ಬೆಂಗಳೂರು:ರಾಜ್ಯದಲ್ಲಿ ಕಾರ್ಯಾಚರಣೆ ಮಾಡುವ ಎಲ್ಲಾ ಟ್ಯಾಕ್ಸಿ, ಸಿಟಿ ಟ್ಯಾಕ್ಸಿ, ಇನ್ನಿತರ ಟ್ಯಾಕ್ಸಿ ಹಾಗೂ ಆ್ಯಗ್ರಿಗೇಟರ್ಸ್ ನಿಯಮಗಳಡಿ ಕಾರ್ಯಾಚರಿಸುತ್ತಿರುವ ವಿವಿಧ ಮಾದರಿಯ ಟ್ಯಾಕ್ಸಿಗಳ ಪ್ರಯಾಣ ದರ ಮತ್ತು ಸಾಗಣಿಕೆ ದರಗಳನ್ನು ಏಕರೂಪಗೊಳಿಸಿ ಸಾರಿಗೆ ಇಲಾಖೆ ಆದೇಶ ಹೊರಡಿಸಿದೆ.ಈ ಮೂಲಕ ವಿವಿಧ ಆ್ಯಗ್ರಿಗೇಟರ್ಸ್ ಬೇಡಿಕೆ ಆಧಾರದಲ್ಲಿ ಮನಸೋ ಇಚ್ಚೆ ದರ ವಿಧಿಸುವ ಮತ್ತು ಟ್ಯಾಕ್ಸಿಗಳ ಆಟಾಟೋಪಕ್ಕೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಮುಂದಾಗಿದೆ.ವಾಹನಗಳ ಮೌಲ್ಯ ಆಧಾರಿತವಾಗಿ ಹೊಸ ಏಕರೂಪ ದರ ಜಾರಿಗೆ ಬರಲಿದೆ. ೧೦ ಲಕ್ಷ ಕ್ಕಿಂತ ಕಡಿಮೆ ಮೌಲ್ಯದ ವಾಹನಗಳಿಗೆ ಕನಿಷ್ಠ ದರ ೧೦೦ ರೂ, ಆ ಬಳಿಕದ ಪ್ರತಿ ಕಿ.ಮೀಟರ್‌ಗೆ ೨೪ ರೂ., ೧೦ ಲಕ್ಷದಿಂದ ೧೫ ಲಕ್ಷದವರಿಗೆ ಕನಿಷ್ಠ ದರ ೧೧೫ ರೂ., ಆ ನಂತರದ ಪ್ರತಿ ಕಿ.ಮೀಟರ್‌ಗೆ ೨೮ ರೂ. ನಿಗದಿ ಮಾಡಲಾಗಿದೆ. ೧೫ ಲಕ್ಷ ರೂ.ಗಳಿಗಿಂತ ಹೆಚ್ಚು ಮೌಲ್ಯದ ವಾಹನಕ್ಕೆ ಮೊದಲ ೪ ಕಿಮೀಗೆ ೧೩೦ ರೂ. ಮತ್ತು ಆನಂತರದ ಪ್ರತಿ ಕಿಮೀಗೆ ೩೨ ರೂ. ನಿಗದಿ ಮಾಡಲಾಗಿದೆ.ವೈಯಕ್ತಿಕ ಲಗೇಜ್ಗಳಿಗೆ ೧೨೦ ಕೆಜಿ ವರೆಗೆ ಉಚಿತ ನಂತರ ೩೦ ಕೆ.ಜಿ ಗೆ ೭ ರೂ. ನಿಗದಿ ಮಾಡಲಾಗಿದೆ. ಕಾಯುವಿಕೆ ದರ ಮೊದಲು ೫ ನಿಮಿಷ ಉಚಿತ. ನಂತರ ಪ್ರತಿ ನಿಮಿಷಕ್ಕೆ ೧ ರೂ. ರಾತ್ರಿ ೧೨ ಗಂಟೆಯಿಂದ ಬೆಳಗ್ಗೆ ೬ ಗಂಟೆಯವರೆಗೆ ಸಂಚಾರ ಮಾಡುವ ಟ್ಯಾಕ್ಸಿ ಗಳ ಮೇಲೆ ೧೦ ರಷ್ಟು ಹೆಚ್ಚುವರಿ ಜಿಎಸ್ಟಿ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದ ವಸೂಲಿ ಮಾಡಬಹುದು. ಇನ್ಮೇಲೆ ಸಮಯದ ಆಧಾರದ ಮೇಲೆ ವಸೂಲಿ ಮಾಡುವಂತಿಲ್ಲ. ಸರ್ಕಾರ ನಿಗದಿಪಡಿಸಿರುವ ದರಗಳನ್ನು ಮಾತ್ರ ಪಡೆಯಬೇಕು. ಇಲ್ಲವಾದರೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಾರಿಗೆ ಇಲಾಖೆ ಎಚ್ಚರಿಕೆ ನೀಡಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − 3 =
Remember me
