ವಿಜಯವಾಣಿ ಸುದ್ದಿಜಾಲ ಬೆಂಗಳೂರು
ಆಸ್ತಿ ನೋಂದಣಿಗೆ ನೂತನವಾಗಿ ಅನುಷ್ಠಾನಕ್ಕೆ ತಂದಿರುವ ‘ಕಾವೇರಿ’ (2.0) ತಂತ್ರಾಂಶ ಬಳಕೆಯಲ್ಲಿ ಸಾರ್ವಜನಿಕರು ಸಮಸ್ಯೆ, ಗೊಂದಲ ಎದುರಿಸುತ್ತಿರುವುದು ನಿಜ. ತಕ್ಷಣ ಪರಿಹಾರ ಒದಗಿಸಲು ಕ್ರಮವಹಿಸಲಾಗಿದೆ ಎಂದು ವಿಧಾನ ಪರಿಷತ್​ನಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಬುಧವಾರ ಹೇಳಿದರು.
‘ಕಾವೇರಿ ಈಗ ಟೈಮ್​​ದೇ ವರಿ’ ಶೀರ್ಷಿಕೆಯಡಿ ಮೇ 24 ಹಾಗೂ ‘ಮೂರು ದಿನದಿಂದ ಸಿಕ್ತಿಲ್ಲ ಋಣಭಾರ ಪತ್ರ!’ ಶೀರ್ಷಿಕೆಯಡಿ ಮೇ 31ರ ಸಂಚಿಕೆಗಳಲ್ಲಿ ವಿಜಯವಾಣಿ ಪ್ರಕಟಿಸಿದ 2 ವರದಿಗಳನ್ನು ಬಿಜೆಪಿಯ ಎಂ.ಚಿದಾನಂದಗೌಡ ಏಕಕಾಲಕ್ಕೆ ಪ್ರಸ್ತಾಪಿಸಿ ಸರ್ಕಾರದ ಗಮನಸೆಳೆದರು.
ಸಚಿವ ಕೃಷ್ಣಬೈರೇಗೌಡ ಸುದೀರ್ಘ ಉತ್ತರ ನೀಡಿ, ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಜನದಟ್ಟಣೆ, ಪ್ರಭಾವಿಗಳಿಗೆ ಮಣೆ ಇತ್ಯಾದಿ ಸಮಸ್ಯೆಗಳಿದ್ದವು. ಸಾರ್ವಜನಿಕರಿಂದ ಸಾಕಷ್ಟು ದೂರು, ಆರೋಪಗಳು ಸಲ್ಲಿಕೆಯಾಗಿದ್ದವು. ಆಸ್ತಿ ನೋಂದಣಿ ವ್ಯವಸ್ಥೆಯಲ್ಲಿ ಪಾರದರ್ಶಕತೆ, ದಕ್ಷತೆ, ಶಿಸ್ತು ಮತ್ತು ಸಮಯಪ್ರಜ್ಞೆ ಮುಖ್ಯವಾಗಿ ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ಜನದಟ್ಟಣೆ ತಪ್ಪಿಸಲು ಸುಧಾರಣಾ ಕ್ರಮಕೈಗೊಳ್ಳಲಾಗಿದೆ. ಕಾವೇರಿ 2.0 ಉನ್ನತೀಕರಿಸಿದ ತಂತ್ರಾಂಶವಾಗಿದೆ. ಬದಲಾವಣೆ ತಂದಾಗ ಆರಂಭಿಕ ಹಂತದಲ್ಲಿ ಸ್ವಲ್ಪಮಟ್ಟಿಗೆ ಅಡೆತಡೆ ಸಹಜ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಲು ಪರಿಹಾರ ಕ್ರಮ ಕೈಗೊಂಡಿದ್ದು, ಕ್ರಮೇಣ ನಿವಾರಣೆಯಾಗಲಿದೆ ಎಂದರು.
