ಬೆಂಗಳೂರು:ಸದ್ಗುರು ಶ್ರೀ ಶಂಕರಲಿಂಗ ಸರಸ್ವತಿ ಪರಮಹಂಸರ ಗುರು ಪಾದುಕಾ ಪೂಜೆ ಕಾರ್ಯಕ್ರಮವು ಜು.6,7ರ ಶನಿವಾರ ಮತ್ತು ಭಾನುವಾರ ಹಮ್ಮಿಕೊಳ್ಳಾಗಿದೆ.
ಎನ್‌ಆರ್ ಕಾಲೋನಿಯಲ್ಲಿರುವ ರಾಮಮಂದಿರದಲ್ಲಿ ಎರಡು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.ಕಾಕಡಾರತಿ,ಶ್ರೀಗುರು ಕಥಾಮೃತ ಪಾರಾಯಣ,ಗುರು ಪಾದುಕೆಗಳಿಗೆ ರುದ್ರಾಭಿಷೇಕ,ಅಖಂಡ ಗುರು ಭಜನೆ,ಅಷ್ಟಾವಧಾನ ಮೊದಲಾದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪೂಜಾ ಸಮಿತಿಯ ಎನ್.ಎಸ್.ಶ್ರೀಧರಮೂರ್ತಿ ತಿಳಿಸಿದ್ದಾರೆ.
ಸದ್ಗುರು ಶ್ರೀಶಂಕರಲಿಂಗ ಭಗವಾನರು ಮಧ್ಯ ಕರ್ನಾಟಕದಲ್ಲಿ ಅಧ್ಯಾತ್ಮಿಕ ಜಾಗೃತಿಯನ್ನು ಉಂಟು ಮಾಡಿದ ಮಹನೀಯರು. 1880ರ ಆ. 21ರಂದು ಜನಿಸಿದ ಶಂಕರಲಿಂಗ ಸರಸ್ವತಿಗಳ ಪೂರ್ವಜರು ವಿಜಯನಗರ ಸಂಸ್ಥಾನದಲ್ಲಿದ್ದರು.
ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನು ಕಳೆದು ಕೊಂಡು ಆತ್ಮಸ್ಥೈರ್ಯದಿಂದ ಜೀವನ ಸಾಗಿಸಿದ ಅವರು ಅಧ್ಯಾತ್ಮ ಕ್ಷೇತ್ರದಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದರು.ತಮ್ಮ ಎಂಟನೆಯ ವಯಸ್ಸಿನಲ್ಲಿ ಬ್ರಹ್ಮೋಪದೇಶದ ಸಂದರ್ಭದಲ್ಲಿಯೇ ಗುರುಗಳಿಂದ ಮಹಾ ಉಪದೇಶವಾಯಿತು.ಮುಂದೆ ಶಂಕರ ಭಗವಾನರು ಮತ್ತು ದತ್ತರಾಜ ಯೋಗೀಂದ್ರ ಗುರುಗಳು ಅಧ್ಯಾತ್ಮಿಕ ಹಿರಿಮೆಯ ಹಾದಿಯಲ್ಲಿ ಮುನ್ನೆಡೆಸಿದರು.ಲೋಕಿಕೆರೆಯಲ್ಲಿ ಗುರುವಾಗಿ ಪ್ರಕಟವಾಗಿ ಮಧ್ಯ ಕರ್ನಾಟಕದ ನಾಲ್ಕು ಭಾಗಗಳಲ್ಲಿ ಆಶ್ರಮವನ್ನು ಸ್ಥಾಪಿಸಿ ಅಧ್ಯಾತ್ಮದ ದೀವಿಗೆಯನ್ನು ಬೆಳಗಿದರು.ದಕ್ಷಿಣ ಭಾರತವನ್ನು ಪಾದ ಯಾತ್ರೆಯಲ್ಲಿ ಸಂಚರಿಸಿ ಜನ ಜಾಗೃತಿಯನ್ನು ಮಾಡಿದ ಶ್ರೀಯುತರು,ಶೃಂಗೇರಿಯ ಜಗದ್ಗುರುಗಳ ಆಜ್ಞೆಯಂತೆ1946ರಲ್ಲಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿದರು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × four =
Remember me
