ಬೆಂಗಳೂರು:ಕೃಷಿ ಮತ್ತು ಉದ್ಯಮ ಎರಡೂ ರಾಜ್ಯ ಸರ್ಕಾರಕ್ಕೆ ಮುಖ್ಯವಾಗಿದೆ. ಆದರೆ, ಭೂಸುಧಾರಣೆಗಳ ಕಾಯ್ದೆ 1961ರ ಅಧಿನಿಯಮ 79ಎ ಮತ್ತು ಬಿ ಪ್ರಕರಣದ ಉಪಬಂಧಗಳ ಪೈಕಿ ಒಂದು ಕುಟುಂಬಕ್ಕೆ 54 ಎಕರೆ ಮಿತಿ ಬಿಟ್ಟು ಕೆಲವು ಮಾರಕ ಅಂಶಗಳಿಗೆ ತಿದ್ದುಪಡಿ ತರುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ಕಂದಾಯ ಸಚಿವ ಆರ್.ಅಶೋಕ್ ಭರವಸೆ ನೀಡಿದರು.
ಮೇಲ್ಮನೆಯಲ್ಲಿ ಭೂಸುಧಾರಣೆಗಳ (ತಿದ್ದುಪಡಿ) ವಿಧೇಯಕ- 2020 ವಿಧೇಯಕ ಅಂಗೀಕಾರದ ಮೇಲೆ ನಡೆದ ಚರ್ಚೆಗೆ ಸಚಿವರು ಉತ್ತರಿಸಿ, 79ಎ ಮತ್ತು ಬಿ ಅಡಿ 1.83 ಲಕ್ಷ ಎಕರೆ ಒಳಗೊಂಡ 81,000 ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಕೇವಲ 48 ಎಕರೆ ವಾಪಸ್ ಪಡೆದಿದ್ದು, ಇದೂ ವ್ಯಾಜ್ಯದಲ್ಲಿ ಸಿಲುಕಿಕೊಂಡಿದೆ. ಅಧಿಕಾರಿಗಳು ಕಿರುಕುಳ ನೀಡುವುದಕ್ಕೆ 79ಎ ಮತ್ತು ಬಿ ಬಳಕೆಯಾಗುತ್ತಿರುವ ದೂರುಗಳಿವೆ. ಈ ಕಾಯ್ದೆ ಸೃಷ್ಟಿಸುತ್ತಿರುವ ಸಮಸ್ಯೆಗಳನ್ನು ಪರಿಶೀಲಿಸುವೆ ಎಂದು ಹೇಳಿದರು.
ಮಧ್ಯೆ ಪ್ರವೇಶಿಸಿದ ಪ್ರತಿಪಕ್ಷ ನಾಯಕ ಎಸ್.ಆರ್.ಪಾಟೀಲ್, 79ಎ ಹಾಗೂ ಬಿ ತಿದ್ದುಪಡಿಗೆ ನಾನಂತೂ ಒತ್ತಾಯಿಸಿಲ್ಲ, ಹೊರಗೆ ಬೇರೆ ಸಂದೇಶ ಹೋಗುತ್ತವೆ. ಕೃಷಿ ಹಿನ್ನೆಲೆ ಇಲ್ಲದವರು, ಇದ್ದೂ ದೂರ ಸರಿದವರ ಅಭಿಪ್ರಾಯಗಳು ಬೇರೆಯಾಗಿರುತ್ತವೆ ಎಂದರು. ಸಚಿವರು ಪ್ರತಿಕ್ರಿಯಿಸಿ, ನೀವು ಒತ್ತಾಯಿಸಿದ್ದಿರಿ ಎನ್ನುತ್ತಿಲ್ಲ. ಕೆಲವು ಸದಸ್ಯರು ವ್ಯಕ್ತಪಡಿಸಿದ ಅಭಿಪ್ರಾಯಗಳಿಗೆ ಉತ್ತರಿಸಿರುವೆ ಎಂದು ಸ್ಪಷ್ಟಪಡಿಸಿದರು. ಎಸ್.ರವಿ, ಟಿ.ಎ.ಶರವಣ, ರಮೇಶಗೌಡ ಸೆಕ್ಷನ್ 79ಎ ಮತ್ತು ಬಿ ಕಿತ್ತು ಹಾಕಿರಿ ಎಂದು ಒತ್ತಾಯಿಸಿದರು. ಇವೆರಡು ಕಾಯ್ದೆಗಳ ದುರ್ಲಾಭ ಪಡೆದು ಸಹಾಯಕ ಆಯುಕ್ತರ, ತಹಸೀಲ್ದಾರರು ವಸೂಲಿಗೆ ಇಳಿದಿದ್ದಾರೆ ಎಂದು ರವಿ ಆರೋಪಿಸಿದರು.