ಸಹಾಯವಾಣಿ:ನೂತನ ತಂತ್ರಾಂಶದಲ್ಲಿ ಸಾರ್ವಜನಿಕರು ಆನ್​ಲೈನ್ ಮೂಲಕ ಅರ್ಜಿ ಸಲ್ಲಿಸುವಾಗ ಎದುರಿಸುವ ಸಮಸ್ಯೆ, ಗೊಂದಲಗಳನ್ನು ವ್ಯವಸ್ಥಿತವಾಗಿ ಪರಿಹರಿಸಲು ಸಕಾಲ ಕರೆ ಕೇಂದ್ರದ ಸಹಭಾಗಿತ್ವದಲ್ಲಿ ಇಲಾಖೆಯ ಸಹಾಯವಾಣಿ (080 68265316) ಪ್ರಾರಂಭಿಸಲಾಗಿದೆ.

ಕಚೇರಿ ಅಧಿಕಾರಿ, ಸಿಬ್ಬಂದಿಗೆ ಟಿಕೇಟಿಂಗ್ ಟೂಲ್ ಒದಗಿಸಲಾಗಿದೆ. ನೋಂದಣಿ ಸಮಯದಲ್ಲಿ ತಾಂತ್ರಿಕ ಅಡ ಚಣೆ ಬಗೆಹರಿಸಲು ಸರ್ವೀಸ್ ಡೆಸ್ಕ್, ನೂತನ ತಂತ್ರಾಂಶದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ, ಕಾವೇರಿ ಯೋಜನಾ ಉಸ್ತು ವಾರಿ ಘಟಕ ಸ್ಥಾಪನೆ ಮತ್ತಿತರ ಕ್ರಮಗಳಾಗಿವೆ ಎಂದರು.
ಮರುಪಾವತಿಗೆ ಅವಕಾಶ:ಅನಿರೀಕ್ಷಿತ ಕಾರಣಗಳಿಂದಾಗಿ ದಸ್ತಾವೇಜು ನೋಂದಾಯಿಸದಿದ್ದಲ್ಲಿ, ಅಂತಹ ಅರ್ಜಿಗಳಿಗೆ ಶುಲ್ಕ ಪಾವತಿಸದಿದ್ದಲ್ಲಿ, ದಸ್ತಾವೇಜನ್ನು ನೋಂದಣಿಯಿಂದ ಹಿಂಪಡೆದು ಉಪನೋಂದಣಾಧಿಕಾರಿಗೆ ಅರ್ಜಿ ಸಲ್ಲಿಸಿ ಶುಲ್ಕಗಳ ಮರು ಪಾವತಿ ಪಡೆಯಬಹುದಾಗಿದೆ ಎಂದು ಸ್ಪಷ್ಟಪಡಿಸಿ ದರು. ಋಣಭಾರ ಪ್ರಮಾಣಪತ್ರ (ಇ.ಸಿ.)ಕ್ಕೆ ಸಂಬಂಧಿಸಿದಂತೆ ದತ್ತಾಂಶ ನಿಖರ ದಾಖಲೀಕರಣದಲ್ಲಿ ವ್ಯತ್ಯಾಸದ ಸಮಸ್ಯೆ ಪರಿಹರಿಸಲಾಗಿದೆ. 2023ರ ಜೂ.1ರಿಂದ 2024ರ ಜು.15ರವರೆಗೆ ಇ.ಸಿ.ಬಯಸಿ 35,69,159 ಅರ್ಜಿಗಳು ಸಲ್ಲಿಕೆಯಾಗಿದ್ದು, 35,64,863 ಇ.ಸಿ.ಗಳನ್ನು ವಿತರಣೆ ಮಾಡಲಾಗಿದೆ. ಉಳಿದ 4,296 ಅರ್ಜಿ ಗಳಿಗೆ ಇ.ಸಿ. ವಿತರಣೆಯಾಗಲಿದ್ದು, ಆನ್​ಲೈನ್​ನಲ್ಲೇ ಇ.ಸಿ.ಪಡೆಯುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಹೇಳಿದರು.
ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ಅಕ್ರಮ: ಬೆಂಗಳೂರು: ಹಿಂದಿನ ಸರ್ಕಾರದ ಅವಧಿಯಲ್ಲಿ ಬೆಳೆ ನಷ್ಟ ಪರಿಹಾರ ವಿತರಣೆಯಲ್ಲಿ ವ್ಯಾಪಕ ಅಕ್ರಮಗಳಾಗಿವೆ. ‘ಸಿಕ್ಕವರಿಗೆ ಸೀರುಂಡೆ’ ರೀತಿಯಲ್ಲಿ ಹಂಚಿಕೆಯಾಗಿದೆ ಎಂದು ವಿಧಾನ ಪರಿಷತ್​ನಲ್ಲಿ ಕಂದಾಯ ಸಚಿವ ಕೃಷ್ಣಬೈರೇಗೌಡ ಕಳವಳ ವ್ಯಕ್ತಪಡಿಸಿದರು.
ಶೂನ್ಯವೇಳೆ ಕಾಂಗ್ರೆಸ್​ನ ಯು.ಬಿ.ವೆಂಕಟೇಶ್ ವಿಷಯ ಪ್ರಸ್ತಾಪಿಸಿ ಗಮನಸೆಳೆದಾಗ ‘ಬರವೆಂದರೆ ಎಲ್ಲರಿಗೂ ಇಷ್ಟ’ಎಂದು ಪತ್ರಕರ್ತ ಸಾಯಿನಾಥ್ ಹೇಳಿದಂತಿದೆ ಹಿಂದಿನ ಬೆಳೆ ನಷ್ಟ ಪರಿಹಾರ ಪಾವತಿ ವೈಖರಿ ಎಂದರು. ಸದ್ಯಕ್ಕೆ ಚಿಕ್ಕಮಗಳೂರು, ಹಾವೇರಿ, ಚಾಮರಾಜನಗರ ಸೇರಿ ಹಲವೆಡೆ ದಾಖಲೆಗಳ ಲಭ್ಯತೆ ಪ್ರಕಾರ ತನಿಖೆಗೆ ಆದೇಶಿಸಿರುವೆ. ಈ ಅವ್ಯವಹಾರದಲ್ಲಿ 26 ಅಧಿಕಾರಿಗಳು ಭಾಗಿಯಾಗಿದ್ದು, ಅನೇಕ ರೈತರ ತಪು್ಪಗಳಿರುವುದನ್ನು ಅಲ್ಲಗಳೆಯಲಾಗದು ಎಂದರು.
ಎರಡು ಪಟ್ಟು ರೈತರಿಗೆ ಪರಿಹಾರ:ಪ್ರಶ್ನೋತ್ತರ ವೇಳೆ ಛಲವಾದಿ ನಾರಾಯಣಸ್ವಾಮಿ ಪರವಾಗಿ ಕೇಶವ ಪ್ರಸಾದ್ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ 38,78,525 ರೈತರಿಗೆ ಬೆಳೆ ಹಾನಿ ಪರಿಹಾರ ನೇರ ಬ್ಯಾಂಕ್ ಖಾತೆಗೆ ಪಾವತಿಸಿದ್ದು, 3,535.30 ಕೋಟಿ ರೂ ವೆಚ್ಚವಾಗಿದೆ. ಹಿಂದಿನ ಸರ್ಕಾರಗಳಿಗೆ ಹೋಲಿಸಿದರೆ ಎರಡುಪಟ್ಟು ದಾಖಲೆಯ ಸಂಖ್ಯೆಯಲ್ಲಿ ರೈತರಿಗೆ ಬೆಳೆ ನಷ್ಟ ಪರಿಹಾರ ವಿತರಿಸಿದ್ದು, ನೀರಾವರಿ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ಕೊನೇ ಭಾಗದ ಅರ್ಹ ರೈತರೂ ಪರಿಹಾರ ಪಡೆಯಲಿದ್ದಾರೆ ಎಂದರು.
ಜೀವನೋಪಾಯ ನಷ್ಟ ಪರಿಹಾರ ಭತ್ಯೆ ರೂಪದಲ್ಲಿ 17.80 ಲಕ್ಷ ರೈತ ಕುಟುಂಬಗಳಿಗೆ ನೆರವು ನೀಡಲು 531 ಕೋಟಿ ರೂ. ವ್ಯಯಿಸಲಾಗಿದೆ. ಕೇಂದ್ರ ಸರ್ಕಾರದ ಜತೆಗೆ ರಾಜ್ಯ ಸರ್ಕಾರವೂ ತನ್ನ ಬೊಕ್ಕಸದಿಂದ ಬರ ಪರಿಹಾರ ಕಾಮಗಾರಿಗೆ 1,296 ಕೋಟಿ ರೂ. ಖರ್ಚು ಮಾಡಿದೆ ಎಂದರು.
