ಬೆಂಗಳೂರು:ಧಾರ್ವಿುಕ ಸಂಕೇತದ ವಸ್ತ್ರ ಧರಿಸಿ ಶಾಲೆಗಳಿಗೆ ಹಾಜರಾಗಬಾರ ದೆಂಬ ಹೈಕೋರ್ಟ್ ಮಧ್ಯಂತರ ಆದೇಶದ ಹೊರತಾಗಿಯೂ ರಾಜ್ಯದಲ್ಲಿ ವಸ್ತ್ರ ಸಂಘರ್ಷ ಮತ್ತೆ ಮುಂದುವರಿದಿದೆ. ಹಿಜಾಬ್ ವಿವಾದದ ಬಳಿಕ 4 ದಿನಗಳಿಂದ ಮುಚ್ಚಲಾಗಿದ್ದ 9 ಮತ್ತು 10ನೇ ತರಗತಿಗಳು ಸೋಮವಾರ ಪೊಲೀಸ್ ಭದ್ರತೆಯಲ್ಲಿ ಆರಂಭಗೊಂಡರೂ ಕೆಲವೆಡೆ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಆಗಮಿಸಿದ್ದರಿಂದ ಗೊಂದಲ, ಆತಂಕ ಮುಂದುವರಿಯಿತು. ಕೆಲ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಧರಿಸಿ ತರಗತಿಗೆ ಬರಲು ಅವಕಾಶ ಕಲ್ಪಿಸುವಂತೆ ವಿದ್ಯಾರ್ಥಿನಿಯರು ಪಟ್ಟು ಹಿಡಿದ ಪ್ರಸಂಗವೂ ನಡೆಯಿತು.
ಶಿವಮೊಗ್ಗ, ಮೈಸೂರು, ದಾವಣಗೆರೆ, ದಕ್ಷಿಣ ಕನ್ನಡ, ರಾಯಚೂರು, ಉಡುಪಿ, ಬೆಳಗಾವಿ ಸೇರಿ ರಾಜ್ಯದ ವಿವಿಧೆಡೆ ಹಿಜಾಬ್ ವಿವಾದ ಬೂದಿ ಮುಚ್ಚಿದ ಕೆಂಡದಂತಿದ್ದು, ಸಣ್ಣ-ಪುಟ್ಟ ಗಲಾಟೆ ಮುಂದುವರಿದಿವೆ. ಯಾವುದೇ ಅಹಿತಕರ ಪ್ರಕರಣ ನಡೆಯದಂತೆ ಬೆಂಗಳೂರು ಸೇರಿ ರಾಜ್ಯಾದ್ಯಂತ ಶಾಲಾ-ಕಾಲೇಜುಗಳ ಮುಂದೆ ಪೊಲೀಸರು ಬ್ಯಾರಿಕೇಡ್ ಅಳವಡಿಸಿ ಬಂದೋಬಸ್ತ್ ಕೈಗೊಂಡಿದ್ದರು. ಹಿಜಾಬ್ ಧರಿಸಿ ಶಾಲೆಗೆ ಬಂದಿದ್ದ ವಿದ್ಯಾರ್ಥಿನಿಯರಿಗೆ ಶಿಕ್ಷಕರು, ನ್ಯಾಯಾಲಯ ನೀಡಿರುವ ಮಧ್ಯಂತರ ಆದೇಶ ಹಾಗೂ ಸರ್ಕಾರದ ಸಮವಸ್ತ್ರ ಪಾಲನೆ ಆದೇಶದ ಬಗ್ಗೆ ತಿಳಿಹೇಳಿ, ಶಾಲೆಯ ಕೊಠಡಿಯಲ್ಲಿ ಹಿಜಾಬ್ ತೆಗೆಯಲು ಸೂಚಿಸಿದರು.
ನಾಳೆ ಕಾಲೇಜು ಪುನಾರಂಭ:ಹೈಕೋರ್ಟ್ ಮಧ್ಯಂತರ ಆದೇಶದಂತೆ ರಾಜ್ಯದಲ್ಲಿ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳು ಬುಧವಾರ ಪುನಾರಂಭವಾಗಲಿವೆ. ಸಿಎಂ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಸ್ತುಸ್ಥಿತಿ ಅವಲೋಕಿಸಿ, ಹೈಕೋರ್ಟ್ ಮಧ್ಯಂತರ ಆದೇಶವನ್ನು ಪಾಲಿಸಲು ನಿರ್ಧರಿಸಲಾಗಿದೆ.
