|ನವೀನ್ ಬಿಲ್ಗುಣಿಶಿವಮೊಗ್ಗ
ಬಿಎಸ್ಸಿ ನರ್ಸಿಂಗ್ ಓದುವ ಆಸೆ ಹೊತ್ತ ಸಾವಿರಾರು ವಿದ್ಯಾರ್ಥಿಗಳು ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರ) ನಿರ್ಲಕ್ಷ್ಯಂದಾಗಿ ಕಳೆದ ಒಂದೂವರೆ ತಿಂಗಳಿಂದ ಅತಂತ್ರರಾಗಿದ್ದಾರೆ. ಇತ್ತ ಪ್ರವೇಶಾತಿಯೂ ಇಲ್ಲದೆ, ಅತ್ತ ಬೇರೆ ಕೋರ್ಸ್​ಗಳಿಗೂ ಹೋಗಲಾದರೆ ಅಕ್ಷರಶಃ ಪರದಾಡುತ್ತಿದ್ದಾರೆ.
ಕೆಇಎ ಪ್ರಸಕ್ತ ಸಾಲಿನ ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ ಮತ್ತು ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಸೇರಿದಂತೆ ಹಲವು ಕೋರ್ಸ್​ಗಳಿಗೆ ಮೊದಲ ವರ್ಷದ ದಾಖಲಾತಿ ಪ್ರಕ್ರಿಯೆಯನ್ನು 2021ರ ಡಿಸೆಂಬರ್​ನಲ್ಲೇ ಆರಂಭಿಸಿ 2022ರ ಜ.2ರಂದು ಮುಗಿಸಿತ್ತು. ಈಗಾಗಲೇ ರಾಜ್ಯಾದ್ಯಂತ 20 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಅರ್ಜಿ ಸಹಿತ ದಾಖಲಾತಿ ಸಲ್ಲಿಸಿದ್ದಾರೆ. ಆದರೆ ದಾಖಲಾತಿ ಪರಿಶೀಲನೆ ಪೂರ್ಣಗೊಂಡ ಬಳಿಕ ಕೆಎಇ ಕೈಕಟ್ಟಿ ಕುಳಿತಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ.
ವ್ಯರ್ಥವಾಗುವ ಭಯ:2021ರ ಏಪ್ರಿಲ್​ನಲ್ಲೇ ದ್ವಿತೀಯ ಪಿಯುಸಿ ಮುಗಿಸಿರುವ ವಿದ್ಯಾರ್ಥಿಗಳು ಆನಂತರ ನರ್ಸಿಂಗ್ ಕೋರ್ಸ್ ಪ್ರವೇಶಾತಿಗೆ ಮುಂದಾಗಿದ್ದಾರೆ. ಆದರೆ, ಕೆಇಎ ವಿಳಂಬದಿಂದಾಗಿ ದ್ವಿತೀಯ ಪಿಯುಸಿ ಮುಗಿಸಿ 10 ತಿಂಗಳಾದರೂ ಹೊಸ ಕೋರ್ಸ್​ಗೆ ಪ್ರವೇಶಾತಿ ಸಾಧ್ಯವಾಗಿಲ್ಲ. ಇವರ ಜತೆ ಓದಿದ ವಿದ್ಯಾರ್ಥಿಗಳು ಇಂಜಿನಿಯರಿಂಗ್ ಸೇರಿದಂತೆ ಹಲವು ಕೋರ್ಸ್​ಗಳಿಗೆ ಪ್ರವೇಶ ಪಡೆದಿದ್ದಾರೆ. ಅಲ್ಲದೆ, ಮೊದಲ ಸೆಮಿಸ್ಟರ್ ಪರೀಕ್ಷೆಯನ್ನೂ ಬರೆಯಲು ಸಜ್ಜಾಗಿದ್ದಾರೆ. ಆದರೆ ನರ್ಸಿಂಗ್ ಕೋರ್ಸ್ ವಿದ್ಯಾರ್ಥಿಗಳಿಗೆ ಇನ್ನೂ ತಮ್ಮದು ಯಾವ ಕಾಲೇಜು ಎಂಬುದೂ ತಿಳಿದಿಲ್ಲ. ಹಾಗಾಗಿ ಒಂದು ವರ್ಷ ವ್ಯರ್ಥವಾಗುವ ಭಯ ಸಾವಿರಾರು ವಿದ್ಯಾರ್ಥಿಗಳನ್ನು ಕಾಡುತ್ತಿದೆ.
ದಾಖಲಾತಿ ಪರಿಶೀಲನೆ ಮುಗಿದಿದೆ. ಸದ್ಯ ಕೆಇಎ (ಕರ್ನಾಟಕ ಪರೀಕ್ಷಾ ಪ್ರಾಧಿಕಾರವು) ವೈದ್ಯಕೀಯ ಸ್ನಾತಕೋತ್ತರ ಮತ್ತು ಪದವಿ ದಾಖಲಾತಿ ಪ್ರಕ್ರಿಯೆ ನಡೆಸುತ್ತಿದೆ. ಮೂರ್ನಾಲ್ಕು ದಿನಗಳಲ್ಲಿ ಪಿಜಿ ದಾಖಲಾತಿ ಪ್ರಕ್ರಿಯೆ ಮುಕ್ತಾಯಗೊಂಡ ನಂತರ ಸದರಿ ಕೋರ್ಸ್​ಗಳ ದಾಖಲಾತಿ ಪ್ರಕ್ರಿಯೆ ಆರಂಭಿಸುವುದಾಗಿ ಕೆಇಎ ತಿಳಿಸಿದೆ. ಮಾರ್ಚ್ 31ರವರೆಗೆ ದಾಖಲಾತಿಗೆ ಅವಕಾಶವಿದ್ದು ವಿದ್ಯಾರ್ಥಿಗಳು ಆತಂಕಗೊಳ್ಳುವ ಅಗತ್ಯವಿಲ್ಲ.
| ಡಾ. ಕೆ.ಸುಧಾಕರ್ವೈದ್ಯಕೀಯ ಶಿಕ್ಷಣ ಸಚಿವ
ಯಾವುದಕ್ಕೆ ಪ್ರವೇಶಾತಿ ಆಗಿಲ್ಲ?
ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್, ಪಿಬಿ ಬಿಎಸ್ಸಿ ನರ್ಸಿಂಗ್, ಬಿಪಿಟಿ (ಲ್ಯಾಟರಲ್ ಎಂಟ್ರಿ), ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸಸ್ (ಲ್ಯಾಟರಲ್ ಎಂಟ್ರಿ) ಕೋರ್ಸ್​ಗಳ ಪ್ರವೇಶಾತಿಗೆ ಕೆಇಎ ಅಧಿಸೂಚನೆ ಹೊರಡಿಸಿತ್ತು. ಅದರಲ್ಲಿ ಮೊದಲ ವರ್ಷದ ಬಿಎಸ್ಸಿ ನರ್ಸಿಂಗ್, ಬಿಪಿಟಿ, ಬಿಪಿಒ, ಬಿಎಸ್ಸಿ ಅಲೈಡ್ ಹೆಲ್ತ್ ಸೈನ್ಸ್ ಕೋರ್ಸ್​ಗಳಿಗೆ ಇನ್ನೂ ಪ್ರವೇಶಾತಿಯನ್ನೇ ನೀಡುತ್ತಿಲ್ಲ.
ಸ್ಕಾಲರ್​ಶಿಪ್, ಹಾಸ್ಟೆಲ್ ಸೀಟಿಲ್ಲ:ವಾಸ್ತವವಾಗಿ ಮೊದಲ ವರ್ಷದ ಕೋರ್ಸ್​ಗಳಿಗೆ ಪ್ರವೇಶ ಪಡೆಯಲು ಮುಂದಾಗಿರುವ ವಿದ್ಯಾರ್ಥಿಗಳಿಗೆ ಬಿಸಿಎಂ ಹಾಸ್ಟೆಲ್​ಗಳಲ್ಲಿ ಸೇರಲು ಕೊನೆಯ ದಿನವೂ ಮುಕ್ತಾಯವಾಗಿದೆ. ವಿದ್ಯಾರ್ಥಿ ವೇತನದಿಂದಲೂ ವಂಚಿತರಾಗುತ್ತಿದ್ದಾರೆ. ಹಾಗಾಗಿ ಪ್ರವೇಶಾತಿ ಪಡೆಯಲು ಮುಂದಾಗಿರುವ ವಿದ್ಯಾರ್ಥಿಗಳು ದುಬಾರಿ ಬಾಡಿಗೆ ಕೊಟ್ಟು ಹೊರಗಡೆ ಮನೆ ಅಥವಾ ರೂಮ್ ಮಾಡಿಕೊಳ್ಳಬೇಕಿದೆ. ಇದು ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗಲಿದೆ.
ಕರ್ನಾಟಕ ಪರೀಕ್ಷಾ ಪಾಧಿಕಾರ ಬಿಎಸ್ಸಿ ನರ್ಸಿಂಗ್, ಎಎಚ್​ಎಸ್, ಬಿಪಿಒ, ಬಿಪಿಟಿ ಕೋರ್ಸ್​ಗಳ ಮೊದಲ ವರ್ಷದ ಪ್ರವೇಶಾತಿಗೆ ದಾಖಲಾತಿ ಪರಿಶೀಲಿಸಿ 2 ತಿಂಗಳಾಗಿದೆ. ನಮ್ಮ ಜತೆಯಲ್ಲೇ ಓದಿ ಬೇರೆ ಕೋರ್ಸ್​ಗಳಿಗೆ ಪ್ರವೇಶ ಪಡೆದ ಸ್ನೇಹಿತರು ಇದೀಗ ಮೊದಲ ಸೆಮಿಸ್ಟರ್ ಪರೀಕ್ಷೆಗೆ ಸಿದ್ಧರಾಗುತ್ತಿದ್ದಾರೆ. ಆದರೆ ನಮಗಿನ್ನೂ ಪ್ರವೇಶಾತಿ ನೀಡಿಲ್ಲ. ಜತೆಗೆ ಹಾಸ್ಟೆಲ್​ನಲ್ಲಿ ಸೀಟು, ಸ್ಕಾಲರ್​ಶಿಪ್ ಕೂಡ ಸಿಗುವುದಿಲ್ಲ. ಒಂದು ವರ್ಷ ವ್ಯರ್ಥವಾಗುವ ಆತಂಕ ಕಾಡುತ್ತಿದೆ.
| ಹೆಸರು ಹೇಳಲಿಚ್ಛಿಸದ ಬಿಎಸ್ಸಿ ನರ್ಸಿಂಗ್ ವಿದ್ಯಾರ್ಥಿಗಳು
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 2 =
Remember me
