ಕ ಕಲ್ಪಿಸುವ ಫ್ಲೈಓವರ್ ಕ್ಲೋಸ್ ಮಾಡಲಾಗಿದ್ದು,ಹೆಬ್ಬಾಳ ಜಂಕ್ಷನ್‌ನಲ್ಲಿ ಹೊಸತೊಂದು ಟ್ರಾಫಿಕ್ ಕಿರಿಕಿರಿ ಶುರುವಾಗಿದೆ.
ಹೆಬ್ಬಾಳ ಮೇಲ್ಸೇತುವೆಯು ಬಹುಮಾರ್ಗವುಳ್ಳ ಯೋಜನೆ.ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹೋಗುವ ಮತ್ತು ಬರುವ ಪ್ರಯಾಣಿಕರಿಗೆ ಯಾವುದೇ ಅಡಚಣೆಯಾಗಬಾರದೆಂಬ ಕಾರಣಕ್ಕೆ ಪ್ರತ್ಯೇಕ ಟ್ರ್ಯಾಕ್ ಬಳಕೆಯಲ್ಲಿದ್ದು,ಈ ಹಿಂದೆ ಕೆ.ಆರ್.ಪುರಂ ಕಡೆಯಿಂದ ರಿಂಗ್‌ರಸ್ತೆಯಲ್ಲಿ ಬರುವ ವಾಹನಗಳು ಮೇಖ್ರಿಸರ್ಕಲ್ ಮೂಲಕ ಮೆಜೆಸ್ಟಿಕ್ ಕಡೆಗೆ ಹೋಗಲು ಫ್ಲೈಓವರ್ ಮೂಲಕ ಬ್ಯಾಪ್ಟಿಸ್ಟ್ ಆಸ್ಪತ್ರೆ ಬಳಿ ಇಳಿದು ಮುಂದೆ ಹೋಗುತ್ತಿದ್ದವು.ಈ ಫ್ಲೈಓವರ್ ಏರ್‌ಪೋರ್ಟ್ ರಸ್ತೆಗೆ ಹೊಂದಿಕೊಂಡಿದ್ದ ಮುಖ್ಯ ಮೇಲ್ಸೇತುವೆಗೆ ಕನೆಕ್ಟ್ ಆಗುತ್ತಿತ್ತು.ಅದನ್ನು ಪ್ರತ್ಯೇಕ ಟ್ರ್ಯಾಕ್ ಮೂಲಕವೇ ಬ್ಯಾಪ್ಟಿಸ್ಟ್ ಆಸ್ಪತ್ರೆವರೆಗೆ ಸಂಪರ್ಕ ಕಲ್ಪಿಸುವ ಹೊಸ ಲೂಪ್ ನಿರ್ಮಿಸುವ ಕಾಮಗಾರಿ ಆರಂಭವಾಗಿರುವುದರಿಂದ ಕೆ.ಆರ್.ಪುರಂ ರಿಂಗ್ ರಸ್ತೆಯ ಕಡೆಯಿಂದ ಹೆಬ್ಬಾಳದ ಮೂಲಕ ಮೇಖ್ರಿ ಸರ್ಕಲ್ ಕಡೆ ಹೋಗುವ ವಾಹನಗಳು ಹೆಬ್ಬಾಳ ಫ್ಲೈಓವರ್ ಕೆಳಗೆ ಬಲತಿರುವು ತೆಗೆದುಕೊಂಡು ಕೊಡಿಗೆಹಳ್ಳಿ ಕ್ರಾಸ್ ಅಂಡರ್ ಪಾಸ್ ಮೂಲಕ ಯೂಟರ್ನ್ ತೆಗೆದುಕೊಂಡು ಬರಬೇಕು.ಮತ್ತೆ ಕೆ.ಆರ್.ಪುರಂ ರಸ್ತೆಯ ಕಡೆಯಿರುವ ಸುರುಳಿ ಸೇತುವೆ ಬಳಸಿಕೊಂಡು ಮುಖ್ಯ ಮೇಲ್ಸೇತುವೆ ಮೂಲಕ ಬಳ್ಳಾರಿ ರಸ್ತೆಯನ್ನು ತಲುಪಬೇಕು.ಅಥವಾ ಮಾನ್ಯತಾ ಟೆಕ್ ಪಾರ್ಕ್ ಸಮೀಪ ಇರುವ ವೀರಣ್ಣನಪಾಳ್ಯದಿಂದ ಎಡತಿರುವು ತೆಗೆದುಕೊಂಡು ಆರ್.ಟಿ.ನಗರದ ಮೂಲಕ ಮೇಖ್ರಿ ಸರ್ಕಲ್ ತಲುಪಬಹುದು.ಈ ಎರಡೂ ಬದಲಿ ಮಾರ್ಗಗಳಿಂದಾಗಿ ಹೆಬ್ಬಾಳ ಮೇಲ್ಸೇತುವೆ ಕೆಳಗೆ ಸಂಚರಿಸುವ ವಾಹನಗಳ ಸಂಖ್ಯೆ ದ್ವಿಗುಣಗೊಂಡಿವೆ.ನಿಧಾನಗತಿಯಲ್ಲಿ ಸಂಚರಿಸುತ್ತಿರುವುದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಿದೆ.
