|ಶರಣಪ್ಪ ಕೃಷ್ಣಾಪುರಕಾರಟಗಿ (ಕೊಪ್ಪಳ)
ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳು ಜ.1ರಿಂದ ಪ್ರಾರಂಭವಾಗಿದ್ದು, ಕೆಜಿಬಿವಿ (ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲೆ) ಶಾಲಾ ವಿದ್ಯಾರ್ಥಿಗಳಿಗೆ ‘ವಿದ್ಯಾಗಮ ಪೂರಕ ಕಲಿಕಾ ವ್ಯವಸ್ಥೆ’ಯಲ್ಲಿ ಕಲಿಯಲು ಅವಕಾಶ ಕಲ್ಪಿಸುವಂತೆ ಸರ್ಕಾರ ಜಾರಿಗೊಳಿಸಿರುವ ಆದೇಶ ವಿದ್ಯಾರ್ಥಿಗಳು ಹಾಗೂ ಶಿಕ್ಷಕರನ್ನು ಕೊಂಚ ಗೊಂದಲಕ್ಕೆ ನೂಕಿದೆ.
ಎರಡನೇ ಹಂತದ ವಿದ್ಯಾಗಮ ಕೆಜಿಬಿವಿ ವಿದ್ಯಾರ್ಥಿಗಳಿಗೆ ದೊರೆತಿಲ್ಲ. ಸದ್ಯ ಸರ್ಕಾರಿ ಶಾಲೆಗಳಲ್ಲಿ ನಡೆಯುತ್ತಿರುವ ವಿದ್ಯಾಗಮದಲ್ಲಿಯೇ ಕಲಿಕೆಗೆ ವ್ಯವಸ್ಥೆ ಮಾಡಿರುವುದೇ ಗೊಂದಲ ಹಾಗೂ ಸಮಸ್ಯೆಗೆ ಕಾರಣವಾಗಿದೆ. ಕೆಜಿಬಿವಿ ಶಾಲೆಗೆ ಕೇವಲ ಒಂದು ಹಳ್ಳಿಯಿಂದ ಮಾತ್ರ ಮಕ್ಕಳು ಕಲಿಕೆಗೆ ಆಗಮಿಸುವುದಿಲ್ಲ. ಜಿಲ್ಲೆಯ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಜಿಲ್ಲೆಯ ಅನೇಕ ಹಳ್ಳಿಗಳಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಿಲ್ಲ. ಇಂಥ ಪ್ರದೇಶಗಳಲ್ಲಿ ಪ್ರೌಢ ಶಾಲಾ ಮಕ್ಕಳ ಕಲಿಕೆಗೆ ಹಿನ್ನೆಡೆಯಾಗುವ ಜತೆಗೆ ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಲಿದೆ. ಇದರ ಜತೆಗೆ ನಿರ್ದಿಷ್ಟ ಮಾಧ್ಯಮದ ಶಾಲಾ ಮಕ್ಕಳಿಗೆ ತೊಂದರೆಯಾಗಲಿದೆ. ನಾನಾ ಕಡೆಯ ಸರ್ಕಾರಿ ಶಾಲೆಗಳಲ್ಲಿ ಉರ್ದು, ಇಂಗ್ಲಿಷ್ ಬೋಧನಾ ಶಿಕ್ಷಕರು ದೊರೆಯುವುದು ಕಷ್ಟ. ಇನ್ನು ಹಲವೆಡೆ ಕೆಜಿಬಿವಿಯ ಮುಂದುವರಿದ ಭಾಗ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್​ಎಂಎಸ್​ಎ) ಶಾಲೆಗಳಿಲ್ಲ. ಕಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಶಿಕ್ಷಕರು ಪ್ರೌಢ ಶಾಲಾ ವಿದ್ಯಾರ್ಥಿಗಳಿಗೆ ಬೋಧಿಸಲು ಸಾಧ್ಯವಾಗುವುದಿಲ್ಲ. ಇತರ ಸಮಸ್ಯೆಗಳಿಂದಾಗಿ ಕಲಿಕೆಗೆ ಹಿನ್ನೆಡೆಯಾಗುತ್ತದೆ ಎಂಬ ಮಾತುಗಳಿವೆ.