94ಸಿ, 94ಸಿಸಿ ಮತ್ತೆ ವಿಸ್ತರಣೆ
ಶಾಸಕರ ಒಕ್ಕೊರಲ ಒತ್ತಾಯದ ಮೇರೆಗೆ ಅಕ್ರಮ-ಸಕ್ರಮ ಯೋಜನೆಯನ್ನು ಮತ್ತೊಮ್ಮೆ ವಿಸ್ತರಿಸಲು ಸರ್ಕಾರ ಆಸಕ್ತಿ ತೋರಿದೆ. ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಸಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಆರ್.ಅಶೋಕ, ಸಮಸ್ಯೆ ಇರುವುದು ಗಮನಕ್ಕೆ ಬಂದಿದೆ. ಈಗಾಗಲೇ 2015ರಿಂದ ಈವರೆಗೆ 94ಸಿ ಮತ್ತು 94 ಸಿಸಿ ವಿಸ್ತರಣೆಗೆ 9 ಬಾರಿ ಅವಕಾಶ ಮಾಡಿಕೊಡಲಾಗಿತ್ತು. ಮತ್ತೆ ವಿಸ್ತರಿಸಲು ಎಲ್ಲ ಶಾಸಕರು ಒತ್ತಾಯ ಮಾಡಿದ್ದು, ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು.
ಪ್ರಸ್ತಾವಿತ ತಿದ್ದುಪಡಿಗೆ ಅಸ್ತು
‘ಕರ್ನಾಟಕ ಭೂ ಸುಧಾರಣೆಗಳ (ತಿದ್ದುಪಡಿ) ವಿಧೇಯಕ-2020’ ಉದ್ಯಮಕ್ಕೆ ಭೂಮಿ ನೀಡುವ ಪ್ರಕ್ರಿಯೆ ಸರಳೀಕರಣಗೊಳಿಸುವುದು, ಏಳು ವರ್ಷಗಳ ಬಳಿಕ ಉದ್ದೇಶಿತ ಭೂಮಿ ಅದೇ ಉದ್ದೇಶಕ್ಕಾಗಿ ಬೇರೆಯವರಿಗೆ ಹಸ್ತಾಂತರಕ್ಕೆ ಅವಕಾಶ ಕಲ್ಪಿಸಲಿದೆ. ಇದೇ ನೆಲೆಯಲ್ಲಿ ಪ್ರಸ್ತಾಪಿಸಿದ ಕರ್ನಾಟಕ ಭೂ ಸುಧಾರಣೆಗಳ ಕಾಯ್ದೆ 1961ರ ಅಧಿನಿಯಮ (1962ರ ಕರ್ನಾಟಕ ಅಧಿನಿಯಮ 10) 109ನೇ ಪ್ರಕರಣದ ತಿದ್ದುಪಡಿಗೆ ಮೇಲ್ಮನೆಯಲ್ಲಿ ಚರ್ಚೆ ಬಳಿಕ ಒಮ್ಮತದ ಒಪ್ಪಿಗೆ ನೀಡಲಾಯಿತು. ಒಪ್ಪಿತ ತಿದ್ದುಪಡಿಯು 63, 79ಎ, 79ಬಿ ಅಥವಾ 80ನೇ ಪ್ರಕರಣಗಳ ಉಪಬಂಧಗಳಿಗೆ ವಿನಾಯಿತಿ ನೀಡಿದ್ದು, ಅದಕ್ಕೂ ಸದನ ಸೈ ಎಂದಿತು. ಬಂಡವಾಳ ಹೂಡಿಕೆ, ಉದ್ಯಮ ಸ್ಥಾಪನೆಗೆ ಉತ್ತೇಜನ ಹಾಗೂ ಉದ್ಯೋಗ ಸೃಷ್ಟಿಗೆ ಅವಕಾಶ ಕಲ್ಪಿಸುವುದು ತಿದ್ದುಪಡಿ ವಿಧೇಯಕದ ಮುಖ್ಯ ಉದ್ದೇಶವಾಗಿದೆ ಎಂದು ಸಚಿವ ಆರ್.ಅಶೋಕ್ ವಿವರಿಸಿದರು.
