ಬೆಂಗಳೂರು:ಕರೊನಾ ಬಹುತೇಕ ಜನರ ಜೀವನವನ್ನೇ ಅಸ್ತವ್ಯಸ್ಥ ಮಾಡಿದೆ. ಸಾವಿರಾರು ಜನರು ಸೋಂಕಿಗೆ ಬಲಿಯಾಗಿದ್ದು, ಅವರು ಮಾಡಿದ್ದ ಸಾಲ ಕುಟುಂಬದವರೇ ಕಟ್ಟಿ ತೀರಿಸುವಂತಾಗಿದೆ. ಅದರಲ್ಲೂ ಸಾಲ ಪಡೆದು ಕೃಷಿ ಮಾಡುತ್ತಿದ್ದ ಅನೇಕ ಕೃಷಿಕರು ಸೋಂಕಿಗೆ ಬಲಿಯಾಗಿದ್ದು, ಅವರ ಕುಟುಂಬಕ್ಕೆ ಸಾಲಕ ಹೊರೆ ಹೆಚ್ಚಾಗಿದೆ. ಆ ಹಿನ್ನೆಲಯಲ್ಲಿ ರಾಜ್ಯದಲ್ಲಿ ಕರೊನಾದಿಂದ ಸಾವನ್ನಪ್ಪಿದ 10 ಸಾವಿರಕ್ಕೂ ಅಧಿಕ ಕೃಷಿಕರ ಸಾಲವನ್ನು ಮನ್ನಾ ಮಾಡಲು ಸರ್ಕಾರ ಚಿಂತಿಸಿದೆ.
ಅಪೆಕ್ಸ್, ಡಿಸಿಸಿ ಬ್ಯಾಂಕ್ ಹಾಗೂ ಪ್ಯಾಕ್ಸ್ ಗಳಲ್ಲಿ ಸಾಲ ಪಡೆದಿದ್ದು, ಕರೊನಾಕ್ಕೆ ಬಲಿಯಾದ ಕೃಷಿಕರನ್ನು ಸರ್ಕಾರ ಗುರುತಿಸಿದೆ. ಒಟ್ಟು 10,187 ರೈತರ 79.47 ಕೋಟಿ ರೂಪಾಯಿ ಸಾಲ ಮನ್ನಾ ಮಅಡುವ ಕುರಿತಾಗಿ ಮುಖ್ಯಮಂತ್ರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಅಪೆಕ್ಸ್ ಬ್ಯಾಂಕ್ ಆಡಳಿತ ಮಂಡಳಿ ಜತೆ ಸಭೆ ಸೇರಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದ್ದಾರೆ.
2020-21ನೇ ಸಾಲಿನಲ್ಲಿ 24.50 ಲಕ್ಷ ರೈತರಿಗೆ 15,300 ಕೋಟಿ ರೂಪಾಯಿ ಅಲ್ಪಾವಧಿ, ಮಧ್ಯಮಾವಧಿ ಬೆಳೆ ಸಾಲ ನೀಡುವ ಗುರಿಯನ್ನು ಹೊಂದಲಾಗಿತ್ತು. ಈ ನಿಟ್ಟಿನಲ್ಲಿ ಗುರಿ ಮೀರಿ ಸಾಧನೆ ಮಾಡಿದ್ದು, 25.67 ಲಕ್ಷ ರೈತರಿಗೆ 17,108 ಕೋಟಿ ರೂಪಾಯಿ ಸಾಲ ನೀಡುವ ಮೂಲಕ ಶೇ.114 ಗುರಿ ಸಾಧಿಸಲಾಗಿದೆ. ಅದರಲ್ಲಿ ಈಗ 10,187 ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಲಾಗಿದೆ.