ಎಲ್ಲೆಲ್ಲಿ ಏನೇನಾಯ್ತು?
ಹಿಜಾಬ್ ತೆಗೆದ ಬಳಿಕ ತರಗತಿ ಪ್ರವೇಶಕ್ಕೆ ಅವಕಾಶ ನೀಡಲಾಯಿತು. ರಾಜಧಾನಿ ಬೆಂಗಳೂರಲ್ಲಿ ಸುಸೂತ್ರವಾಗಿ ತರಗತಿಗಳು ನಡೆದಿವೆ. ಆದರೆ, ಚಂದ್ರಾ ಲೇಔಟ್​ನ ವಿದ್ಯಾಸಾಗರ ಶಾಲೆಯಲ್ಲಿ ಹಿಜಾಬ್ ವಿವಾದಕ್ಕೆ ಕಾರಣವಾದ ಶಿಕ್ಷಕಿ ಶಶಿಕಲಾ ಅಮಾನತನ್ನು ಶಾಲಾ ಆಡಳಿತ ಮಂಡಳಿ ವಾಪಸ್ ಪಡೆದಿದ್ದರೂ ಶಿಕ್ಷಕಿ ಅನಾರೋಗ್ಯದ ಕಾರಣ ನೀಡಿ ರಾಜೀನಾಮೆ ನೀಡಿದ್ದಾರೆ.
ಪರೀಕ್ಷೆ ಬಹಿಷ್ಕಾರ:ಶಿವಮೊಗ್ಗದ ಬಿ.ಎಚ್.ರಸ್ತೆಯ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ 8 ವಿದ್ಯಾರ್ಥಿನಿಯರು ಹಿಜಾಬ್ ತೆಗೆಯುವುದಕ್ಕೆ ವಿರೋಧ ವ್ಯಕ್ತಪಡಿಸಿ ಪರೀಕ್ಷೆಯನ್ನೇ ತ್ಯಜಿಸಿ ಹೊರ ನಡೆದರು.
ಶೇ.50 ಹಾಜರಾತಿ:ಸೋಮವಾರ ಶೇ.50 ವಿದ್ಯಾರ್ಥಿಗಳು ಹಾಜರಾಗಿದ್ದಾರೆ. ಈ ಪೈಕಿ 9ನೇ ತರಗತಿಗೆ ಶೇ.49.75 ಮತ್ತು 10ನೇ ತರಗತಿಗೆ ಶೇ.49.57 ವಿದ್ಯಾರ್ಥಿಗಳು ಹಾಜರಾಗಿದ್ದರು.
ವಿದ್ಯಾರ್ಥಿಗಳು, ಪಾಲಕರಿಗೆ ಶಿಕ್ಷಣ ಮುಂದುವರಿಸಬೇಕೆಂಬ ಅಪೇಕ್ಷೆಯಿದ್ದು, ಶಾಂತಿಗೆ ಭಂಗ ಉಂಟಾಗದೆಂಬ ನಂಬಿಕೆಯಿದೆ. ಆದರೂ ಕಾಲೇಜು ಆಡಳಿತ ಮಂಡಳಿ, ಪ್ರಿನ್ಸಿಪಾಲರು ಮತ್ತು ಬೋಧಕ ವರ್ಗ ತೆಗೆದುಕೊಳ್ಳುವ ನಿರ್ಧಾರಕ್ಕೆ ಪೊಲೀಸರು ಬೆಂಗಾವಲಾಗಿ ನಿಲ್ಲಲಿದ್ದಾರೆ.
| ಆರಗ ಜ್ಞಾನೇಂದ್ರಗೃಹ ಸಚಿವ
ಕೀಳು ಮಟ್ಟದ ವಿಚಾರಧಾರೆಗಳು ಬಿಜೆಪಿ ನಾಯಕರಿಗೆ ಮಾತ್ರ ಸೀಮಿತ; ಶಾಸಕ ಜಮೀರ್ ಹೇಳಿಕೆ ಖಂಡಿಸಿದ ಸುರ್ಜೇವಾಲ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen + eleven =
Remember me
