ಬೆಂಗಳೂರು:ರೈತರ ಜಮೀನಿನಲ್ಲಿ ಶ್ರೀಗಂಧ ಬೆಳೆಯುವುದನ್ನು ಪ್ರೋತ್ಸಾಹಿಸಲು ಹೊಸ ಶ್ರೀಗಂಧ ನೀತಿ &2022 ಅನ್ನು ಜಾರಿಗೆ ತರಲು ಸಂಪುಟ ಒಪ್ಪಿಗೆ ನೀಡಿದೆ. ರೈತರು ಶ್ರೀಗಂಧವನ್ನು ಬೆಳೆದು ಆರ್ಥಿಕವಾಗಿ ಸಬಲರಾಗಬೇಕು ಎನ್ನುವ ನಿಟ್ಟಿನಲ್ಲಿ ಈ ನೀತಿ ತರಲಾಗಿದೆ ಎಂದು ಸಚಿವ ಡಾ.ಕೆ.ಸುಧಾಕರ್​, ಸಂಪುಟದ ತೀರ್ಮಾನಗಳನ್ನು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶ್ರೀಗಂಧವನ್ನು ಬೆಳೆಯುವುದಷ್ಟೇ ಅಲ್ಲ, ಮಾರಾಟ ಮಾಡಲು ಈ ಕಾಯ್ದೆಯಲ್ಲಿ ಅವಕಾಶ ಮಾಡಿಕೊಡಲಾಗುವುದು. ಅಲ್ಲದೆ, ಶ್ರೀಗಂಧ ರಕ್ಷಣೆ ಮಾಡಲು ಕೂಡ ವ್ಯವಸ್ಥೆ ಮಾಡಲಾಗುವುದು. ಮುಕ್ತ ಮಾರುಕಟ್ಟೆಗೂ ಅವಕಾಶವಿದೆ ಎಂದು ವಿವರಿಸಿದರು.
ಸರ್ಕಾರದ ಸ್ವಾಮ್ಯದಲ್ಲಿರುವ ಸಾಬೂನು ಕಾರ್ಖಾನೆಗೂ ಶ್ರೀಗಂಧ ಬೇಕಾಗಿದೆ. ಹಾಗೆಯೇ, ಹಲವು ಉದ್ದೇಶಗಳಿಗೆ ಶ್ರೀಗಂಧದ ಬೇಡಿಕೆ ಇದ್ದು, ಇದಕ್ಕೆ ಅರಣ್ಯ ಜೀವಿ ಪರಿಸರ ಇಲಾಖೆಯಿಂದ ನೀತಿಯೊಂದನ್ನು ರೂಪಿಸಲಾಗಿದೆ. ಶ್ರೀಗಂಧ ಕಳವು ತಡೆಯಲು ತಂತ್ರಜ್ಞಾನ ಬಳಸಿಕೊಂಡು ಮರಗಳಿಗೆ ಚಿಪ್​ ಅಳವಡಿಕೆ ಮಾಡಲಾಗುವುದು ಎಂದರು.
ಮೀಸಲು ಸಂರಕ್ಷಣಾ ಪ್ರದೇಶ ಘೋಷಣೆ:ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಪ, ಕರಡಿಧಾಮ ಸೇರಿ ಹಲವು ಪ್ರದೇಶಗಳನ್ನು ಮೀಸಲು ಪ್ರದೇಶ ಎಂದು ಘೋಷಣೆ ಮಾಡಬೇಕು ಎನ್ನುವ ಅರಣ್ಯ ಇಲಾಖೆಯ ಪ್ರಸ್ತಾವನೆಗಳಿಗೆ ಸಚಿವ ಸಂಪುಟ ಅಸ್ತು ಎಂದಿದೆ. ಉತ್ತಾರೆಗುಡ್ಡ ವನ್ಯಜಿವಿಧಾಮ, ಬಂಕಾಪುರ ವನ್ಯಜಿವಿಧಾಮ, ಅರಸೀಕೆರೆ ಕರಡಿ ಧಾಮ, ಹಿರೆಸೂಲೆಕೆರೆ ಕರಡಿ ಸಂರಕ್ಷಣಾ ಮೀಸಲು ಪ್ರದೇಶ, ಚಿಕ್ಕ ಸಂಗಮ ಪ ಸಂರಕ್ಷಣಾ ಮೀಸಲು ಪ್ರದೇಶ, ಮುಂಡಿಗೆ ಕೆರೆ ಮತ್ತು ಪ ಸಂರಕ್ಷಣಾ ಮೀಸಲು ಪ್ರದೇಶ, ಬೋನಾಳ ಪ ಸಂರಕ್ಷಣಾ ಪ್ರದೇಶಗಳನ್ನು ಹೊಸದಾಗಿ ಮೀಸಲು ಪ್ರದೇಶ ಎಂದು ಘೋಷಣೆ ಮಾಡಲಾಗಿದೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನವನ್ನು ಡಿ.19ರಿಂದ 30ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಕುರಿತು ರ್ನಿಣಯ ಕೈಗೊಳ್ಳಲಾಗಿದೆ. ಡಿ.12ರಿಂದ ನಡೆಸಲು ಉದ್ದೇಶಿಸಿದ್ದ ಅಧಿವೇಶನವನ್ನು ಒಂದು ವಾರ ಮುಂದೂಡಲು ತೀರ್ಮಾನಿಸಿ, ಡಿ.19ಕ್ಕೆ ನಿಗದಿಪಡಿಸಲಾಗಿದೆ.
