ಬೆಂಗಳೂರು:ತನ್ನ ಹೆಸರಿನ ಅಕ್ಷರ ಬದಲಾಯಿಸಿ ಭಾರತಕ್ಕೆ ಪ್ರವೇಶಿಸಲು ಮುಂದಾಗಿದ್ದ ಇರಾಕ್​ ಪ್ರಜೆಯ ಮನವಿ ತಿರಸ್ಕರಿಸಿರುವ ಹೈಕೋರ್ಟ್​, ವಿದೇಶಿಯರಿಗೆ ವೈದ್ಯಕಿಯ ವೀಸಾ ಮಂಜೂರು ಮಾಡವ ಸಂದರ್ಭದಲ್ಲಿ ಸೂಕ್ಷ್ಮವಾಗಿ ಪರಿಶೀಲಿಸಿ ಎಚ್ಚರಿಕೆಯಿಂದ ನಿರ್ಧಾರ ಕೈಗೊಳ್ಳಬೇಕು ಎಂದು ವಿದೇಶಿರ ಪ್ರಾದೇಶಿಕ ನೋಂದಣಿ ಅಧಿಕಾರಿಗೆ(ಎಫ್​ಆರ್​ಆರ್​ಒ) ನಿರ್ದೇಶಿಸಿದೆ.
ವೈದ್ಯಕಿಯ ವಿಸಾ ನೀಡುವುದಕ್ಕೆ ನಿರಾಕರಿಸಿದ್ದ ಎಫ್​ಆರ್​ಆರ್​ಒ ನಿರ್ಧಾರ ಪ್ರಶ್ನಿಸಿ ಇರಾಕ್​ನ ಬಾಗ್ದಾದ್​ ನಿವಾಸಿ ಸಗದ್​ ಕರೀಂ ಇಸ್ಮಾಯಿಲ್​ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಈ ನಿರ್ದೇಶನ ನೀಡಿದೆ.ಅಲ್ಲದೆ, ವೈದ್ಯಕಿಯ ವಿಸಾ ಪಡೆದು ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಅವರನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಆದರೆ, ಮೊದಲು ತಮ್ಮ ಹೆಸರನ್ನು ಸಜ್ಜದ್​ ಕರೀಂ ಇಸ್ಮಾಯಿಲ್​ ಎಂಬುದಾಗಿ ಇದ್ದದ್ದನ್ನು ಬಳಿಕ ಸಾಗದ್​ ಕರೀಂ ಇಸ್ಮಾಯಿಲ್​ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ ಎಂಬುದಾಗಿ ಪೀಠ ಆದೇಶದಲ್ಲಿ ವಿವರಿಸಿದೆ.
ಅವಿಶ್ವಾಸ ನಿರ್ಣಯಕ್ಕೆ ಕನಿಷ್ಠ 15 ತಿಂಗಳು ಅವಧಿ ಪೂರ್ಣವಾಗಿರಬೇಕು
ಅರ್ಜಿದಾರರು ಅವಧಿ ಮೀರಿ ನೆಲೆಸಿರುವುದ್ದರಿಂದ ನಿರ್ಗಮನ ಪರವಾನಿಗೆ ನೀಡಿ ಗಡಿಪಾರ ಮಾಡಲಾಗಿದ್ದು, ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಎರಡು ಬಾರಿ ವೈದ್ಯಕಿಯ ವೀಸಾ ನೀಡಿದ್ದು ಎರಡು ವರ್ಷಗಳಿಗಿಂತ ಹೆಚ್ಚುಕಾಲ ನೆಲೆಸಿದ್ದಾರೆ. ಇದೀಗ ಮತ್ತೊಂದು ಅವಧಿಗೆ ವಿಸಾ ಕೋರಿರುವುದನ್ನು ಪರಿಗಣಿಸಲಾಗದು ಎಂದು ಪೀಠ ತಿಳಿಸಿದೆ. ಅರ್ಜಿದಾರರು ವಿದೇಶದಲ್ಲಿ ಕುಳಿತು ತಮ್ಮ ಪರವಾಗಿ ಸ್ಪೆಷಲ್​ ಪವರ್​ ಆಫ್​​ ಅಟಾರ್ನಿ(ಎಸ್​ಪಿಎ) ಮೂಲಕ ಅರ್ಜಿ ಸಲ್ಲಿಸಿದಲ್ಲಿ ಅದನ್ನು ಕಾರ್ಯಗತಗೊಳಿಸುವುದಕ್ಕೆ ಅವಕಾಶವಿಲ್ಲ. ಕಾಯ್ದೆಯಲ್ಲಿ ಇಲ್ಲದ ಅವಕಾಶವನ್ನು ಅರ್ಜಿದಾರರ ಕೋರಿದ್ದು, ಅವರ ವಾದ ಪುರಸ್ಕಾರಾರರ್ಹವಲ್ಲ ಎಂದು ತಿಳಿಸಿ ನ್ಯಾಯಪೀಠ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 − three =
Remember me