ಹೆಬ್ಬಾಳಫ್ಲೈಓವರ್​ನ  ಒಂದು ಉಪಮಾರ್ಗ ಮಾತ್ರ ಕ್ಲೋಸ್ ಆಗಿದ್ದರೂ ಇದರ ಪರಿಣಾಮ ಈ ಜಂಕ್ಷನ್ ಸಂಪರ್ಕಿಸುವ ನಾಲ್ಕು ಪ್ರಮುಖ ಮಾರ್ಗಗಳ ಮೇಲಾಗಿದೆ.ಗೊರಗುಂಟೆಪಾಳ್ಯ ಕಡೆ ಹೋಗುವ,ಬರುವ ವಾಹನಗಳು ಮೂರ‌್ನಾಲ್ಕು ಸಿಗ್ನಲ್‌ಗಳವರೆಗೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಬೆಂಗಳೂರು ಸಿಟಿ ಕಡೆ ಹೋಗುವವರ ಪಾಡಂತೂ ಬಹಳ ಕಷ್ಟಕರವಾಗಿದೆ.ಏರ್‌ಪೋರ್ಟ್ ಮತ್ತಿತರ ಕಡೆಗೆ ಹೋಗುವ ವಾಹನಗಳ ಪರಿಸ್ಥ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ.ಏರ್‌ಪೋರ್ಟ್ ಫ್ಲೈಓವರ್ ಮೂಲಕ ಬರುವ ವಾಹನಗಳಿಗೆ ಹೆಚ್ಚಿನ ಪರಿಣಾಮ ಆಗಿಲ್ಲವಾದರೂ,ದೇವನಹಳ್ಳಿ,ಬ್ಯಾಟರಾಯನಪುರ,ಜಕ್ಕೂರು,ಯಲಹಂಕ ಕಡೆಗಳಿಂದ ಬೆಂಗಳೂರು ಕಡೆಗೆ ಫ್ಲೈಓವರ್ ಕೆಳಗೆ ಬರುವ ವಾಹನಗಳ ಪರಿಸ್ಥಿತಿ ಮಾತ್ರ ಹೇಳತೀರದು.
ಹೆಬ್ಬಾಳ ಜಂಕ್ಷನ್ ಸದಾ ಸಂಚಾರ ದಟ್ಟಣೆ ಇರುವ ಸ್ಥಳ.ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ದಿನದ24ಗಂಟೆ ಸಂಚರಿಸುವ ವಾಹನಗಳು,ಗೊರಗುಂಟೆಪಾಳ್ಯ ದಿಂದ ಕೆ.ಆರ್.ಪುರಂ ಕಡೆಗೆ ರಿಂಗ್‌ರಸ್ತೆ ಮೂಲಕ ಸಂಚರಿಸುವ ಬೃಹತ್ ಸರಕು ಸಾಗಾಟದ ವಾಹನಗಳು,ಮಾನ್ಯತಾ ಟೆಕ್ ಪಾರ್ಕ್ ಹಾಗೂ ಐಟಿಪಿಎಲ್‌ನಂತಹ ಬೃಹತ್ ಐಟಿ ಕಂಪನಿಗಳಿಗೆ ಹೋಗುವ ಉದ್ಯೋಗಿಗಳು ಸಂಚರಿಸುವುದರಿಂದ ಈ ಮಾರ್ಗದಲ್ಲಿ ಟ್ರಾಫಿಕ್ ಸಮಸ್ಯೆ ಹೆಚ್ಚು.ಜೊತೆಗೆ ನಮ್ಮ ಮೆಟ್ರೋ ಕಾಮಗಾರಿ ಪ್ರಗತಿಯಲ್ಲಿರುವ ಕಾರಣ ರಿಂಗ್ ರಸ್ತೆಯಲ್ಲಿ ಮೂರು ಪಥಗಳ ಬದಲಾಗಿ ಎರಡು ಪಥಗಳಲ್ಲಿ ಮಾತ್ರ ವಾಹನ ಸಂಚರಿಸುತ್ತಿರುವುದು ಟ್ರಾಫಿಕ್ ಸಮಸ್ಯೆ ಹೆಚ್ಚಾಗಲು ಮತ್ತೊಂದು ಕಾರಣ.ಸಂಚಾರ ಪೊಲೀಸರು ಈ ಮಾರ್ಗದಲ್ಲಿ ಹಲವು ಮಾರ್ಪಾಡುಗಳನ್ನು ತಂದಿದ್ದರೂ ಟ್ರಾಫಿಕ್ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ.