ಸಂಪುಟ ಸಭೆ ಮುಖ್ಯಾಂಶಗಳು
* ತುಮಕೂರಿನಲ್ಲಿ 56 ಕೋಟಿ ರೂ. ವೆಚ್ಚದಲ್ಲಿ 100 ಹಾಸಿಗೆ ತೀವ್ರ ನಿಗಾ ಟಕ ನಿರ್ಮಾಣಕ್ಕೆ ಒಪ್ಪಿಗೆ.* ಬೆಂಗಳೂರಿನ ಮಲ್ಲೇಶ್ವರದ ಕೆ.ಸಿ.ಜನರಲ್​ ಆಸ್ಪತ್ರೆ ಆವರಣದಲ್ಲಿ 35 ಕೋಟಿ ರೂ. ವೆಚ್ಚದಲ್ಲಿ ಟ್ರಾಮಾ ಕೇರ್​ ಸೆಂಟರ್​ ನಿರ್ಮಿಸಲು ಅನುಮೋದನೆ.* ಧಾರವಾಡ&ಹಳಿಯಾಳ ರಸ್ತೆಯಲ್ಲಿ ರೈಲ್ವೆ ಕ್ರಾಸಿಂಗ್​ ಗೇಟ್​ ಸಂಖ್ಯೆ 300ರ ಬದಲಿಗೆ, ರಸ್ತೆ ಕೆಳಸೇತುವೆಯನ್ನು 41.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲು ಸಮ್ಮತಿ.* ಕೋಲಾರ, ಚಿಕ್ಕಮಗಳೂರು, ರಾಯಚೂರು, ದಾವಣಗೆರೆ, ಬಾಗಲಕೋಟೆ ಜಿಲ್ಲೆಯಲ್ಲಿ 158 ಕೋಟಿ ರೂ. ವೆಚ್ಚದಲ್ಲಿ ನೂತನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಕಟ್ಟಡ ನಿರ್ಮಿಸಲು ತೀರ್ಮಾನ.* ಬೆಳಗಾವಿ ಹಾಗೂ ದಾವಣಗೆರೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗಳು ಮೇಲ್ದರ್ಜೆಗೆ ಅನುಮೋದನೆ.* ಕಾರ್ಮಿಕ ರಾಜ್ಯ ವಿಮಾ ಯೋಜನೆಯ ಆಸ್ಪತ್ರೆಗಳು/ಚಿಕಿತ್ಸಾಲಯಗಳು/ರೋಗ ಪತ್ತೆ ಹಚ್ಚುವ ಕೇಂದ್ರಗಳಿಗೆ 44 ಕೋಟಿ ರೂ. ವೆಚ್ಚದಲ್ಲಿ ವೈದ್ಯಕಿಯ ಉಪಕರಣ ಖರೀದಿಸಲು ಒಪ್ಪಿಗೆ.* ನಂಜನಗೂಡಿನ ಶ್ರೀಕಂಠೇಶ್ವರಸ್ವಾಮಿ ದೇವಾಲಯದಲ್ಲಿ 16.52 ಕೋಟಿ ರೂ. ಅಂದಾಜು ವೆಚ್ಚದಲ್ಲಿ ವಿಐಪಿ ಅತಿಥಿ ಗೃಹ, ಭಕ್ತರ ಕೊಠಡಿ ಮತ್ತು ಡಾರ್ಮೆಟ್ರಿ ಕಟ್ಟಡ ನಿರ್ಮಿಸಲು ಅನುಮೋದನೆ.* ಜಲ ಜೀವನ್​ ಮಿಷನ್​ ಯೋಜನೆಯಡಿ ಬಳ್ಳಾರಿ ಜಿಲ್ಲೆಯ ನೆಲ್ಲೂಡಿ ಹಾಗೂ ಇತರ ಆರು ಜನವಸತಿ ಪ್ರದೇಶಗಳ ಕುಡಿಯುವ ನೀರು ಸರಬರಾಜು ಪುನ@ಶ್ಚೇತನಗೊಳಿಸುವ ಕಾಮಗಾರಿಯನ್ನು <11.26 ಕೋಟಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲು ಒಪ್ಪಿಗೆ.