ಬೆಂಗಳೂರು:ಫೋನ್ ಇಲ್ಲದೆ ಯಾವುದೇ ಕೆಲಸ ನಡೆಯುವುದಿಲ್ಲ. ಇಂದಿನ ಯುಗದಲ್ಲಿ ಸೆಲ್ ಫೋನ್ ಬೇಕು. ಶಾಲೆಗೆ ಹೋಗುವ ಮಕ್ಕಳಿಗೂ ಸೆಲ್ ಫೋನ್ ಬೇಕು. ಆದರೆ ಇದನ್ನು ಎಚ್ಚರಿಕೆಯಿಂದ ಬಳಸಿದರೆ ಹಲವು ಪ್ರಯೋಜನಗಳಿವೆ.. ಅಡ್ಡ ಪರಿಣಾಮಗಳೂ ಇವೆ ಎಂದು ಹೇಳುತ್ತಾರೆ ತಜ್ಞರು.
ನಿಮ್ಮ ಜೇಬಿನಲ್ಲಿ ವೈರ್ ಲೆಸ್ ನೆಟ್ವರ್ಕ್​​ಗೆ ಸಂಪರ್ಕ ಹೊಂದಿದ ಫೋನ್​​ನ್ನು ಇರಿಸಿದಾದ ದೇಹವು 2 ರಿಂದ 7 ಪಟ್ಟು ವಿಕಿರಣಗಳನ್ನು ಹೊರಬೇಕಾಗುತ್ತದೆ. ಈ ವಿಕಿರಣಗಳು ಮಾನವನ ಆರೋಗ್ಯಕ್ಕೆ ತುಂಬಾ ಹಾನಿಕಾರಕ ಅಂಶವಾಗಿದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಫೋನ್ ವಿಕಿರಣಗಳು ಕೂಡಾ ಕ್ಯಾನ್ಸರ್ ಗೆ ಕಾರಣವೆಂದು ಪರಿಗಣಿಸಲಾಗಿದೆ.
ಈ ವಿಕಿರಣಗಳು ನಿಮ್ಮ ಡಿ.ಎನ್.ಎ ರಚನೆಯನ್ನು ಸಹ ಬದಲಾಯಿಸಬಹುದು. ಈ ಕಾರಣದಿಂದ ಆರೋಗ್ಯಕ್ಕೆ ಹಲವು ಅಪಾಯಗಳು ಉಂಟಾಗಬಹುದು.ಶರ್ಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟರೆ ಅದು ಹೃದಯ ಸಂಬಂಧಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಫೋನ್ ಜೇಬಿನಲ್ಲಿ ಇಟ್ಟುಕೊಳ್ಳುವುದರಿಂದ ಅದರಿಂದ ಸೂಸುವ ವಿಕಿರಣವು ನಮ್ಮ ಮೂಳೆ ವಿಶೇಷವಾಗಿ ಸೊಂಟದ ಮೂಳೆಯನ್ನು ದುರ್ಬಲಗೊಳಿಸಬಹುದು.
ಸೆಲ್ ಫೋನ್‌ಗಳನ್ನು ಹೆಚ್ಚಾಗಿ ಬಳಸುವ ಪುರುಷರು 20 ಪ್ರತಿಶತದಷ್ಟು ಕಡಿಮೆ ವೀರ್ಯ ಸಾಂದ್ರತೆಯನ್ನು ಹೊಂದಿರುತ್ತಾರೆ. ಸೆಲ್ ಫೋನ್‌ಗಳಿಂದ ಹೊರಸೂಸುವ ರೇಡಿಯೊ ಆವರ್ತನದ ವಿದ್ಯುತ್ಕಾಂತೀಯ ಕ್ಷೇತ್ರಗಳ ಹಾನಿಕಾರಕ ಪರಿಣಾಮವು ಪುರುಷರ ಆರೋಗ್ಯದ ಮೇಲೆ, ವಿಶೇಷವಾಗಿ ಸಂತಾನೋತ್ಪತ್ತಿ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.
ಪ್ಯಾಂಟ್ ಜೇಬಿನಲ್ಲಿ ಸ್ಮಾರ್ಟ್ ಫೋನ್ ಇಟ್ಟುಕೊಳ್ಳುವುದರಿಂದ ನಿಮಗೆ ಸಯಾಟಿಕಾ ನರನೋವಿನ ಸಮಸ್ಯೆ ಉಂಟಾಗಬಹುದು. ಇದು ಸೊಂಟದ ಕೆಳಭಾಗದಿಂದ ಸೊಂಟ ಮತ್ತು ಕಾಲಿನ ನೋವು ಉಂಟು ಮಾಡಬಹುದು. ಇದರಿಂದಾಗಿ ನೀವು ಕುಳಿತುಕೊಳ್ಳುವಲ್ಲಿ ಅಥವಾ ನಡೆಯುವಲ್ಲಿ ತುಂಬಾ ನೋವನ್ನು ಅನುಭವಿಸಬಹುದು.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ. ಇವುಗಳನ್ನು ಅನುಸರಿಸುವ ಮೊದಲು ತಜ್ಞರನ್ನು ಸಂಪರ್ಕಿಸುವುದು ಉತ್ತಮ.
ಪುಟಿನ್​ ಹತ್ಯೆ ಯತ್ನದಿಂದ ಭೀಕರ ನೈಸರ್ಗಿಕ ವಿಕೋಪಗಳವರೆಗೆ! 2024ಕ್ಕೆ ಬಾಬಾ ವಂಗಾರ 7 ಭವಿಷ್ಯವಾಣಿಗಳಿವು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × three =
Remember me