ರಾಜ್ಯದ 71 ಕಡೆ ಕಸ್ತೂರಬಾ ಗಾಂಧಿ ಬಾಲಿಕ ಕಲಿಕಾ ಶಾಲೆಗಳಿವೆ. 8,500 ವಿದ್ಯಾರ್ಥಿಗಳು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. 715 ಅರೆಕಾಲಿಕ ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 300 ಶಿಕ್ಷಕ, ಶಿಕ್ಷಕಿಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಜಿಬಿವಿ ಶಾಲೆಗಳಲ್ಲಿ 2ನೇ ಹಂತದ ವಿದ್ಯಾಗಮ ಪ್ರಾರಂಭಿಸಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಯಾವುದೇ ಶಾಲೆಯ ಮಕ್ಕಳಾಗಲಿ ಕಲಿಕೆಯಿಂದ ವಂಚಿತರಾಗಬಾರದು. ಪ್ರತಿಯೊಬ್ಬರಿಗೂ ಶಿಕ್ಷಣ ದೊರೆಯುವಂತಾಗಬೇಕು. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರ ಅಗತ್ಯ ಕ್ರಮವಹಿಸಲಿದೆ.
|ಚಂದ್ರಶೇಖರ ಗಣವಾರಿಮುಖ್ಯಶಿಕ್ಷಕ, ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲೆ
ಕೆಜಿಬಿವಿ ಮಕ್ಕಳ ಕಲಿಕೆಗೆ ಯಾವುದೇ ಸಮಸ್ಯೆಯಾಗದಂತೆ ಈಗಾಗಲೇ ಶಾಲೆ ವತಿಯಿಂದ ಆನ್​ಲೈನ್ ಮೂಲಕ ಪಠ್ಯ ಬೋಧನೆ ಕಾರ್ಯ ನಡೆದಿದೆ. ವಿದ್ಯಾಗಮದಲ್ಲಿ ಕಸ್ತೂರಬಾ ಗಾಂಧಿ ಬಾಲಿಕ ವಸತಿ ಶಾಲಾ ಮಕ್ಕಳಿಗೆ ಸಮಸ್ಯೆಯಾಗದಂತೆ ಸರ್ಕಾರ ಕ್ರಮವಹಿಸಲಿದೆ. ಈಗಾಗಲೇ ಸಮಸ್ಯೆಗಳ ಕುರಿತು ರ್ಚಚಿಸಲಾಗಿದೆ. ಇಲಾಖೆ ನಿರ್ದೇಶಕರು ನೀಡುವ ಮಾರ್ಗದರ್ಶನದಡಿ ಕ್ರಮವಹಿಸಲಾಗುವುದು.
|ಸೋಮಶೇಖರ ಗೌಡಬಿಇಒ, ಗಂಗಾವತಿ
ಇತರ ಸರ್ಕಾರಿ ಶಾಲೆಗಳಂತೆ ಕೆಜಿಬಿವಿ ಶಾಲೆಗಳನ್ನು ಸಹ ಸರ್ಕಾರ ಪ್ರಾರಂಭಿಸಬೇಕು. ಕೆಜಿಬಿವಿ ಶಾಲೆಗಳು ಪ್ರಾರಂಭವಾದರೆ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗುತ್ತದೆ. ದೂರದ ಪ್ರದೇಶಗಳಿಗೆ ಕಳಿಸಿ ಮಕ್ಕಳಿಗೆ ಶಿಕ್ಷಣ ಕೊಡಿಸುವಷ್ಟು ಆರ್ಥಿಕ ಸ್ಥಿತಿ ನಮ್ಮಲ್ಲಿಲ್ಲ. ಸರ್ಕಾರ ಈ ಬಗ್ಗೆ ಚಿಂತನೆ ನಡೆಸಬೇಕು.
|ಬಾಷಾಸಾಬ್ ಹಣಗಿಕೆಜಿಬಿವಿ ಶಾಲೆಯ ವಿದ್ಯಾರ್ಥಿ ಪಾಲಕ, ಕನಕಗಿರಿ
ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:nine − seven =
Remember me