* 2022&23ನೇ ಸಾಲಿಗೆ ಅನ್ವಯಿಸುವಂತೆ ಪ್ರಾಥಮಿಕಆರೋಗ್ಯ ಕೇಂದ್ರ, ನಗರ ಕೇಂದ್ರಗಳಿಗೆ 154.63 ಕೋಟಿ ರೂ. ವೆಚ್ಚದಲ್ಲಿ ರೋಗ ಪತ್ತೆ ಉಪಕರಣ, ರಾಸಾಯನಿಕ ರೋಗ ಪತ್ತೆ ಉಪಕರಣ ಖರೀದಿಸಲು ಸಮ್ಮತಿ.* ಗೌರಿಬಿದನೂರಿನಲ್ಲಿ 12 ಕೋಟಿ ರೂ. ವೆಚ್ಚದಲ್ಲಿ ನೂತನ ಕೋರ್ಟ್​ ಕಟ್ಟಡ ನಿರ್ಮಿಸಲು ಒಪ್ಪಿಗೆ.* ಬಾಗಲಕೋಟೆ ಹಾಗೂ ರಾಯಚೂರು ಬಾಚಿ ರಾಜ್ಯ ಹೆಚ್ದಾರಿಯ 20 ನವೀಕರಣ ಕಾಮಗಾರಿಗಳ ಒಟ್ಟು <12.44 ಕೋಟಿ ಪರಿಷತ ಅಂದಾಜಿಗೆ ಒಪ್ಪಿಗೆ.* ಆಯುಷ್ಮಾನ್​ ಭಾರತ ಆರೋಗ್ಯ ಮೂಲಸೌಕರ್ಯ ಅಭಿಯಾನ ಯೋಜನೆಯಡಿ ಕೋಲಾರ ಜಿಲ್ಲಾ ಆಸ್ಪತ್ರೆ, ಕಾರವಾರ ವೈದ್ಯಕಿಯ ವಿಜ್ಞಾನ ಸಂಸ್ಥೆ, ಚಾಮರಾಜನಗರ ವೈದ್ಯಕಿಯ ವಿಜ್ಞಾನ ಸಂಸ್ಥೆಗಳ ಆವರಣದಲ್ಲಿ 3 ತೀವ್ರ ನಿಗಾ ಟಕ ನಿರ್ಮಾಣಕ್ಕೆ 49.89 ಕೋಟಿ ರೂ. ಅಂದಾಜಿಗೆ ಒಪ್ಪಿಗೆ.* ಬೆಂಗಳೂರಿನ ಉತ್ತರಹಳ್ಳಿ ಅಂಜನಾಪುರದಲ್ಲಿರುವ ಸಾರಿಗೆ ಇಲಾಖೆ ಸ್ವಂತ ಕಟ್ಟಡ ನಿರ್ಮಾಣ ಕಾಮಗಾರಿ 11.25 ಕೋಟಿ ರೂ.ಗಳ ಪರಿಷತ ಅಂದಾಜಿಗೆ ಅನುಮತಿ.* ಯಲ್ಲಾಪುರ ಪ.ಪಂ. ವ್ಯಾಪ್ತಿಗೆ ಸಹಸ್ರಹಳ್ಳಿಯ ಕಂದಾಯ ಗ್ರಾಮ ಪ್ರದೇಶಗಳನ್ನು ಸೇರ್ಪಡೆ.* ಬೆಂಗಳೂರು ನಗರ ಜಿಲ್ಲೆ ದಾಸನಪುರ ಹೋಬಳಿ ಗಂಗೊಂಡನಹಳ್ಳಿಯಲ್ಲಿ 15 ಗುಂಟೆ ಜಮೀನನ್ನು ನಮ್ಮನೆ ಸುಮ್ಮನೆ ನಿರಾಶ್ರಿತರ ಕೇಂದ್ರಕ್ಕೆ ಕೊಡಲು ಅನುಮತಿ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 9 =
Remember me
