ಬೆಳಗಾವಿ:ನವದೆಹಲಿಯ ಏಮ್ಸ್​ (ಆಲ್​ ಇಂಡಿಯಾ ಇನ್​ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್) ನಲ್ಲಿ ನಿನ್ನೆ ವಿಧಿವಶರಾದ ಕೇಂದ್ರದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅವರ ಅಂತ್ಯಸಂಸ್ಕಾರ ದೆಹಲಿಯ ಲೋಧಿರಸ್ತೆಯ ಚಿತಾಗಾರದಲ್ಲಿ ನಡೆಯಲಿದೆ. ಕರೊನಾ ಕಾರಣಕ್ಕೆ ಪಾರ್ಥಿವ ಶರೀರವನ್ನು ಊರಿಗೆ ಕೊಂಡೊಯ್ಯದಂತೆ ವೈದ್ಯರು ಸಲಹೆ ನೀಡಿದ ಕಾರಣ, ಕುಟುಂಬದ ಸದಸ್ಯರೂ ಅದಕ್ಕೊಪ್ಪಿ ದೆಹಲಿ ಕಡೆಗೆ ಪಯಣ ಬೆಳೆಸಿದ್ದಾರೆ.
ಸಂಜೆ 4 ಗಂಟೆ ಸುಮಾರಿಗೆ ಅಂತ್ಯಸಂಸ್ಕಾರ ನಡೆಯುವ ನಿರೀಕ್ಷೆ ಇದೆ. ಲಿಂಗಾಯತ ಧರ್ಮದ ವಿಧಿ ವಿಧಾನದ ಪ್ರಕಾರ ಬಾಳಯ್ಯ ಹಿರೇಮಠ ಮತ್ತು ಆಪ್ತ ಸಹಾಯಕರಾದ ಶ್ರೀಕಾಂತ್ ಕಟಕೋಳ, ರಂಗನಾಥ ದೇಶಪಾಂಡೆ, ರಾಜು ಜ್ಯೋಶಿ, ಸಂತೋಷ ತುಬಚಿ ಅಂತ್ಯಕ್ರಿಯೆಯ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಇವರೂ ದೆಹಲಿಗೆ ಹೊರಟಿದ್ದಾರೆ. ಹಿರಿಯ ಪುತ್ರಿ ಡಾ.ಸ್ಪೂರ್ತಿ ಪಾಟೀಲ, ಮೊಮ್ಮಗಳು ಸೇರಿ ಒಂಭತ್ತು ಕುಟುಂಬ ಸದಸ್ಯರು ಬೆಳಗಾವಿಯಿಂದ ವಿಮಾನ ಮಾರ್ಗವಾಗಿ ದೆಹಲಿಗೆ ಪ್ರಯಾಣಿಸಿದ್ದಾರೆ.
ಇದನ್ನೂ ಓದಿ:ಸೋಲರಿಯದ ಸರದಾರ ವಿವಾದಗಳಿಂದ ದೂರ…
ಶ್ರದ್ಧಾಂಜಲಿ ಸಭೆ:ನವದೆಹಲಿಯ ಕನ್ನಡ ಭವನದಲ್ಲಿ ಶ್ರದ್ಧಾಂಜಲಿ ಸಭೆ ಏರ್ಪಡಿಸಲಾಗಿದೆ. ಬೆಳಗ್ಗೆ 9 ಗಂಟೆಗೆ ಸಭೆ ನಡೆಯಲಿದೆ. ಇದು ರಾಜ್ಯಾದ್ಯಂತ ಶೋಕಾಚರಣೆ ಘೋಷಿಸಲಾಗಿದ್ದು, ಯಾವುದೇ ಮನರಂಜನಾ ಕಾರ್ಯಕ್ರಮಗಳು ಇರುವುದಿಲ್ಲ. ಸರ್ಕಾರಿ ಕಚೇರಿ ಕಟ್ಟಡಗಳಲ್ಲಿ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಹಾರಿಸುವಂತೆ ಸರ್ಕಾರ ಸೂಚನೆ ನೀಡಿದೆ. (ದಿಗ್ವಿಜಯ ನ್ಯೂಸ್)
ಕೇಂದ್ರ ಸಚಿವ ಸುರೇಶ್​ ಅಂಗಡಿ ನಿಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − one =
Remember me