ಪೋಡಿ ಸಮಸ್ಯೆಯಿದೆ
ಅಕ್ರಮ-ಸಕ್ರಮ ಸಮಿತಿ ಮತ್ತು ವಿವಿಧ ಯೋಜನೆ ಗಳಲ್ಲಿ ಮಂಜೂರಾಗಿರುವ ಜಮೀನಿನ ಪೋಡಿ ದುರಸ್ತಿಯಾಗಿಲ್ಲ, ವ್ಯವಸ್ಥೆ ಸರಳೀಕರಣಗೊಳಿಸಿ ಪರಿಹಾರ ಮಾಡಲಾಗುತ್ತಿದೆ ಎಂದು ಸಚಿವ ಆರ್.ಅಶೋಕ ವಿಧಾನಸಭೆಯಲ್ಲಿ ತಿಳಿಸಿದರು. ಡ್ರೋಣ್ ಮೂಲಕ ಸರ್ವೆ ನಡೆಸಲಾಗುತ್ತಿದೆ. ಆಕಾರ ಬಂದು ಮತ್ತು ಪಹಣಿಗಳಲ್ಲಿ ದಾಖಲಾಗಿರುವ ವಿಸ್ತೀರ್ಣದಲ್ಲಿ ವ್ಯತ್ಯಾಗಳಿರುವುದು, ಪಹಣಿ 3 ಮತ್ತು 9ರಲ್ಲಿ ವ್ಯತ್ಯಾಸ ಇರು ವುದು ಕಂಡುಬಂದಿದೆ. ಒಂದೇ ಜಾಗಕ್ಕೆ ಹಲವರು ಅರ್ಜಿ ಹಾಕಿದ್ದಾರೆ ಎಂದರು.
ದಲ್ಲಾಳಿಗಳ ಹಾವಳಿಯಿದೆ
ಉಪ ನೋಂದಣಾಧಿಕಾರಿ ಕಚೇರಿಗಳಲ್ಲಿ ದಲ್ಲಾಳಿ ಹಾವಳಿ ಇರುವನ್ನು ಕಂದಾಯ ಸಚಿವರೇ ವಿಧಾನಸಭೆಯಲ್ಲಿ ಖಾತ್ರಿಪಡಿಸಿದ್ದಾರೆ. ದಲ್ಲಾಳಿಗಳು ಇದ್ದಾರೆ. ದಲ್ಲಾಳಿ ಮುಕ್ತ ಮಾಡಲು ಆನ್​ಲೈನ್ ವ್ಯವಸ್ಥೆ ತರಲಾಗಿದ್ದು, ಜನ ಈ ಮಾರ್ಗದಲ್ಲಿ ಸಾಗಿದಾಗ ಸಹಜವಾಗಿ ಕಡಿಮೆಯಾಗುತ್ತದೆ ಎಂದರು. ಸಬ್ ರಿಜಿಸ್ಟರ್ ಕಚೇರಿ ದಲ್ಲಾಳಿ ಸಮಸ್ಯೆ ಪರಿಹರಿಸಲು ಆನ್​ಲೈನ್ ಮಾಡುತ್ತೀರಿ, ವಿಧಾನಸೌಧ, ವಿಕಾಸಸೌಧದಲ್ಲಿನ ದಲ್ಲಾಳಿಗಳನ್ನು ದೂರ ಮಾಡಲು ಯಾವ ಟೆಕ್ನಾಲಜಿ ತರುತ್ತೀರಾ? ಎಂದು ಬೆಳ್ಳಿಪ್ರಕಾಶ್ ಹೇಳಿದಾಗ ಸಭೆ ನಗೆಗಡಲಲ್ಲಿ ತೇಲಿತು.
ಕಲಾಪಕ್ಕೆ ಗೈರಾದ ಶಾಸಕರು
ಕರೊನಾ ಭೀತಿ ಹಿನ್ನೆಲೆಯಲ್ಲಿ ಶಾಸಕರು ಸಹ ಸದನಕ್ಕೆ ಗೈರು ಹಾಜರಾಗಿದ್ದರು. ಸೋಮವಾರ ಕೇವಲ 75 ಶಾಸಕರು ಮಾತ್ರ ಹಾಜರಿದ್ದರು. ಕಾಂಗ್ರೆಸ್-ಜೆಡಿಎಸ್ ಸೇರಿ ಪ್ರತಿಪಕ್ಷ ಸಾಲಿನಲ್ಲಿ 35 ಜನ, 12 ಸಚಿವರು ಹಾಗೂ ಬಿಜೆಪಿಯ 28 ಶಾಸಕರು ಕಲಾಪದಲ್ಲಿ ಭಾಗವಹಿಸಿದ್ದರು. ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ್ದ 10 ಶಾಸಕರ ಪೈಕಿ 6 ಜನ ಹಾಜರಿರಲಿಲ್ಲ.
ರಾಷ್ಟ್ರದಲ್ಲಿ ಕರೊನಾ ವೈರಸ್​ಗೆ 10ನೇ ಬಲಿ: ಹಿಮಾಚಲ ಪ್ರದೇಶದಲ್ಲಿ ಅಮೆರಿಕಾ ಮೂಲದ ವೃದ್ಧ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine − 7 =
Remember me