78.14 ಲಕ್ಷ ಜನರಿಗೆ ಮಾಸಾಶನ:ಸಾಮಾಜಿಕ ಭದ್ರತಾ ಯೋಜನೆಯಡಿ 78,14,513 ಜನರಿಗೆ ವಿವಿಧ ಮಾಸಾಶನ ನೀಡಲಾಗುತ್ತಿದ್ದು, ಇದಕ್ಕಾಗಿ ವಾರ್ಷಿಕ 10,500 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ಭರಿಸುತ್ತಿದೆ ಎಂದು ಕೃಷ್ಣಬೈರೇಗೌಡ ತಿಳಿಸಿದರು. ಬಿಜೆಪಿಯ ವೈ.ಎಂ.ಸತೀಶ್ ಅಂಗವಿಕಲರು, ಮನೋವೈಕಲ್ಯ ಉಳ್ಳವರ ಮಾಸಾಶನ ಹೆಚ್ಚಿಸಲು ಕೋರಿದಾಗ ಪ್ರತಿಕ್ರಿಯಿಸಿದ ಅವರು, ಮೂರು ವರ್ಷಗಳ ಹಿಂದಷ್ಟೇ ಮಾಸಾಶನಗಳ ಪರಿಷ್ಕರಣೆಯಾಗಿದೆ. ಕಾಲ ಕಾಲಕ್ಕೆ ಪರಿಷ್ಕರಿಸಬೇಕು ಎನ್ನುವುದು ನಿಜ. ಆದರೆ ಸಾಮಾಜಿಕ ಭದ್ರತಾ ಪಿಂಚಣಿ ಫಲಾನುಭವಿಗಳ ಸಂಖ್ಯೆ, ವೆಚ್ಚ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಯೇ ಹೆಚ್ಚು. ಕೇಂದ್ರ ಸರ್ಕಾರ 13 ಲಕ್ಷ ಜನರಿಗೆ 200 ರಿಂದ 300 ರೂ. ನೀಡುತ್ತಿದ್ದು, 2012ರ ಬಳಿಕ ಪರಿಷ್ಕರಿಸಿಲ್ಲ. ಪಿಂಚಣಿ ಮೊತ್ತ ಪರಿಷ್ಕರಿಸಲು ಕೋರಿದ್ದು, ಅನುದಾನ ಬರುವ ನಿರೀಕ್ಷೆಯಿದೆ ಎಂದು ಕೃಷ್ಣಬೈರೇಗೌಡ ಹೇಳಿದರು.
ಬೆಳೆ ವಿಮೆ ಸಮಸ್ಯೆ ಇತ್ಯರ್ಥ:ರೈತರಿಂದ ಬೆಳೆ ವಿಮಾ ಕಂಪನಿಗಳು ವಿಮಾ ಕಂತು ಕಟ್ಟಿಸಿಕೊಂಡು ಪರಿಹಾರ ನೀಡಲು ನಿರಾಕರಿಸುತ್ತಿದ್ದವು. ‘ಬೆಳೆ ನಷ್ಟ ಪರಿಹಾರ ವಿತರಿಸಿದ ರೈತರಿಗೆ ವಿಮೆ ಪರಿಹಾರವಿಲ್ಲ’ ನಿಬಂಧನೆ ದುರ್ಲಾಭ ಪಡೆಯಲು ಅವಕಾಶವಾಗಿತ್ತು. ಈ ದೋಷವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತಂದಾಗ ಗಲಿಬಿಲಿಗೆ ಒಳಗಾದರು, ತಕ್ಷಣ ಈ ದೋಷವನ್ನು ತೆಗೆದು ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಲೈಂಗಿಕ ದೌರ್ಜನ್ಯ ಪ್ರಕರಣ: ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:14 + 7 =
Remember me
