ಶಿವಮೊಗ್ಗ:ಅಪ್ಪನಂತೆ ಮಗಳು ಎಂಬ ಮಾತಿಗೆ ಸಾಕ್ಷಿಯೆಂಬಂತಹ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಅಪ್ಪ ಪೊಲೀಸ್. ಮಗಳು ನಾಲ್ಕನೇ ತರಗತಿ ವಿದ್ಯಾರ್ಥಿನಿ. ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ದಾರಿ ಮಧ್ಯೆ ಪರ್ಸ್​ ಸಿಕ್ಕಿದೆ. ಈ ವೇಳೆ ಬಾಲಕಿ ಕೂಡಲೇ ತನ್ನ ತಂದೆಗೆ ಫೋನ್ ಮಾಡಿ ವಿಷಯ ತಿಳಿಸಿದ್ದಾಳೆ.
ವಿದ್ಯಾರ್ಥಿನಿ ನಾಗಲಕ್ಷ್ಮೀ ತಂದೆ ನಾಗರಾಜಪ್ಪ ಬೆಂಗಳೂರಿನ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಹೆಡ್​ ಕಾನ್​​ಸ್ಟೇಬಲ್. ದಾರಿ ಮಧ್ಯೆ ಪರ್ಸ್​ ಬಿದ್ದು ಸಿಕ್ಕುತ್ತಿದ್ದಂತೆ, ಕೈಗೆತ್ತಿಕೊಂಡು ಮನೆಗೆ ಬಂದಿದ್ದಾಳೆ. ನಂತರ ಅಮ್ಮನ ಸಹಾಯದಿಂದ ಬೆಂಗಳೂರಿನಲ್ಲಿದ್ದ ಅಪ್ಪನಿಗೆ ಕರೆ ಮಾಡಿ, ನಡೆದ ಘಟನೆಯನ್ನು ವಿವರಿಸಿದ್ದಾಳೆ.
ಮನೆಯವರ ವಿರೋಧ ಲೆಕ್ಕಿಸದೇ ಮುಸ್ಲಿಂ ಯುವಕನ ಜತೆ ಹೋದ ಯುವತಿಯ ಗತಿ ಏನಾಯ್ತು ನೋಡಿ!
ಪೊಲೀಸ್ ಕೆಲಸದಲ್ಲಿದ್ದ ನಾಗರಾಜಪ್ಪ, ತನ್ನ ಅನುಭವದಂತೆ ಪರ್ಸ್​ನ ಒಳಗೆ ಏನೆಲ್ಲಾ ಇದೆ ಪರೀಕ್ಷಿಸಲು ಹೇಳಿದ್ದಾರೆ. ಈ ವೇಳೆ ಪರ್ಸ್​ನಲ್ಲಿ ಗೌರಿ ಎಂಬ ಹೆಸರು ಬರೆದಿರುವ ಸ್ಕೂಲ್ ಫೀಸ್ ರಿಸಿಪ್ಟ್ ಸಿಕ್ಕಿದೆ. ಇದರ ಸಹಾಯದಿಂದ ಸೈಂಟ್ ಜೋಸೆಫ್ ಸ್ಕೂಲಿಗೆ ಕರೆ ಮಾಡಿದ್ದಾರೆ. ನಂತರ ವಿದ್ಯಾರ್ಥಿನಿ ಗೌರಿಯ ಪೋಷಕರಾದ ಮಂಜುಳಾ ಎಂಬರಿಗೆ ಕರೆ ಮಾಡಿ ಕಳೆದುಕೊಂಡಿದ್ದ ಪರ್ಸ್ ಸಿಕ್ಕಿರುವ ಬಗ್ಗೆ ಪೊಲೀಸ್​ ನಾಗರಾಜಪ್ಪ ತಿಳಿಸಿದ್ದಾರೆ.
ವಿದ್ಯಾರ್ಥಿನಿಗೆ ದಾರಿ ಮಧ್ಯೆ ಸಿಕ್ಕಿದ ಪರ್ಸ್​​ನಲ್ಲಿ ಮೂರು ಹೆಲ್ತ್ ಕಾರ್ಡ್, ಎರಡು ಎಟಿಎಂ ಕಾರ್ಡ್ ಹಾಗೂ 2500 ರೂ. ಹಣವಿತ್ತೆಂದು ಪೊಲೀಸ್ ನಾಗರಾಜಪ್ಪ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 3 =
Remember me
