ಮಡಿಕೇರಿ: ಗಜಗಿರಿ ಬೆಟ್ಟದಲ್ಲಿ ಉಂಟಾದ ಭೂಕುಸಿತಕ್ಕೆ ಅರಣ್ಯ ಇಲಾಖೆಯೇ ನೇರ ಕಾರಣ ಎಂದು ಜಿಎಡಿಎಸ್ ಜಿಲ್ಲಾಧ್ಯಕ್ಷ ಕೆಎಂ ಗಣೇಶ್ ಆರೋಪಿಸಿದ್ದಾರೆ.ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗಜಗಿರಿ, ಬ್ರಹ್ಮಗಿರಿ ಬೆಟ್ಟಗಳಲ್ಲಿ ೨೦೧೬ರಿಂದ ಅರಣ್ಯ ಇಲಾಖೆ ೫,೪೦೦ ಇಂಗು ಗುಂಡಿಗಳನ್ನು ತೋಡಿದೆ. ಬೆಟ್ಟಗಳಲ್ಲಿ ಜೆಸಿಬಿಯಿಂದ ಗುಂಡಿ ತೋಡಿದಾಗ ಮಣ್ಣು ಸಡಿಲವಾಗುತ್ತದೆ. ಹೀಗಾಗಿ ಭೂಕುಸಿತ ಉಂಟಾಗಿದೆ. ಇದಕ್ಕೆಲ್ಲಾ ಅರಣ್ಯ ಇಲಾಖೆಯೇ ನೇರ ಹೊಣೆ. ಈ ಕುರಿತು ಜಿಲ್ಲಾಡಳಿತ, ರಾಜ್ಯ ಸರ್ಕಾರ, ಸ್ಥಳೀಯರ ಅಭಿಪ್ರಾಯ ಪಡೆದಿದ್ದಾರಾ ಎಂಬುದೇ ಗೊತ್ತಿಲ್ಲ. ಕೇಂದ್ರದ ಅನುಮತಿ ಇದೆ.ವಿರೋಧ ಪಡಿಸಿದರೆ ಕೇಸ್ ಹಾಕ್ತೀವಿ ಎಂದು ಹೆದರಿಸಿ ಇಂಗು ಗುಂಡಿಗಳನ್ನು ತೆಗೆದಿದ್ದಾರೆ. ಬೆಟ್ಟದಲ್ಲಿ ತೆಗೆದಿರುವ ಇಂಗುಗುಂಡಿಗಳನ್ನು ಕೂಡಲೇ ಮುಚ್ಚದಿದ್ದಲ್ಲಿ, ಅರಣ್ಯ ಇಲಾಖೆ ಎದುರು ಉಗ್ರ ಹೋರಾಟ ಹಮ್ಮಿಕೊಳ್ಳುವುದು ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಯುವ ಘಟಕದ ಅಧ್ಯಕ್ಷ ವಿಶ್ವ, ಜಿ.ಸಂ.ಕಾರ್ಯದರ್ಶಿ ಗಣೇಶ್, ಮಡಿಕೇರಿ ತಾಲೂಕು ಅಧ್ಯಕ್ಷ ಬಲ್ಲಚಂಡ ಗೌತಮ್, ವಿರಾಜಪೇಟೆ ತಾಲೂಕು ಅಧ್ಯಕ್ಷ ಮಂಜುನಾಥ್ ಹಾಜರಿದ್ದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 9 =
Remember me
