ಹಾಸನ:ಬಾಡಿಗೆದಾರರ ಕಾಟಕ್ಕೆ ಪ್ರಾಣ ಬಿಟ್ಟ ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಘಟನೆ ಹಾಸನದ ದಾಸರಕೊಪ್ಪಲಿನಲ್ಲಿ ನಡೆದಿದೆ.
ಲಲಿತಾ (55) ಮೃತ ಮಹಿಳೆ, ಲಕ್ಷಮ್ಮ (75) ಮೃತ ಲಲಿತಾ ತಾಯಿ. ಈ ಇಬ್ಬರು ಮೃತ ದುರ್ದೈವಿಗಳು. ಮಗಳ ಸಾವಿನ ಸುದ್ದಿ ಕೇಳಿ ತಾಯಿಯೂ ಸಾವನ್ನಪ್ಪಿರುವ ಘಟನೆ ದಾಸರಕೊಪ್ಪಲು ಬಡಾವಣೆಯಲ್ಲಿ ಘಟನೆ.
ಲಲಿತಾ ವಾಸಕ್ಕೆ ಹಾಗೂ ಬಾಡಿಗೆಗೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಲಲಿತಾ ಪತಿ ನಾಗರಾಜ ಜತೆ ನೆಲ ಮಹಡಿಯಲ್ಲಿ ವಾಸವಾಗಿದ್ದರು. ಮೇಲ್ಭಾಗದ ಮನೆಗಳನ್ನು ಬಾಡಿಗೆ ಮತ್ತು ಭೋಗ್ಯಕ್ಕೆ (ಲೀಸ್​​​) ನೀಡಿದ್ದರು.
ಇದನ್ನೂ ಓದಿ:ಮರಣೋತ್ತರ ಪರೀಕ್ಷೆ ವೇಳೆ ಎದ್ದು ಕುಳಿತ ಬಾಲಕಿ; ಅಚ್ಚರಿಗೊಂಡ ವೈದ್ಯ ಹೇಳಿದ್ದೇನು?
ಎರಡು ವರ್ಷದ ಹಿಂದೆ ಉದ್ದೂರು ಕೊಪ್ಪಲು ಗ್ರಾಮದ ಸುಧಾರಾಣಿ-ನಟರಾಜ ದಂಪತಿ ಐದು ಲಕ್ಷ ರೂ. ಹಣ ನೀಡಿ ಮೂರು ವರ್ಷದ ಅವಧಿಗೆ ಭೋಗ್ಯಕ್ಕೆ ಪಡೆದುಕೊಂಡಿದ್ದರು. ಒಂದು ವರ್ಷದ ನಂತರ ಸುಧಾರಣಿ-ನಟರಾಜ ವಿನಾಃ ಕಾರಣ ಮನೆ ಬಡತಿ ಲಲಿತಾ ಜತೆ ಜಗಳ ತೆಗೆಯುತ್ತಿದ್ದರು. ಈ ಬಗ್ಗೆ ಲಲಿತ ಕೇಳಿದರೆ ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದರು. ಇದೇ ವಿಚಾರಕ್ಕೆ ಒಮ್ಮೆ ಮನೆ ಒಡತಿ​​ ಮೇಲೆ ಬಾಡಿಗೆದಾರರಾದ ಸುಧಾರಾಣಿ ಮತ್ತು ನಟರಾಜ ಹಲ್ಲೆ ಮಾಡಲು ಮುಂದಾಗಿದ್ದರು.
ಜೂ.16 ರಂದು ಸುಧಾರಾಣಿ, ಸರ ಕದ್ದಿದ್ದೀಯಾ ಕಳ್ಳಿ ಎಂದು ಜಗಳ ತೆಗೆದು ಲಲಿತಾಗೆ ಬಾಯಿಗೆ ಬಂದಂತೆ ಬೈದಿದ್ದಾಳೆ. ಬೇಸರಗೊಂಡ ಮನೆ ಬಿಟ್ಟು ಹೋಗಿದ್ದ ಮನೆಯ ಒಡತಿ ಲಲಿತಾ ಬಾಡಿಗೆದಾರರ ಕಿರುಕುಳ ತಾಳಲಾರದೆ ಕಳೆನಾಶಕ ಸೇವಿಸಿ ತೋಟದಲ್ಲಿ ಬಿದ್ದಿದ್ದಾರೆ. ಇತ್ತ ಲಲಿತಾಗಾಗಿ ಪತಿ ನಾಗರಾಜ ಎಲ್ಲಾ ಕಡೆ ಹುಡುಕಾಡಿದ್ದಾರೆ. ಜೂ.17 ರಂದು ಬೆಳಿಗ್ಗೆ ನಂಜದೇವರಕಾವಲು ಗ್ರಾಮದ ಅವರ ಜಮೀನಿನಲ್ಲಿ ಕಳೆನಾಶಕ ಕುಡಿದು ಅರೆ ಪ್ರಜ್ಞಾ ಸ್ಥಿತಿಯಲ್ಲಿ ಬಿದ್ದಿದ್ದ ಲಲಿತಾ ಅವರನ್ನು ನೋಡಿದ್ದಾರೆ. ಕೂಡಲೇ ಆಸ್ಪತ್ರೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾದೇ ಜೂ.20 ರಂದು ರಾತ್ರಿ ಲಲಿತಾ ಸಾವನ್ನಪ್ಪಿದ್ದಾಳೆ.
ಇದನ್ನೂ ಓದಿ:ಶ್ರೀಗಂಧದ ಪೆಟ್ಟಿಗೆಯೊಂದಿಗೆ ದಶದಾನ ರೂಪದಲ್ಲಿ ಜೋ ಬಿಡೆನ್ ದಂಪತಿಗೆ ಪ್ರಧಾನಿ ಮೋದಿ ಕೊಟ್ರು ಸ್ಪೆಷಲ್ ಗಿಫ್ಟ್
ಬಾಡಿಗೆದಾರರ ಕಿರುಕುಳ ತಾಳಲಾರದೆ ಮಗಳು ಸಾವನ್ನಪ್ಪಿದ ಸುದ್ದಿ ಕೇಳಿ ಅಘಾತದಿಂದ ತಾಯಿ ಕೂಡ ಸಾವನ್ನಪ್ಪಿದ್ದಾಳೆ. ಲಲಿತಾ ತಾಯಿ ಲಕ್ಷಮ್ಮ (75) ನಿನ್ನೆ ಕೊನೆಯುಸಿರೆಳದಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಬಾಡಿಗೆದಾರರಾದ ನಟರಾಜ್ ಮತ್ತು ಸುಧಾರಣೆಯನ್ನು ಪೊಲೀಸರು ಬಂಧಿಸಿ ತನಿಖೆ ಮುಂದುವರೆಸಿದ್ದಾರೆ.
https://www.vijayavani.net/protest-by-businessmen-in-vijayapura-constituency-condemning-the-rise-in-electricity-prices
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 7 =
Remember me