ಯಾವ ಜಿಲ್ಲೆಯ ಎಷ್ಟು ರೈತರ ಸಾಲ ಮನ್ನಾ ಆಗಲಿದೆ ಎನ್ನುವ ಮಾಹಿತಿ ಈ ಕೆಳಗಿನಂತಿದೆ.1. ಬಾಗಲಕೋಟೆ – 672 ರೈತರ 5,42,26,261 ರೂಪಾಯಿ ಸಾಲ2. ಬೆಳಗಾವಿ – 3334 ರೈತರ 23,84,51,700 ರೂಪಾಯಿ ಸಾಲ3. ಬಳ್ಳಾರಿ – 357 ರೈತರ 3,65,98,411 ರೂಪಾಯಿ ಸಾಲ4. ಬೆಂಗಳೂರು – 381 ರೈತರ 2,36,72,500 ರೂಪಾಯಿ ಸಾಲ5. ಬೀದರ್ – 824 ರೈತರ 5,47,68,271 ರೂಪಾಯಿ ಸಾಲ6. ಚಿಕ್ಕಮಗಳೂರು – 113 ರೈತರ 2,03,86,020 ರೂಪಾಯಿ ಸಾಲ7. ಚಿತ್ರದುರ್ಗ – 156 ರೈತರ 1,63,71,000 ರುಪಾಯಿ ಸಾಲ8. ದಾವಣಗೆರೆ – 402 ರೈತರ 2,66,22,071 ರುಪಾಯಿ ಸಾಲ9. ಹಾಸನ – 454 ರೈತರ 2,86,42,000 ರುಪಾಯಿ ಸಾಲ10. ಕಲಬುರಗಿ – 224 ರೈತರ 87,38,776 ರೂಪಾಯಿ ಸಾಲ11. ಕೆನರಾ ಶಿರಸಿ (ಉತ್ತರ ಕನ್ನಡ)- 186 ರೈತರ 1,70,98,364 ರೂಪಾಯಿ ಸಾಲ12. ಕೆಸಿಸಿ ಬ್ಯಾಂಕ್ ಧಾರವಾಡ – 376 ರೈತರ 2,07,10,455 ರೂಪಾಯಿ ಸಾಲ13. ಕೊಡಗು – 113 ರೈತರ 1,82,99,040 ರೂಪಾಯಿ ಸಾಲ14. ಕೋಲಾರ – 147 ರೈತರ 2,54,09,639 ರೂಪಾಯಿ ಸಾಲ15. ಮಂಡ್ಯ – 410 ರೈತರ 2,73,28,268 ರೂಪಾಯಿ ಸಾಲ16. ಮೈಸೂರು – 281 ರೈತರ 3,13,99,000 ರೂಪಾಯಿ ಸಾಲ17. ರಾಯಚೂರು- 237 ರೈತರ 1,92,03,700 ರೂಪಾಯಿ ಸಾಲ18. ಶಿವಮೊಗ್ಗ – 307 ರೈತರ 3,27,01,000 ರೂಪಾಯಿ ಸಾಲ19. ದಕ್ಷಿಣ ಕನ್ನಡ – 152 ರೈತರ 2,40,63,450 ರೂಪಾಯಿ ಸಾಲ20. ತುಮಕೂರು – 307 ರೈತರ 1,87,22,000 ರೂಪಾಯಿ ಸಾಲ21. ವಿಜಯಪುರ – 754 ರೈತರ 5,13,40,000 ರೂಪಾಯಿ ಸಾಲ
ರಸ್ತೆ ಬಳಿ ಚಾಕಲೇಟ್ ರಾಶಿ: ಕ್ವಿಂಟಾಲ್​ಗಟ್ಟಲೆ ಚಾಕಲೇಟ್​ನ್ನು ಎಸೆದು ಹೋದ ಡೀಲರ್!

ಆಸ್ಟ್ರೇಲಿಯಾದ ಮಾಸ್ಟರ್​ ಚೆಫ್ ಸ್ಪರ್ಧೆಯಲ್ಲಿ ಭಾರತ ಮೂಲದವನ ಜಯ!

ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − 16 =
Remember me