ಈಗ ಆರಂಭವಾಗಿರುವ ಕಾಮಗಾರಿ ಮುಕ್ತಾಯವಾಗಲು ಐದಾರು ತಿಂಗಳು ಬೇಕು ಎನ್ನಲಾಗುತ್ತಿದೆ.ಆದ್ದರಿಂದ ಮಳೆಗಾಲ ಶುರುವಾದ ಮೇಲೆ ಸಮಸ್ಯೆ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆ ಇದೆ.ರಸ್ತೆಗುಂಡಿಗಳು ಮಳೆನೀರು ತುಂಬಿಕೊಂಡು ದ್ವಿಚಕ್ರ ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಬಹುದು.ಟ್ರಾಫಿಕ್ ಇನ್ಸ್‌ಪೆಕ್ಟರ್ ಸಲೀಂ ಅವರು ಹೇಳುವ ಪ್ರಕಾರ;ಕ್ಲೋಸ್ ಆಗಿರುವ ಫ್ಲೈಓವರ್​ನಿಂದ ಟ್ರಾಫಿಕ್ ಸಮಸ್ಯೆ ಹೆಚ್ಚಾಗಲಿದ್ದು,ಸದ್ಯ ಶಾಲಾ–ಕಾಲೇಜುಗಳಿಗೆ ರಜೆ ಇರುವುದರಿಂದ ತೀವ್ರತೆ ಗೊತ್ತಾಗುತ್ತಿಲ್ಲ.ಶಾಲಾ ಕಾಲೇಜುಗಳು ರೀ ಓಪನ್ ಆದ ನಂತರ ಮತ್ತಷ್ಟು ಸಮಸ್ಯೆಯಾಗಲಿದೆ.
ಕೆ.ಆರ್.ಪುರಂ ನಿಂದ ಹೆಬ್ಬಾಳ ಕಡೆಗೆ ಯಾವಾಗಲೂ ಟ್ರಾಫಿಕ್ ಸಮಸ್ಯೆ.ಈ ನಡುವೆ ್ಲೈಓವರ್ ಕ್ಲೋಸ್ ಮಾಡಿದ್ದರಿಂದ ಟ್ರಾಫಿಕ್ ಮತ್ತಷ್ಟು ಹೆಚ್ಚಾಗಿದೆ.ಒಂದು ಕಡೆ ಮೆಟ್ರೋ ಕಾಮಗಾರಿ ಇನ್ನೊಂದು ಕಡೆ ಫ್ಲೈಓವರ್ ಬಂದ್ ಪ್ರಯಾಣಿಕರ ಸಮಸ್ಯೆ ಹೇಳತೀರದು.
–ಪ್ರಲಾಪ್,ಕೆ.ಆರ್.ಪುರಂ ನಿವಾಸಿ
ನಾನು ಪ್ರತಿದಿನ ಮಾನ್ಯತ ಟೆಕ್ ಪಾರ್ಕ್ ಕಡೆಯಿಂದ ಮಲ್ಲೇಶ್ವರ ಕಡೆ ಓಡಾಡುತ್ತೇನೆ. ಫ್ಲೈಓವರ್ಕ್ಲೋಸ್ ಆಗಿರುವುದರಿಂದ ಮನೆ ತಲುಪಲು ಮೊದಲಿಗಿಂತ ಎರಡು ಪಟ್ಟು ಟೈಂ ಆಗುತ್ತಿದೆ.ಕೊಡಿಗೆಹಳ್ಳಿ ಕ್ರಾಸ್ ಹೋಗಿ ಯೂಟರ್ನ್ ಮಾಡಿ ಮತ್ತೆ ಹೆಬ್ಬಾಳಕ್ಕೆ ಬಂದು ಹೊಗುವುದರಿಂದ ಸಮಯ ವ್ಯರ್ಥ ಆಗುತ್ತಿದೆ.
–ರಕ್ಷಿತ್,ಟೆಕ್ಕಿ
ಮೊದಲೇ ಹೆಬಾಳದಲ್ಲಿ ಹೆವಿ ಟ್ರಾಪಿಕ್,ಪ್ಲೈ ಓವರ್ ಬಂದ್ ಮಾಡಿರುವುದರಿಂದ ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯುವ ಪರಿಸ್ಥಿತಿ ಉಂಟಾಗಿದೆ.ಎರಡೆರಡು ಬಾರಿ ಪ್ಲೈಓವರ್ ಕ್ರಾಸ್ ಮಾಡಬೇಕಾಗಿದೆ.ಅದಷ್ಟು ಬೇಗ ಸಮಸ್ಯೆಯನ್ನು ಬಗೆಹರಿಸಿದರೆ ಅನುಕೂಲ.
–ಹರೀಶ್,ಸ್ವಉದ್ಯೋಗಿ
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 + seven =
Remember me
