ರಾಯಚೂರು:ಪ್ರಾಣಿಗಳನ್ನು ಪ್ರೀತಿಸಿದರೆ ಅವು ಕೂಡ ತಿರುಗಿ ಅಷ್ಟೇ ನಿಷ್ಕಲ್ಮಶ ಪ್ರೀತಿಯನ್ನು ಮನುಷ್ಯರಿಗೆ ಕೊಡುತ್ತವೆ ಎಂಬುದು ಹಲವು ಬಾರಿ ಸಾಬೀತಾಗಿರುವ ಸಂಗತಿ.
ಈಗ ಮೇಕೆಯೊಂದು ತನ್ನ ಮಾಲೀಕನ ಮೇಲಿರುವ ಪ್ರೀತಿಯನ್ನು ತೋರಿಸಿದೆ. ಮೂಕಪ್ರಾಣಿಯ ನಡೆ ಜನರಲ್ಲಿ ಅಚ್ಚರಿ ಮೂಡಿಸಿದೆ.
ಮಾನ್ವಿ ತಾಲೂಕಿನ ಮರಕಲದಿನ್ನೆ ಗ್ರಾಮದ ಅಮರಪ್ಪ ಕುರುಬರು (48) ಜಮೀನಿನಲ್ಲಿಯೇ ಹೃದಯಾಘಾತದಿಂದ ಮೃತಪಟ್ಟಿದ್ದರು.ಅಂತ್ಯಕ್ರಿಯೆ ನಡೆಸಲು ಅವರ ಮೃತದೇಹವನ್ನು ಸ್ಮಶಾನಕ್ಕೆ ತೆಗೆದುಕೊಂಡು ಹೋಗಲಾಗಿತ್ತು.ಈ ವೇಳೆ ಅವರು ಸಾಕಿದ್ದ ಮೇಕೆ ಮೂಕವಾಗಿ ರೋದಿಸಿದೆ. ಅಮರಪ್ಪ ಅವರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಜನರೊಟ್ಟಿಗೆ ತಾನೂ ಸ್ಮಶಾನಕ್ಕೆ ಬಂದಿದೆ.
ಅಮರಪ್ಪ ಅವರ ಪ್ರೀತಿಯ ಮೇಕೆಯಾಗಿದ್ದ ಇದು ಅವರ ಅಂತ್ಯಕ್ರಿಯೆ ಮುಗಿಯವವರೆಗೂ ಸ್ಮಶಾನ ಬಿಟ್ಟು ಕದಲಿಲ್ಲ. ಇದನ್ನು ನೋಡಿದ ಅಲ್ಲಿನ ಜನರು ಅಚ್ಚರಿಯೊಂದಿಗೆ, ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. (ದಿಗ್ವಿಜಯ ನ್ಯೂಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − two =
Remember me
